ರಾಜ್ಯ

ಹೆತ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಲು ತಾಯಿಯಿಂದಲೇ ಪ್ರಚೋದನೆ!

ಹೆತ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಲು ತಾಯಿಯೇ ಪ್ರಚೋದಿಸಿರುವ ಘಟನೆಯೊಂದು ಮದ್ದೂರಿನಲ್ಲಿ ನಡೆದಿದೆ...

ಹೆತ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಲು ತಾಯಿಯಿಂದಲೇ ಪ್ರಚೋದನೆ!
ಸಾಂದರ್ಭಿಕ ಚಿತ್ರ
Published On :

ಮೈಸೂರು: ಹೆತ್ತ ಮಗಳನ್ನು ವೇಶ್ಯಾವಾಟಿಕೆಗೆ ದೂಡಲು ತಾಯಿಯೇ ಪ್ರಚೋದಿಸಿರುವ ಘಟನೆಯೊಂದು ಮದ್ದೂರಿನಲ್ಲಿ ನಡೆದಿದೆ.

ಬಾಲಕಿಯ ತಾಯಿ ವೇಶ್ಯಾವಾಟಿಕೆ ನಡೆಸುತ್ತಿದ್ದು, ಶಾಲೆ ಬಿಟ್ಟಿದ್ದ ತನ್ನ ಮಗಳೂ ಕೂಡ ತನ್ನ ವೃತ್ತಿಗೆ ಸೇರಿಕೊಳ್ಳುವಂತೆ ಹೇಳಿದ್ದಾಳೆ. ಇದಕ್ಕೆ ಒಪ್ಪದ ಮಗಳು 6 ತಿಂಗಳ ಹಿಂದೆ ಗಾರ್ಮೆಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಾಳೆ. ಇದರಂತೆ ಪ್ರತೀ ದಿನ ತಾಯಿ ನೀಡುತ್ತಿದ್ದ ಹಿಂಸೆ ತಾಳಲಾರದೆ ಕಳೆದ ವರ್ಷ ಮನೆಬಿಟ್ಟು ಹೊರ ಬಂದಿದ್ದಾಳೆ.

ಇಷ್ಟಾದರೂ ಮಗಳ ಬೆನ್ನು ಬಿಡದ ತಾಯಿ ನಾಗಮ್ಮ ತನ್ನ ಸ್ನೇಹಿತರೊಂದಿಗೆ ಬಾಲಕಿ ಕೆಲಸ ಮಾಡುತ್ತಿದ್ದ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋಗಿ ಬಲವಂತೆ ಮಾಡಿದ್ದಾರೆ. ಈ ವೇಳೆ ಇಬ್ಬರ ನಡುವೆ ಜಗಳವಾಗಿದೆ. ಆದರೆ, ಸಾರ್ವಜನಿಕರು ಬಾಲಕಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಕೂಡಲೇ ಸ್ಥಳಕ್ಕಾಗಮಿಸಿರುವ ಪೊಲೀಸರು ನಾಗಮ್ಮ ಹಾಗೂ ಆಕೆಯ ಸ್ನೇಹಿತೆ ಭಾರತಿಯನ್ನು ವಶಕ್ಕೆ ಪಡೆದಿದ್ದಾರೆ. ನಾಗಮ್ಮ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ತನ್ನ ಪತ್ನಿ ವೇಶ್ಯಾವಾಟಿಕೆ ನಡೆಸುತ್ತಿರುವ ವಿಚಾರ ತಿಳಿದ ನಾಗಮ್ಮ ಅವರ ಪತಿ 8 ವರ್ಷದ ಹಿಂದೆಯೇ ಆಕೆಯನ್ನು ತೊರೆದಿದ್ದಾನೆಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಪ್ರಸ್ತುತ ನಾಗಮ್ಮ ಅವರನ್ನು ಬಂಧನಕ್ಕೊಳಪಡಿಸಿರುವ ಪೊಲೀಸರು ಬಾಲಕಿಯನ್ನು ಬಾಲ ಮಂದಿರಕ್ಕೆ ಕಳುಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.