ಮನೆ ಸುಲಿಗೆಗೆ ಬಂದ ದುಷ್ಕರ್ಮಿಗಳಿಂದ ಒಂಟಿ ಮಹಿಳೆ ಹತ್ಯೆ!
ಸುಲಿಗೆಕೋರರು ಬೆಳ್ಳಂಬೆಳಿಗ್ಗೆ ಲಕ್ಷ್ಮಿ ಮನೆಗೆ ನುಗ್ಗಿದ್ದು, ನಿಮಿಷಗಳ ಅಂತರದಲ್ಲಿ ಕೊಲೆ ಮಾಡಿ ನಂತರ ಆಭರಣಗಳನ್ನು ದೋಚಿ ಬಾಗಿಲನ್ನು ಸರಿಯಾಗಿ ಹಾಕದೆ ತರಾತರಿಯಲ್ಲಿ ಪರಾರಿಯಾಗಿದ್ದಾರೆಂದು...

ಬೆಂಗಳೂರು: ಸುಲಿಗೆಕೋರರು ಬೆಳ್ಳಂಬೆಳಿಗ್ಗೆ ಲಕ್ಷ್ಮಿ ಮನೆಗೆ ನುಗ್ಗಿದ್ದು, ನಿಮಿಷಗಳ ಅಂತರದಲ್ಲಿ ಕೊಲೆ ಮಾಡಿ ನಂತರ ಆಭರಣಗಳನ್ನು ದೋಚಿ ಬಾಗಿಲನ್ನು ಸರಿಯಾಗಿ ಹಾಕದೆ ತರಾತರಿಯಲ್ಲಿ ಪರಾರಿಯಾಗಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ನಗರದ ಬಿಇಎಂಎಲ್ ಲೇಔಟ್ ನ ಒಂಟಿ ಮಹಿಳೆ ಪ್ರಕರಣ ಕುರಿತಂತೆ ಮಾಹಿತಿ ನೀಡಿರುವ ಪೊಲೀಸರು, ಕೊಲೆ ಬೆಳಿಗ್ಗೆ ಸುಮಾರು 4.30 ರಿಂದ 6.30ರ ಸುಮಾರಿಗೆ ನಡೆದಿರಬಹುದು ಎಂದು ಶಂಕಿಸಿದ್ದಾರೆ. ಲಕ್ಷ್ಮಿ ಅವರು ಹಾಲು ಸಂಸ್ಥೆಯಿಂದಲೇ ಕೂಪನ್ ಗಳನ್ನು ಪಡೆದು ಹಾಲನ್ನು ಪ್ರತಿನಿತ್ಯ ಪಡೆದುಕೊಳ್ಳುತ್ತಿದ್ದರು. ಹಾಲು ಹಾಕಲು ಬರುತ್ತಿದ್ದ ವ್ಯಕ್ತಿ ಕೂಪನ್ ತೆಗೆದುಕೊಂಡು ಬಾಗಿಲ ಬಳಿ ಇರಿಸಲಾಗುತ್ತಿದ್ದ ಬ್ಯಾಗ್ ನಲ್ಲಿ ಹಾಲನ್ನು ಹಾಕುತ್ತಿದ್ದ.
ಆದರೆ, ಕೊಲೆಯಾದ ದಿನ ಲಕ್ಷ್ಮಿ ಅವರ ಮನೆ ಬಾಗಿಲಿನಲ್ಲಿ ಬ್ಯಾಗ್ ಗಳಾಗಲಿ, ಕೂಪನ್ ಆಗಲಿ ಇರಲಿಲ್ಲ. ಬಾಗಿಲು ಕೂಡ ಸರಿಯಾದ ರೀತಿಯಲ್ಲಿ ಹಾಕಿರಲಿಲ್ಲ ಎಂಬು ಅಂಶ ತನಿಖೆ ವೇಳೆ ತಿಳಿದುಬಂದಿದೆ. ಇದರಂತೆ ಪೊಲೀಸರು ಹಾಲು ಹಾಕುತ್ತಿದ್ದ ವ್ಯಕ್ತಿಯೊಂದಿಗೆ ವಿಚಾರಣೆ ನಡೆಸಿದ್ದು, ಬೆಳಿಗೆ ಜಾವ ಕೊಲೆ ಮಾಡಿರಬಹುದು ಎಂದು ಶಂಕಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಲಕ್ಷ್ಮಿ ಅವರ ಕುಟುಂಬಸ್ಥರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಲಕ್ಷ್ಮಿ ಅವರು ತಮ್ಮ ಮಗಳೊಂದಿಗೆ ಮನಸ್ತಾಪವನ್ನು ಹೊಂದಿದ್ದು, ಈ ಕಾರಣದಿಂದಲೇ ಅವರು ಮನೆಯೊಂದರಲ್ಲಿ ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆನ್ನಲಾಗಿದೆ. ಇನ್ನು ಲಕ್ಷ್ಮೀ ಅವರಿಗೆ ಕಿರಣ್ ಎಂಬ ಮಗನಿದ್ದು, ಕೋರಮಂಗಲದಲ್ಲಿ ನೆಲೆಸಿದ್ದಾನೆನ್ನಲಾಗಿದೆ. ಅಪರೂಪಕ್ಕೊಮ್ಮೆ ತಾಯಿಯನ್ನು ನೋಡಲು ಬರುತ್ತಿದ್ದ ಕಿರಣ್, ಪ್ರತಿನಿತ್ಯ ಫೇಸ್ ಬುಕ್ ಹಾಗೂ ವಾಟ್ಸ್ ಅಪ್ ನಲ್ಲಿ ತಾಯಿಯೊಂದಿಗೆ ಮಾತನಾಡುತ್ತಿದ್ದ ಎಂದು ತಿಳಿದುಬಂದಿದೆ. ಪ್ರಸ್ತುತ ಇಬ್ಬರ ಫೋನ್ ನ್ನು ವಶಕ್ಕೆ ಪಡೆಯಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


