ರಾಜ್ಯ

ಮನೆ ಸುತ್ತುವರೆದು, ನನ್ನ ಪತಿಯನ್ನು ಭಯೋತ್ಪಾದಕನಂತೆ ನಡೆಸಿಕೊಂಡರು!

ಮಧ್ಯರಾತ್ರಿ ಮನೆ ಸುತ್ತವರೆದು ನನ್ನ ಪತಿಯನ್ನು ಭೋಯತ್ಪಾದಕನಂತೆ ನೋಡಿದರು ಪೊಲೀಸರು ಎಂದು ಬಂಧನಕ್ಕೊಳಗಾದ ಕರ್ನಾಟಕ ರಾಜ್ಯ ಪೊಲೀಸ್ ಮಹಾಸಂಘದ...

ಮನೆ ಸುತ್ತುವರೆದು, ನನ್ನ ಪತಿಯನ್ನು ಭಯೋತ್ಪಾದಕನಂತೆ ನಡೆಸಿಕೊಂಡರು!
ಬಂಧಿತ ಕರ್ನಾಟಕ ರಾಜ್ಯ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ಅವರ ಪತ್ನಿ ಪೂರ್ಣಿಮಾ
Published On :

ಬೆಂಗಳೂರು: ಮಧ್ಯರಾತ್ರಿ ಮನೆ ಸುತ್ತವರೆದು ನನ್ನ ಪತಿಯನ್ನು ಭೋಯತ್ಪಾದಕನಂತೆ ನೋಡಿದರು ಪೊಲೀಸರು ಎಂದು ಬಂಧನಕ್ಕೊಳಗಾದ ಕರ್ನಾಟಕ ರಾಜ್ಯ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ.ಶಶಿಧರ್ ಅವರ ಪತ್ನಿ ಪೂರ್ಣಿಮಾ ಅವರು ಹೇಳಿದ್ದಾರೆ.

ತಮ್ಮ ಪತಿಯನ್ನು ಬುಧವಾರ ತಡರಾತ್ರಿ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ ಪರಿಯನ್ನು ಎಳೆಎಳೆಯಾಗಿ ಮಾಧ್ಯಮಗಳ ಬಳಿ ಬಿಚ್ಚಿಟ್ಟಿರುವ ಪೂರ್ಣಿಮಾ ಅವರು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ. ಸುಮಾರು 30 ಜನರದ್ದ ಪೊಲೀಸರ ತಂಡ ಮಧ್ಯರಾತ್ರಿ 12.30ರ ಸುಮಾರಿಗೆ ಮನೆಯನ್ನು ಸುತ್ತುವರೆದಿದ್ದರು.

ನಾಯಿಗಳು ಬೊಗಳುತ್ತಿರುವುದನ್ನು ನೋಡಿ ಕಳ್ಳರು ಬಂದರಬಹುದು ಎಂದು ತಿಳಿದಿದ್ದೆವು. ಪೊಲೀಸರು ಬಾಗಿಲನ್ನು ಜೋರಾಗಿ ಬಡಿದರು. ಈ ವೇಳೆ ಬೆಳಿಗ್ಗೆ ನಾವೇ ಠಾಣೆಗೆ ಬರುತ್ತೇವೆಂದರೂ ಕೇಳಲಿಲ್ಲ. ಮನೆ ಒಳ ನುಗ್ಗಿದ್ದ ಅವರು ಮನೆಯ ರೂಮಿನ ಬಾಗಿಲನ್ನು ಹೊಡೆದು ನನ್ನ ಪತಿಯನ್ನು ಎಳೆದುಕೊಂಡು ಹೋದರು. ನನ್ನ ಪತಿಯನ್ನು ಪೊಲೀಸರು ಭಯೋತ್ಪಾದಕನಂತೆ ನೋಡಿದರು ಎಂದು ಹೇಳಿದ್ದಾರೆ.

ಕೆಲವು ಪೊಲೀಸರು ಕಾಂಪೌಂಡ್ ನಿಂದ ಜಿಗಿದು ಒಳ ಬರುತ್ತಿದ್ದರು. ಇನ್ನು ಕೆಲ ಪೊಲೀಸರು ಕಿಟಕಿಯಿಂದ ಒಳ ನೋಡುತ್ತಿದ್ದರು. ಪೊಲೀಸರ ವರ್ತನೆಯನ್ನು ನೋಡಿ ಗಾಬರಿಯಾಯಿತು. ಮನೆಗೆ ಬಂದಾಗ ಪೊಲೀಸರ ಯಾವ ಕಾರಣಕ್ಕೆ ನನ್ನ ಪತಿಯನ್ನು ಬಂಧಿಸುತ್ತಿದ್ದಾರೆಂಬುದನ್ನು ತಿಳಿಸಲಿಲ್ಲ.

ಮನೆಗೆ ಬಂದು ನನ್ನ ಮಗನ್ನು ತಳ್ಳಿದರು. ಅಲ್ಲದೆ, ಮನೆಯಲ್ಲಿದ್ದ ಕಂಪ್ಯೂಟರ್, ಲ್ಯಾಪ್ ಟ್ಯಾಪ್, ಮೊಬೈಲ್ ಫೋನ್ ಗಳು ಮತ್ತು ಇನ್ನಿತರೆ ದಾಖಲೆಗಳನ್ನು ಕೊಂಡೊಯ್ದರು.

ನನ್ನ ಪತಿ ಪೊಲೀಸರ ಕಲ್ಯಾಣಕ್ಕಾಗಿ ಹೋರಾಟ ಮಾಡುತ್ತಿದ್ದಾರೆ. ಇದೀಗ ಇದೇ ಪೊಲೀಸರೇ ಅವರನ್ನು ಭಯೋತ್ಪಾದಕನಂತೆ ನೋಡಿ ಬಂಧನಕ್ಕೊಳಪಡಿಸುತ್ತಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.