ರಾಜ್ಯ

ನಸುಕಿನ ಜಾವ 2 ಗಂಟೆಗೆ ಮಳೆ; 4 ಗಂಟೆಗೆ ಪ್ರವಾಹ

ಬೆಂಗಳೂರು ನಗರದ ಹಲವು ಪ್ರದೇಶಗಳು ನಿನ್ನೆ ಅಕ್ಷರಶಃ ನೆರೆ ಪೀಡಿತವಾಗಿತ್ತು. ನಿನ್ನೆ ಬೆಳಗ್ಗಿನ ಜಾವದಲ್ಲಿ ದಕ್ಷಿಣ ಬೆಂಗಳೂರಿನ...

ನಸುಕಿನ ಜಾವ 2 ಗಂಟೆಗೆ ಮಳೆ; 4 ಗಂಟೆಗೆ ಪ್ರವಾಹ
ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡ ಜನ
Published On :
ಬೆಂಗಳೂರು: ಬೆಂಗಳೂರು ನಗರದ ಹಲವು ಪ್ರದೇಶಗಳು ನಿನ್ನೆ ಅಕ್ಷರಶಃ ನೆರೆ ಪೀಡಿತವಾಗಿತ್ತು. ನಿನ್ನೆ ಬೆಳಗ್ಗಿನ ಜಾವದಲ್ಲಿ ದಕ್ಷಿಣ ಬೆಂಗಳೂರಿನ ಸುಮಾರು 500 ಕುಟುಂಬಗಳು ಪ್ರವಾಹದಲ್ಲಿ ಸಿಲುಕಿ ಹಾಕಿಕೊಂಡಿದ್ದರು.
ರಸ್ತೆಯಿಂದ 4 ಅಡಿಯವರೆಗೆ ನೀರು ಏರಿಕೆಯಾಗಿದ್ದು, ಕೋಡಿಚಿಕ್ಕನಹಳ್ಳಿ, ಹುಳಿಮಾವು, ಅನುಗ್ರಹ ಲೇ ಔಟ್, ದಿಯೊ ಎನ್ ಕ್ಲೇವ್, ಅಕ್ಷಯ್ ನಗರ್, ಹೆಚ್ ಎಸ್ ಆರ್ ಲೇ ಔಟ್ ಮೊದಲಾದ ಕಡೆಗಳಲ್ಲಿ ಮನೆಯೊಳಗೆ ನೀರು ನುಗ್ಗಿವೆ. ಬಿಬಿಎಂಪಿ ಸಿಬ್ಬಂದಿಯೊಂದಿಗೆ ಅಗ್ನಿಶಾಮಕ ದಳದವರು ದೋಣಿಗಳ ಸಹಾಯದಿಂದ 600ಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಿದರು.
ನಿನ್ನೆ ಮಧ್ಯರಾತ್ರಿ ಕಳೆದು ನಸುಕಿನ ಜಾವ 2 ಗಂಟೆಗೆ ಸುರಿಯಲು ಆರಂಭವಾದ ಮಳೆ ಮಧ್ಯಾಹ್ನದವೆರೆಗೂ ಬೀಳುತ್ತಿತ್ತು. ಬೆಳಗ್ಗೆ ಎದ್ದು ನೋಡುವಾಗ ಮನೆ ಮುಂದೆ ಪ್ರವಾಹ ಉಂಟಾಗಿದ್ದನ್ನು ನೋಡಿ ಜನರು ಆತಂಕಕ್ಕೀಡಾದರು. 
''ನಾನು ನಸುಕಿನ ಜಾವ 2 ಗಂಟೆಗೆ ಎದ್ದಾಗ ಹೊರಗೆ ಮಳೆ ಸುರಿಯುತ್ತಿತ್ತು. 4 ಗಂಟೆಯ ಹೊತ್ತಿಗೆ ಪ್ರವಾಹ ಉಂಟಾಗಿ ಕೆಲವರ ಮನೆಯೊಳಗೆ ನೀರು ನುಗ್ಗಿತು. ನಾನು ಸಹಾಯಕ್ಕಾಗಿ ಅಗ್ನಿಶಾಮಕ ದಳದವರಿಗೆ ಫೋನ್ ಮಾಡಿದೆ. ನಮ್ಮ ಮನೆ ತಗ್ಗು ಪ್ರದೇಶದಲ್ಲಿದೆ. ನೀರು ತುಂಬಿದ್ದರಿಂದ ನನ್ನ ಪೋಷಕರೊಂದಿಗೆ ಮಹಡಿಗೆ ಹೋಗಿ ರಕ್ಷಣಾ ತಂಡ ಬರುವವರೆಗೂ ಕಾದು ಕುಳಿತೆವು ಎನ್ನುತ್ತಾರೆ ಟೆಲಿಕಾಂ ಸಲಹೆಗಾರ ದಿಯೊ ಎನ್ ಕ್ಲೇವ್ ನಲ್ಲಿ ವಾಸಿಸುತ್ತಿರುವ ಗುರು ಪ್ರಸಾದ್. 
ಕೋಡಿಚಿಕ್ಕನಹಳ್ಳಿಯಲ್ಲಿ ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಅನೂಪ್, ನೀರು ನೆಲಮಾಳಿಗೆ ಮತ್ತು ತಮ್ಮ ಕಾರಿನೊಳಗೆ ಕೂಡ ಪ್ರವೇಶಿಸಿತು ಎನ್ನುತ್ತಾರೆ.
ನನ್ನ ಕಾರನ್ನು ಹೊರತೆಗೆಯಲು ಸಾಧ್ಯವಾಗಲಿಲ್ಲ. ಮನೆಯಲ್ಲಿ ಕೂಡ ವಿದ್ಯುತ್ ಇರಲಿಲ್ಲ ಎನ್ನುತ್ತಾರೆ.
ಬೆಳಗ್ಗೆ 6 ಗಂಟೆ ಹೊತ್ತಿಗೆ ಅಗ್ನಿಶಾಮಕ ದಳಕ್ಕೆ ಹಲವೆಡೆ ನೀರು ತುಂಬಿರುವ, ಪ್ರವಾಹ ಉಂಟಾಗಿರುವ ಬಗ್ಗೆ ಸಂದೇಶ ಬರಲಾರಂಭಿಸಿತು. ತೀವ್ರ ಮಳೆಯಿಂದ ಹವಾಮಾನಕ್ಕೆ ಒಗ್ಗಿಕೊಳ್ಳಲಾಗದೆ 6 ಮಂದಿ ಹಿರಿಯ ನಾಗರಿಕರನ್ನು ಆಸ್ಪತ್ರೆಗೆ ಸೇರಿಸಲಾಯಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.