ಅಂಗನವಾಡಿ ಮಕ್ಕಳಿಗೆ 'ಕೆನೆಹಾಲು' ಭಾಗ್ಯ: ಸಂಪುಟ ಸಮ್ಮತಿ
ರಾಜ್ಯದ ಅಂಗನವಾಡಿಗಳಲ್ಲಿನ ಆರು ತಿಂಗಳಿಂದ 6 ವರ್ಷಗಳ ವರೆಗಿನ ಸುಮಾರು 39 ಲಕ್ಷ ಮಕ್ಕಳಿಗೆ ಇನ್ಮುಂದೆ ಕೆನೆಸಹಿತ ಹಾಲು ವಿತರಿಸುವ ತೀರ್ಮಾನಕ್..

ಬೆಂಗಳೂರು: ರಾಜ್ಯದ ಅಂಗನವಾಡಿಗಳಲ್ಲಿನ ಆರು ತಿಂಗಳಿಂದ 6 ವರ್ಷಗಳ ವರೆಗಿನ ಸುಮಾರು 39 ಲಕ್ಷ ಮಕ್ಕಳಿಗೆ ಇನ್ಮುಂದೆ ಕೆನೆಸಹಿತ ಹಾಲು ವಿತರಿಸುವ ತೀರ್ಮಾನಕ್ಕೆ ಸಚಿವ ಸಂಪುಟ ಸಭೆ ಸಮ್ಮತಿಸಿದೆ.
ಕ್ಷೀರಭಾಗ್ಯ ಯೋಜನೆಯ ಫಲಾನುಭವಿ 1.10 ಲಕ್ಷ ಮಕ್ಕಳ ಪೈಕಿ ಅಂಗನವಾಡಿಗಳಲ್ಲಿನ 39 ಲಕ್ಷ ಮಕ್ಕಳಿಗೆ ಕೆನೆರಹಿತವಾಗಿ ವಿತರಣೆ ಮಾಡಲಾಗುತ್ತಿತ್ತು. ಆದರೆ, ಮಕ್ಕಳಲ್ಲಿ ಪೌಷ್ಟಿಕಾಂಶ ಕೊರತೆ ನಿವಾರಿಸುವ ಉದ್ದೇಶದಿಂದ ಇನ್ಮುಂದೆ ಅಂಗನವಾಡಿ ಮಕ್ಕಳಿಗೆ ಕೆನೆಸಹಿತ ಹಾಲು ವಿತರಣೆಗೆ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಉದ್ದೇಶಕ್ಕೆ 42.50 ಕೋಟಿ ರೂ. ಹೆಚ್ಚುವರಿ ವೆಚ್ಚ ಭರಿಸಲು ಸಂಪುಟ ಒಪ್ಪಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಪಡಿತರ ವ್ಯವಸ್ಥೆಯಡಿ ಅಯೋಡಿನ್ ಹಾಗೂ ಕಬ್ಬಿಣಾಂಶ ಹೊಂದಿರುವ ದ್ವಿಗುಣ ಬಲವರ್ಧಿತ ಉಪ್ಪು ವಿತರಣೆ ಮಾಡಲು ಮತ್ತು ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ 8.23 ಕೋಟಿ ರೂ. ವೆಚ್ಚದಲ್ಲಿ ಶುಚಿ ಸಂಭ್ರಮ ಹಾಗೂ ಸಿರಿಗಂಧ ಕಿಟ್‌ಗಳನ್ನು ವಿತರಣೆ ಮಾಡುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿತು.
ರಾಜ್ಯದ 182 ಉಗ್ರಾಣಗಳ ಮೇಲೆ ಸೌರ ಫಲಕ ಅಳವಡಿಸಿ ಒಟ್ಟು 162 ಮೆ.ವ್ಯಾ. ವಿದ್ಯುತ್ ಉತ್ಪಾದಿಸುವ ಪ್ರಸ್ತಾವನೆ ಸಂಪುಟದ ಮುಂದೆ ಬಂತಾದರೂ, ಈಗಾಗಲೇ ಸೌರ ಫಲಕ ಅಳವಡಿಸಲಾಗಿರುವ ಸುಮಾರು 68 ಮೆ.ವ್ಯಾ. ಸಾಮರ್ಥ್ಯದ ಸೌರ ವಿದ್ಯುತ್ ಉತ್ಪಾದನೆ ಪ್ರಸ್ತಾವನೆಗಳಿಗೆ ಮಾತ್ರ ಸಂಪುಟ ಅನುಮೋದನೆ ನೀಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


