ರಾಜ್ಯ

ಕೋಲಾರದಿಂದ ನಾಪತ್ತೆಯಾಗಿದ್ದ ಬಾಲಕಿ ಬೆಂಗಳೂರಿನ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ

ಕಳೆದ ಎರಡು ದಿನಗಳ ಹಿಂದೆ ಕೋಲಾರದಿಂದ ನಾಪತ್ತೆಯಾಗಿದ್ದ 10 ನೇ ತರಗತಿ ಬಾಲಕಿ ಬೆಂಗಳೂರಿನ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ...

ಕೋಲಾರದಿಂದ ನಾಪತ್ತೆಯಾಗಿದ್ದ ಬಾಲಕಿ ಬೆಂಗಳೂರಿನ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆ
ಹರಿ ಧರಣಿ
Published On :

ಕೋಲಾರ: ಕಳೆದ ಎರಡು ದಿನಗಳ ಹಿಂದೆ ಕೋಲಾರದಿಂದ ನಾಪತ್ತೆಯಾಗಿದ್ದ 10 ನೇ ತರಗತಿ ಬಾಲಕಿ ಬೆಂಗಳೂರಿನ ರೈಲ್ವೆ ಹಳಿ ಮೇಲೆ ಶವವಾಗಿ ಪತ್ತೆಯಾಗಿದ್ದಾಳೆ..

ಕೋಲಾರದ ಹುಣಸವಳ್ಳಿ ಗ್ರಾಮದ ಹರಿ ಧರಣಿ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ರೈಲ್ವೆ ಹಳಿ ಮೇಲೆ ಶವವಾಗಿ ಸಿಕ್ಕಿದ್ದಾಳೆ.

ಹರಿ ಧರಣಿ ಅದೇ ಗ್ರಾಮದ ಅನಿಲ್ ಎಂಬಾತನನ್ನು ಕಳೆದ 1 ವರ್ಷದಿಂದ ಪ್ರೀತಿಸುತ್ತಿದ್ದಳು, ಈ ವಿಷಯ ಆಕೆಯ ಪೋಷಕರಿಗೆ ತಿಳಿದಾಗ, ಪ್ರೇಮ ಪ್ರಕರಣಕ್ಕೆ ನಾಂದಿ ಹಾಡುವಂತೆ ಎಚ್ಚರಿಕೆ ನೀಡಿದ್ದರು.

3 ತಿಂಗಳ ಹಿಂದೆ ಮನೆ ಬಿಟ್ಟು ಹರಿ ಧರಣಿ ಬೆಂಗಳೂರಿನ ಕೃಷ್ಣರಾಜ ಪುರಂಗೆ ಬಂದಿದ್ದಳು. ಈ ವೇಳೆ ಆಕೆಯ ಮನವೊಲಿಸಿದ್ದ ಅನಿಲ್ ಆಕೆಯನ್ನು ವಾಪಾಸ್ ಮನೆಗೆ ಬಿಟ್ಟು ಬಂದಿದ್ದ. ಅನಿಲ್ ನಿಂದ ತಮ್ಮ ಮಗಳನ್ನು ದೂರ ಮಾಡಲು ನಿರ್ಧರಿಸಿದ ಪೋಷಕರು ಹುಣಸವಳ್ಳಿಯಿಂದ ಬೇರೊಂದು ಗ್ರಾಮದಲ್ಲಿ ಬಂದು ನೆಲೆಸಿದ್ದರು.

ಬುಧವಾರ ಹರಿ ಧರಣಿ ತಂದೆ, ತಮ್ಮ ಮಗಳು ಕಾಣೆಯಾಗಿದ್ದಾಳೆ, ಆಕೆಯನ್ನು ಅನಿಲ್ ಕಿಡ್ನಾಪ್ ಮಾಡಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದರೆ ಗುರುವಾರ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ.

ಬಾಲಕಿ ನಾಪತ್ತೆಯಾಗಿದ್ದ ಸಮಯದಲ್ಲಿ ಅನಿಲ್ ಊರಿನಲ್ಲಿಯೇ ಇದ್ದ. ಆತನಿಗೆ ವಿಷಯ ತಿಳಿದಿರಲಿಲ್ಲ ಎಂದು ಕೆಜಿಎಫ್ ಎಸ್ ಪಿ ಭಗವಾನ್ ದಾಸ್ ತಿಳಿಸಿದ್ದಾರೆ. ಪ್ರಕರಣದ ತನಿಖೆಗಾಗಿ ತಂಡವೊಂದನ್ನು ರಚಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.