ಪತ್ನಿಯನ್ನು ಕೊಂದು ರಕ್ತಸಿಕ್ತ ಮಚ್ಚಿನೊಂದಿಗೆ ಪೊಲೀಸರಿಗೆ ಶರಣಾದ ಪತಿ
29 ವರ್ಷದ ವ್ಯಕ್ತಿಯೊಬ್ಬ ರಕ್ತಸಿಕ್ತ ಮಚ್ಚಿನೊಂದಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯೊಳಗೆ ಹೋದಾಗ ಅಲ್ಲಿದ್ದ...

Published On :
ಬೆಂಗಳೂರು: 29 ವರ್ಷದ ವ್ಯಕ್ತಿಯೊಬ್ಬ ರಕ್ತಸಿಕ್ತ ಮಚ್ಚಿನೊಂದಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯೊಳಗೆ ಹೋದಾಗ ಅಲ್ಲಿದ್ದ ಪೊಲೀಸರು ನಿಜಕ್ಕೂ ಗಾಬರಿಯಾದರು. ಆತ ತನ್ನ ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾಗಲು ಬಂದಿದ್ದ.
ಆರೋಪಿ ಪುನೀತ್ ಕುಮಾರ್ ವೃತ್ತಿಯಲ್ಲಿ ಚಾಲಕನಾಗಿದ್ದು, ಕೆಲ ವರ್ಷಗಳ ಹಿಂದೆ ಪಲ್ಲವಿ ಎಂಬಾಕೆಯನ್ನು ವಿವಾಹವಾಗಿದ್ದ. ದಂಪತಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಕೌಟುಂಬಿಕ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದರು. ನಿನ್ನೆ ರಾತ್ರಿ ಊಟವಾದ ಬಳಿಕ ಕೌಟುಂಬಿಕ ವಿವಾದ ಸಂಬಂಧ ದಂಪತಿ ಜಗಳ ಮಾಡಿಕೊಂಡಿದ್ದರು. ಸಿಟ್ಟಿನಿಂದ ಪುನೀತ್ ಪಲ್ಲವಿ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ. ಇಂದು ನಸುಕಿನ ವೇಳೆ ರಕ್ತದ ಕಲೆಯಾಗಿದ್ದ ಮಚ್ಚು ಹಿಡಿದುಕೊಂಡು ಪೊಲೀಸರ ಮುಂದೆ ಶರಣಾಗಲು ಹಾಜರಾದ.
ಮಾಗಡಿ ರಸ್ತೆಯಲ್ಲಿರುವ ಸುಂಕದಕಟ್ಟೆಯಲ್ಲಿ ಇರುವ ಪುನೀತ್ ಮನೆಗೆ ಪೊಲೀಸರು ಭೇಟಿ ನೀಡಿದ್ದು, ಮೃತದೇಹವನ್ನು ಆಸ್ಪತ್ರೆಗೆ ವರ್ಗಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


