ಬಿಬಿಎಂಪಿಯ 1,280 ನೌಕರರ ಸಾಮೂಹಿಕ ವರ್ಗಾವಣೆಗೆ ಸಿದ್ಧತೆ
ಅನೇಕ ವರ್ಷಗಳವರೆಗೆ ಒಂದೇ ಸ್ಥಾನಕ್ಕೆ ಅಂಟಿಕೊಂಡಿದ್ದ ನೌಕರರನ್ನು ಸಾಮಾಹಿಕ ವರ್ಗಾವಣೆ ಮಾಡಲು...

Published On :
ಬೆಂಗಳೂರು: ಅನೇಕ ವರ್ಷಗಳವರೆಗೆ ಒಂದೇ ಸ್ಥಾನಕ್ಕೆ ಅಂಟಿಕೊಂಡಿದ್ದ ನೌಕರರನ್ನು ಸಾಮಾಹಿಕ ವರ್ಗಾವಣೆ ಮಾಡಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿದೆ.
ಮಹಾನಗರ ಪಾಲಿಕೆಯ ಅನೇಕ ನೌಕರರು ಒಂದೇ ಸ್ಥಳದಲ್ಲಿ ಹಲವು ವರ್ಷಗಳವರೆಗೆ ಕೆಲಸ ಮಾಡುತ್ತಿದ್ದರೆ ಪಟ್ಟಭದ್ರ ಹಿತಾಸಕ್ತಿಗಳನ್ನು ಬೆಳೆಸುತ್ತಾರೆ. ಹಾಗಾಗಿ ಪಾಲಿಕೆಯ ಕೆಲಸದಲ್ಲಿ ಹೆಚ್ಚು ಪಾರದರ್ಶಕತೆ ತರಲು ಮತ್ತು ಜನರ ಸಮಸ್ಯೆಗಳನ್ನು ಉತ್ತಮ ರೀತಿಯಲ್ಲಿ ಬಗೆಹರಿಸಲು ನೌಕರರನ್ನು ಸಾಮಾಹಿಕವಾಗಿ ವರ್ಗಾವಣೆ ಮಾಡಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಈ ಸಂಬಂಧ ಪಾಲಿಕೆಯ ಸಾವಿರದ 280 ನೌಕರರಿಗೆ ಕಡ್ಡಾಯ ವರ್ಗಾವಣೆ ಜಾರಿಮಾಡಲಾಗಿದೆ. ವರ್ಗಾವಣೆಯಾಗುವ ನೌಕರರು ತಮ್ಮ ಇಷ್ಟದ ಹುದ್ದೆಗಳನ್ನು ಆರಿಸಬಹುದು. ಈ ನಿಟ್ಟಿನಲ್ಲಿ ಸಲಹಾ ಸಮಿತಿಯನ್ನು ಬಿಬಿಎಂಪಿ ರಚಿಸಲಿದೆ. ಈ ಕುರಿತು ಈಗಾಗಲೇ ಪ್ರಕ್ರಿಯೆ ಆರಂಭಗೊಂಡಿದೆ ಎನ್ನುತ್ತಾರೆ ಮೇಯರ್ ಬಿ.ಎನ್.ಮಂಜುನಾಥ ರೆಡ್ಡಿ.
ನೌಕರರನ್ನು ಮಲ್ಲೇಶ್ವರದ ಐಪಿಪಿ ಕೇಂದ್ರಕ್ಕೆ ಕರೆಸಲಾಗುತ್ತದೆ. ಅಲ್ಲಿ ನೌಕರರ ಕೌನ್ಸೆಲಿಂಗ್ ಗೆ ನಮ್ಮ ಐಟಿ ತಂಡ ಸಾಫ್ಟ್ ವೇರ್ ನ್ನು ವಿನ್ಯಾಸಗೊಳಿಸುತ್ತಿದೆ. ನೌಕರರು ತಮ್ಮ ಸೇವಾ ಹಿರಿತನದ ಆಧಾರದಲ್ಲಿ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
ಕರ್ನಾಟಕ ನಗರಪಾಲಿಕೆ ಕಾಯ್ದೆ ಪ್ರಕಾರ, ಒಬ್ಬ ಸರ್ಕಾರಿ ನೌಕರ ಒಂದೇ ಸ್ಥಳದಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ಸಮಯ ಕೆಲಸ ಮಾಡುವ ಹಾಗಿಲ್ಲ. ಆದರೆ ಕಂದಾಯ,ಪಟ್ಟಣ ಯೋಜನೆ, ಜಾಹೀರಾತು, ಆರೋಗ್ಯ ಮೊದಲಾದ ಸ್ಥಳಗಳಲ್ಲಿ ಅನೇಕ ವರ್ಷಗಳವರೆಗೆ ಒಂದೇ ಹುದ್ದೆಯಲ್ಲಿ ಮತ್ತು ಸ್ಥಳದಲ್ಲಿದ್ದಾರೆ ಎನ್ನುತ್ತಾರೆ ಮೇಯರ್.
ಹಿರಿಯ ಐಎಎಸ್ ಅಧಿಕಾರಿ ರಶ್ಮಿ ವಿ ಅವರ ಕನಸಿನ ಕೂಸು ಈ ಸರ್ಕಾರಿ ನೌಕರರ ಸಾಮೂಹಿಕ ವರ್ಗಾವಣೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


