ರಾಜ್ಯ

ಮಗು ಅಪಹರಣ ಪ್ರಕರಣ: 14 ಗಂಟೆಗಳಲ್ಲೇ ಆರೋಪಿಗಳ ಬಂಧನ

ಚನ್ನಮ್ಮನ ಅಚ್ಚುಕಟ್ಟು ನಿವಾಸಿ ದಂಪತಿಯ ಒಂಬತ್ತು ತಿಂಗಳ ಮಗುವನ್ನು ಪ್ರಕರಣ ದಾಖಲಾದ 14 ಗಂಟೆಯಲ್ಲೇ ಪೊಲೀಸರು ಪತ್ತೆ ಹಚ್ಚಿದ್ದಾರೆ. ಉತ್ತರ ಪ್ರದೇಶ ..

ಮಗು ಅಪಹರಣ ಪ್ರಕರಣ: 14 ಗಂಟೆಗಳಲ್ಲೇ ಆರೋಪಿಗಳ ಬಂಧನ
ಅಪಹರಣವಾಗಿದ್ದ ಮಗು
Published On :

ಬೆಂಗಳೂರು: ಚನ್ನಮ್ಮನ ಅಚ್ಚುಕಟ್ಟು ನಿವಾಸಿ ದಂಪತಿಯ ಒಂಬತ್ತು ತಿಂಗಳ ಮಗುವನ್ನು ಪ್ರಕರಣ ದಾಖಲಾದ 14 ಗಂಟೆಯಲ್ಲೇ  ಪೊಲೀಸರು ಪತ್ತೆ ಹಚ್ಚಿದ್ದಾರೆ. ಉತ್ತರ ಪ್ರದೇಶ ಮೂಲದ ರಾಮು ಹಾಗೂ ಆತನ ಪತ್ನಿ ಜಾಹ್ನವಿ ಎಂಬುವರನ್ನು ಬಂಧಿಸಲಾಗಿದೆಯ

ಚನ್ನಮ್ಮನ ಅಚ್ಚುಕಟ್ಟಿನಲ್ಲಿ ನೆಲೆಸಿದ್ದ ಏರುಮಲೈ ಮತ್ತು ಸಂಧ್ಯಾ, ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಒಂಬತ್ತು ತಿಂಗಳ ಮಗು ಸೇರಿ ಇಬ್ಬರು ಗಂಡು ಮಕ್ಕಳಿದ್ದಾರೆ. ಏರುಮಲೈ ಕೂಲಿ ಕೆಲಸ ಮಾಡುತ್ತಿದ್ದು, ಸಂಧ್ಯಾ ತರಕಾರಿ ಅಂಗಡಿ ಇಟ್ಟುಕೊಂಡಿದ್ದಾರೆ’.
ಕಳೆದ ತಿಂಗಳು ಈ ದಂಪತಿ ವಾಸವಿದ್ದ ಮನೆಯ ಪಕ್ಕದ ಮನೆಗೆ ರಾಮು ಹಾಗೂ ಜಾಹ್ನವಿ ಬಾಡಿಗೆಗೆ ಬಂದಿದ್ದರು. ಈ ವೇಳೆ ಪರಸ್ಪರ ಪರಿಚಯವಾಗಿ ಆತ್ಮೀಯತೆ ಬೆಳೆದಿತ್ತು.

ಸಂಧ್ಯಾ ಅವರಿಗೆ ಹೊಲಿಗೆ ಯಂತ್ರದ ಆಸೆ ತೋರಿಸಿದ್ದ ರಾಮು ಹಾಗೂ ಜಾಹ್ನವಿ, ಯಂತ್ರ ಖರೀದಿಸುವುದಕ್ಕಾಗಿ ಭಾನುವಾರ ಸಂಜೆ  ಕಾಟನ್‌ಪೇಟೆಯ ಮಾರುಕಟ್ಟೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ  ಸಂಧ್ಯಾ ಅವರೊಂದಿಗೆ ಮಗು ಸಹ ಇತ್ತು. ಹೊಲಿಗೆ ಯಂತ್ರ ಖರೀದಿ ಬಳಿಕ ಸಂಧ್ಯಾಳನ್ನು ಆಟೊದಲ್ಲಿ ಹತ್ತಿಸಿದ್ದ ಆರೋಪಿಗಳು, ನೀವು ಯಂತ್ರವನ್ನು ಸುರಕ್ಷಿತವಾಗಿ ತೆಗೆದುಕೊಂಡು ಹೋಗಿ, ನಾವು ಮಗುವನ್ನು ಕರೆದುಕೊಂಡು ಬರುತ್ತೇವೆ ಎಂದು ಹೇಳಿದ್ದರು. ಸಂಧ್ಯಾ ಮನೆಗೆ ಹೋದರೂ ರಾತ್ರಿ 11 ಗಂಟೆಯಾದರೂ ದಂಪತಿಯ ಪತ್ತೆ ಇರಲಿಲ್ಲ. ಮೊಬೈಲ್‌ಗೆ ಕರೆ ಮಾಡಿದಾಗ ಸ್ವಿಚ್‌ ಆಫ್‌ ಆಗಿತ್ತು. ಬಳಿಕ ಠಾಣೆಗೆ  ಸಂಧ್ಯಾ ದೂರು ನೀಡಿದ್ದರು.

ದಂಪತಿಯು ಚನ್ನಮ್ಮನ ಅಚ್ಚುಕಟ್ಟಿನಲ್ಲಿದ್ದ ಮನೆಯನ್ನು ಕೆಲ ದಿನಗಳ ಹಿಂದೆಯೇ ಖಾಲಿ ಮಾಡಿ ಕೆಂಗೇರಿಗೆ ಸ್ಥಳಾಂತರಗೊಂಡಿದ್ದರು ಎಂದು ತನಿಖಾಧಿಕಾರಿ ತಿಳಿಸಿದರು. ಅಪಹರಿಸಿದ್ದ ಮಗುವನ್ನು ಕೆಂಗೇರಿಯ ಬಾಡಿಗೆ ಮನೆಗೆ ಕರೆದೊಯ್ದಿದ್ದ ದಂಪತಿ, ಅಲ್ಲಿಯೇ ಆರೈಕೆ ಮಾಡುತ್ತಿದ್ದರು. ಮನೆ ಸ್ಥಳಾಂತರ ವೇಳೆ ವಸ್ತುಗಳನ್ನು ಸಾಗಿಸಿದ್ದ ಲಾರಿ ಚಾಲಕನನ್ನು ಪತ್ತೆ ಹಚ್ಚಿ ವಿಚಾರಣೆಗೆ ಒಳಪಡಿಸಿದಾಗ ಆರೋಪಿಗಳು ಇರುವ ಜಾಗ ಪತ್ತೆಯಾಗಿದೆ.  ದಂಪತಿಗೆ ಮದುವೆಯಾಗಿ 20 ವರ್ಷವಾಗಿದ್ದರೂ ಮಕ್ಕಳಾಗಿಲ್ಲ. ಹೀಗಾಗಿ ಮಗುವನ್ನು ಅಪಹರಣ ಮಾಡಿದ್ದರ  ಎಂದು ತನಿಖಾಧಿಕಾರಿ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.