ರಾಜ್ಯ

ಬ್ಯಾಟರಾಯನಪುರ ವೃದ್ಧ ದಂಪತಿ ಕೊಲೆ ಪ್ರಕರಣ: ಪೊಲೀಸರಿಂದ ಓರ್ವನ ಬಂಧನ

ಕೊಡಿಗೆಹಳ್ಳಿ ಸಮೀಪದ ಬ್ಯಾಟರಾಯನಪುರದಲ್ಲಿ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ..

ಬ್ಯಾಟರಾಯನಪುರ ವೃದ್ಧ ದಂಪತಿ ಕೊಲೆ ಪ್ರಕರಣ: ಪೊಲೀಸರಿಂದ ಓರ್ವನ ಬಂಧನ
ಆರ್ ಮುನಿಯಪ್ಪ ಮತ್ತು ವರಲಕ್ಷ್ಮಿ
Published On :

ಬೆಂಗಳೂರು: ಕೊಡಿಗೆಹಳ್ಳಿ ಸಮೀಪದ ಬ್ಯಾಟರಾಯನಪುರದಲ್ಲಿ ನಡೆದಿದ್ದ ವೃದ್ಧ ದಂಪತಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ.

ಬ್ಯಾಟರಾಯನಪುರದ ವಿನಾಯಕ ಶಾಲೆಯ ಸಮೀಪದ ಮನೆಯಲ್ಲಿ ನಡೆದಿದ್ದ ಜಿಕೆವಿಕೆ ನಿವೃತ್ತ ಉದ್ಯೋಗಿ ಮುನಿಯಪ್ಪ -ವರಲಕ್ಷ್ಮಮ್ಮ ದಂಪತಿ ಕೊಲೆಯಾಗಿತ್ತು. ಈ ಸಂಬಂಧ ದೇವನಹಳ್ಳಿ ತಾಲೂಕಿನ ಮೀಸಗಾನಹಳ್ಳಿ ನಿವಾಸಿ ವೆಂಕಟೇಶ್ ಅಲಿಯಾಸ್ ಪಿಳ್ಳಿ (22) ಬಂಧಿತ ಆರೋಪಿ.

ದಂಪತಿಯ ಮೂರನೇ ಪುತ್ರ ಪೃಥ್ವಿರಾಜ್ ಸ್ನೇಹಿತ ನಿಶಾಂತ್ ಅವರ ಮನೆಯಲ್ಲಿ ಕಾರು ಚಾಲಕನಾಗಿದ್ದ ಹಂತಕ ವೆಂಕಟೇಶ್ ಇವರ ಮನೆಗೆ ಬಂದು ಹೋಗುತ್ತಿದ್ದ. ಚೀಟಿ ಹಾಕಿದ್ದ ವೆಂಕಟೇಶ್ ಪರಿಚಿತರಿಗೆ ಜಾಮೀನು ಹಾಕಿದ್ದ. ಚೀಟಿ ಹಣ ಪಡೆದಿದ್ದ ಅವರು ಹಣ ಕಟ್ಟಿರಲಿಲ್ಲ. ದಂಪತಿಯ ಚೀಟಿ ವ್ಯವಹಾರ ನಡೆಸುತ್ತಿದ್ದರಿಂದ ಸಹಾಯ ಮಾಡುವಂತೆ ವೆಂಕಟೇಶ್ ಕೇಳಿದ್ದ, ಆದರೆ ಹಣ ನೀಡಲು ದಂಪತಿ ನಿರಾಕರಿಸಿದ್ದರು.

ನಂತರ ಕೊಲೆ ಮಾಡಲು ನಿರ್ಧರಿಸಿದ್ದ ವೆಂಕಟೇಶ್ ವರಲಕ್ಷ್ಮಮ್ಮ ಕತ್ತು ಕೊಯ್ದು ಮಾಂಗಲ್ಯ ಸರ ತೆಗೆದುಕೊಂಡು ಅಲ್ಲಿಯೇ ಬಕೆಟ್​ನಲ್ಲಿ ತೊಳೆದು ಬಾಗಿಲು ಹಾಕಿಕೊಂಡು ಹೊರಟಿದ್ದ. ಮೂರು ದಿನದವರೆಗೂ ಕೊಲೆ ಪ್ರಕರಣ ಬೆಳಕಿಗೆ ಬಂದಿರಲಿಲ್ಲ. ಚಿನ್ನದ ಸರವನ್ನು ಮಾರಾಟ ಮಾಡಿದ್ದ ವೆಂಕಟೇಶ್ ಆದ್ರೆ ಮಾಂಗಲ್ಯವನ್ನು ಮಾತ್ರ ತೆಗೆದು ಜೇಬಿನಲ್ಲಿಯೇ ಇಟ್ಟುಕೊಂಡಿದ್ದ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.