ಚಲಿಸುತ್ತಿದ್ದ ಆಟೋ ಮೇಲೆ ಬಿದ್ದ ತೆಂಗಿನ ಮರ: ಚಾಲಕ ಸಾವು
ಚಲಿಸುತ್ತಿದ್ದ ಆಟೊ ರಿಕ್ಷಾ ಮೇಲೆ ತೆಂಗಿನ ಮರ ಬಿದ್ದು, ಅದರ ಚಾಲಕ ಇಮ್ತಿಯಾಜ್ ಪಾಷಾ (45) ಎಂಬುವರು ಮೃತಪಟ್ಟ ಘಟನೆ ಬಸವನಗುಡಿಯ ...

ಬೆಂಗಳೂರು: ಚಲಿಸುತ್ತಿದ್ದ ಆಟೊ ರಿಕ್ಷಾ ಮೇಲೆ ತೆಂಗಿನ ಮರ ಬಿದ್ದು, ಅದರ ಚಾಲಕ ಇಮ್ತಿಯಾಜ್ ಪಾಷಾ (45) ಎಂಬುವರು ಮೃತಪಟ್ಟ ಘಟನೆ ಬಸವನಗುಡಿಯ ಕೆ.ಆರ್.ರಸ್ತೆಯಲ್ಲಿ ನಡೆದಿದೆ. ಆಟೋದಲ್ಲಿದ್ದ ಇಬ್ಬರು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿ ಅಪಾಯದಿಂದ ಪವಾಡ ಸದೃಶವಾಗಿ ಪಾರಾಗಿದ್ದಾರೆ.
ಜೆ.ಪಿ.ನಗರ 5ನೇ ಹಂತದ ಇಮ್ತಿಯಾಜ್, ಮಧ್ಯಾಹ್ನ 1.30 ರ ಸುಮಾರಿಗೆ ಇಬ್ಬರು ಪ್ರಯಾಣಿಕರನ್ನು ಗಾಯಿತ್ರಿ ನರ್ಸಿಂಗ್ ಹೋಂಗೆ ಕರೆದೊಯ್ಯುತ್ತಿದ್ದರು. ಅವರು ಕೆ.ಆರ್.ರಸ್ತೆಗೆ ಬರುತ್ತಿದ್ದಂತೆಯೇ ಜ್ವಾಲಾಮುಖಿ ಪ್ರಿಂಟರ್ಸ್ ಕಾಂಪೌಂಡ್ ನಲ್ಲಿದ್ದ ಮರ ಮುರಿದು ಆಟೊ ಮೇಲೆ ಬಿದ್ದಿತು ಎಂದು ಪೊಲೀಸರು ಹೇಳಿದರು.
ತಲೆ ಮೇಲೆಯೇ ಮರ ಬಿದ್ದಿದ್ದರಿಂದ ಇಮ್ತಿಯಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ತಕ್ಷಣ ಬೇರೆ ಆಟೊ ಹತ್ತಿ ಹೋಗಿದ್ದರಿಂದ ವಿಚಾರಣೆಗೆ ಸಿಗಲಿಲ್ಲ. ಆಟೋ ಹಿಂದೆ ಬರುತ್ತಿದ್ದ ಸ್ವಿಫ್ಟ್ ಕಾರು ಕೂಡ ಜಖಂಗೊಂಡಿದೆ ಎಂದು ಪೊಲೀಸರು ತಿಳಿಸಿದರು.
ನಂತರ ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ರಸ್ತೆ ಮೇಸೆ ಬಿದ್ದಮರವನ್ನು ತುಂಡುಗಳಾಗಿ ಕತ್ತರಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಜ್ವಾಲಾಮುಖಿ ಪ್ರಿಂಟರ್ಸ್ ಮಾಲೀಕರ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


