ಮಾವು ಬೆಳಗಾರರಿಗೂ ಒಲಿದು ಬಂತು ವಿದೇಶಕ್ಕೆ ಹಾರುವ ಭಾಗ್ಯ
ಸದಾಕಾಲ ಭೂಮಿ, ಬೆಳೆ ಎಂಬ ಚಿಂತೆಯಲ್ಲೇ ಇರುವ ರೈತರಿಗೆ ಇದೀಗ ವಿದೇಶಕ್ಕೆ ಹಾರುವ ಭಾಗ್ಯ ಒಲಿದು ಬಂದಿದ್ದು, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು 35 ಮಾವು ಬೆಳೆಗಾರರನ್ನು...

ಬೆಂಗಳೂರು: ಸದಾಕಾಲ ಭೂಮಿ, ಬೆಳೆ ಎಂಬ ಚಿಂತೆಯಲ್ಲೇ ಇರುವ ರೈತರಿಗೆ ಇದೀಗ ವಿದೇಶಕ್ಕೆ ಹಾರುವ ಭಾಗ್ಯ ಒಲಿದು ಬಂದಿದ್ದು, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮವು 35 ಮಾವು ಬೆಳೆಗಾರರನ್ನು ವಿದೇಶ ಪ್ರವಾಸಕ್ಕೆ ಕರೆದೊಯ್ಯಲು ತೀರ್ಮಾನಿಸಿದೆ.
ರಾಜ್ಯದ 35 ಮಾವು ಬೆಳೆಗಾರರನ್ನು ಚೀನಾ, ಇಂಡೋನೇಷ್ಯಾ ಪ್ರವಾಸಕ್ಕೆ ಕರೆದೊಯ್ಯಲು ನಿಗಮ ತೀರ್ಮಾನಿಸಿದ್ದು, ಮಾವು ಆಧುನಿಕ ಬೇಸಾಯ ಮತ್ತು ಮಾರುಕಟ್ಟೆ ವಿಸ್ತರಣೆ ಬಗ್ಗೆ ರೈತರಿಗೆ ಅರಿವು ಹಾಗೂ ಮಾಹಿತಿ ನೀಡುವ ಉದ್ದೇಶದಿಂದ ಪ್ರವಾಸವನ್ನು ಹಮ್ಮಿಕೊಂಡಿರುವುದಾಗಿ ನಿಗಮ ಮಾಹಿತಿ ನೀಡಿದೆ.
ಹೆಚ್ಚು ಮಾವು ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ತಲಾ ಇಬ್ಬರು ರೈತರು ಹಾಗೂ ಇನ್ನಿತರೆ ಜಿಲ್ಲೆಗಳಿಂದ ಒಬ್ಬೊಬ್ಬರು ರೈತರನ್ನು ಪ್ರವಾಸಕ್ಕೆ ಕರೆಯ್ಯುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದೆ. ಪ್ರವಾಸಕ್ಕೆ ಕರೆದೊಯ್ಯುವ ರೈತರ ಪಟ್ಟಿ ಜುಲೈ 3ನೇ ವಾರದೊಳಗಾಗಿ ಅಂತಿಮಗೊಳ್ಳಲಿದ್ದು, ಜಿಲ್ಲಾ ಉಸ್ತುವಾರಿ ಸಚಿವರ ಶಿಫಾರಸ್ಸು ಇರುವ ಮಾವು ಬೆಳೆಗಾರರು ವಿದೇಶ ದರ್ಶನ ಭಾಗ್ಯ ಪಡೆಯಲಿದ್ದಾರೆಂದು ಕೆಎಸ್ ಎಂಡಿಎಂಸಿ ಮುಖ್ಯಸ್ಥೆ ಕಮಲಾಕ್ಷಿ ರಾಜಣ್ಣ ಅವರು ಹೇಳಿದ್ದಾರೆ.
ಮಾವು ಬೆಳೆಯಲ್ಲಿ ಭಾರತ ಮುಂದಿದ್ದು, ಚೀನಾ ಕೂಡ ಭಾರತದ ನಂತರ ಹೆಚ್ಚು ಮಾವು ಬೆಳೆಯುವ ದೇಶಾವಾಗಿದೆ. ಆದರೆ, ಆಧುನಿಕ ತಂತ್ರಜ್ಞಾನದಲ್ಲಿ ಚೀನಾ ಮುಂದಿದೆ. ಪ್ಯಾಕ್ ಮಾಡುವುದು, ಬೆಳೆ ಬೆಳೆಯುವುದರಲ್ಲಿ ಅವರು ಮುಂದಿದ್ದಾರೆ. ನಮ್ಮ ರೈತರು ಕೂಡ ಮುಂದುವರೆಯಬೇಕು. ಪ್ರವಾಸದ ಎಲ್ಲಾ ರೀತಿಯ ಹಣವನ್ನು ಕೆಎಸ್ ಎಂಡಿಎಂಸಿ ನೋಡಿಕೊಳ್ಳಲಿದೆ. ರೈತರು ವಿದೇಶಕ್ಕೆ ಹಾರುವ ವ್ಯವಸ್ಥೆ ನಿರ್ಮಾಣವಾಗಿರುವುದು ಇದೇ ಮೊದಲು. 8 ದಿನಗಳ ಕಾಲ ಪ್ರವಾಸವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರೈತರ ಆಯ್ಕೆ ವಿಚಾರ ಸಾಕಷ್ಟು ಸಂಕಷ್ಟವನ್ನುಂಟು ಮಾಡುತ್ತಿದೆ. ಹೀಗಾಗಿ ಜಿಲ್ಲೆಯನ್ನು ಆಧಾರಿಸಿ ಒಂದೊಂದು ಜಿಲ್ಲೆಯಲ್ಲಿ ಇಂತಿಷ್ಟು ರೈತರು ಎಂದು ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಆಯ್ಕೆ ವೇಳೆ ರೈತರೇನಾದರೂ ಸಚಿವರು ಹಾಗೂ ಶಾಸಕರ ಪ್ರಭಾವವನ್ನು ತಂದುಬಿಟ್ಟರೆ ಎಂಬ ಭಯ ಅಧಿಕಾರಿಗಳಿಗೆ ಎದುರಾಗಿದೆ. ಪ್ರವಾಸದಿಂದ ಬಂದ ಕೂಡಲೇ ರೈತರಿಗೆ ತರಬೇತಿಯನ್ನು ನೀಡಲು ನಿಗಮ ಯೋಜನೆ ರೂಪಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


