ರಾಜ್ಯ

ರಾಮನಗರ: ಚನ್ನಪಟ್ಟಣ ತಹಶೀಲ್ದಾರ್ ತಾಯಿಯ ಭೀಕರ ಹತ್ಯೆ

ತಹಸೀಲ್ದಾರ್‌ ರಮೇಶ್‌ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರ ತಾಯಿಯನ್ನು ಹತ್ಯೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ..

ರಾಮನಗರ: ಚನ್ನಪಟ್ಟಣ ತಹಶೀಲ್ದಾರ್ ತಾಯಿಯ ಭೀಕರ ಹತ್ಯೆ
ಸಾಂದರ್ಭಿಕ ಚಿತ್ರ
Published On :

ರಾಮನಗರ: ತಹಸೀಲ್ದಾರ್‌ ರಮೇಶ್‌ ಮನೆಗೆ ನುಗ್ಗಿದ ದುಷ್ಕರ್ಮಿಗಳು ಅವರ ತಾಯಿಯನ್ನು ಹತ್ಯೆ ಮಾಡಿ ಆಕೆಯ ಮೈಮೇಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.  

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ತಹಶೀಲ್ದಾರ್  ಗೃಹಕಚೇರಿಯಲ್ಲೇ ರಮೇಶ್ ಅವರ ತಾಯಿ ಪುಟ್ಟಲಿಂಗಮ್ಮ ಉರುಫ್ ತಾಯಕ್ಕ(65) ಕೊಲೆಯಾಗಿದೆ. ಸಂಜೆ ತಹಶೀಲ್ದಾರ್ ರಮೇಶ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಪುಟ್ಟಲಿಂಗಮ್ಮ ಅವರ ಮೈಮೇಲೆ ಗಾಯದ ಗುರುತುಗಳಿದ್ದು, ಅವರು ಅಡುಗೆ ಕೋಣೆಯಲ್ಲಿ ಶವವಾಗಿ ಬಿದ್ದಿದ್ದರು.

ಮೃತ ತಾಯಕ್ಕ ಕೈಯಲ್ಲಿ ಕೂದಲು ಸಿಕ್ಕಿದ್ದು, ಹೊರ ಹೋಗುವಾಗ ಗೋಡೆ ಮೇಲಾದ ರಕ್ತದ ಕಲೆಗಳು ಸಾಕ್ಷಿಯಾಗಿದೆ. ಜೊತೆಗೆ ಮನೆ ಎದುರಿಗಿರುವ ಮಣಪ್ಪುರಂ ಗೋಲ್ಡ್‌ಲೋನ್ ಕಂಪನಿಯ ಸಿಸಿ ಕ್ಯಾಮೆರಾದಲ್ಲಿ ಕೆಲವರ ಚಲನವಲನಗಳು ದಾಖಲಾಗಿದ್ದು, ಫೂಟೇಜ್ ಸಿಕ್ಕಿದೆ ಎನ್ನಲಾಗಿದೆ.

ಕೊಲೆ ನಡೆದ ಸಂದರ್ಭದಲ್ಲಿ ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ, ಹಣಕ್ಕಾಗಿ ಕೊಲೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಬೆನ್ನು ಹತ್ತಿರುವ ಪೋಲೀಸರು ಕೂಡಲೇ ಹಂತಕರನ್ನು ಪತ್ತೆಹಚ್ಚಲು ತಂಡ ರಚಿಸಿದ್ದಾರೆ. ತನಿಖೆ ನಂತರವಷ್ಟೇ ಎಲ್ಲದಕ್ಕೂ ಉತ್ತರ ದೊರೆಯಲಿದೆ ಎಂದು ಎಸ್ಪಿ ಡಾ. ಚಂದ್ರಗುಪ್ತ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.