ಅನಿಶ್ಚಿತತೆಯಲ್ಲಿ ಮೆಟ್ರೋ ನಿಲ್ದಾಣಗಳಲ್ಲಿ ಬಾಡಿಗೆಗೆ ಬೈಕ್ ಯೋಜನೆ
ಕಳೆದ ಮೇ 21ರಂದು ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಆರಂಭಗೊಂಡ 'ಬಾಡಿಗೆಗೆ ಬೈಕ್' ಯೋಜನೆ ನಗರದ 5 ಮೆಟ್ರೋ...

Published On :
ಬೆಂಗಳೂರು: ಕಳೆದ ಮೇ 21ರಂದು ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಆರಂಭಗೊಂಡ 'ಬಾಡಿಗೆಗೆ ಬೈಕ್' ಯೋಜನೆ ನಗರದ 5 ಮೆಟ್ರೋ ನಿಲ್ದಾಣಗಳಲ್ಲಿ ಕಾರ್ಯನಿರ್ವಹಿಸಬೇಕಾಗಿದ್ದು, ಮೂರು ಸ್ಟೇಷನ್ ಗಳಲ್ಲಿ ಮಾತ್ರ ಆರಂಭವಾಗಬೇಕಾಗಿದೆ.
ಕಾರಣ: ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣದವರೆಗೆ ಕೆಲವೊಮ್ಮೆ ಬಹಳ ದೂರದವರೆಗೆ ನಡೆದುಕೊಂಡು ಹೋಗಬೇಕಾಗುತ್ತದೆ, ಬಾಡಿಗೆ ಆಟೋ ಹಿಡಿಯಲು ಕಷ್ಟವಾಗುತ್ತದೆ, ಕೆಲವೊಮ್ಮೆ ಆಟೋಗಳು ಕರೆದಲ್ಲಿಗೆ ಬರುವುದಿಲ್ಲ, ಈ ಎಲ್ಲ ತೊಂದರೆಗಳಿಂದ ಪ್ರಯಾಣಿಕರನ್ನು ಬಚಾವ್ ಮಾಡಲು ಮೆಟ್ರೋ ನಿಲ್ದಾಣದಿಂದ ಪ್ರಯಾಣಿಕರಿಗೆ ಬಾಡಿಗೆಗೆ ಬೈಕ್ ಸೇವೆ ಒದಗಿಸುವ ಘೋಷಣೆ ಮಾಡಿತ್ತು. ಅದರಂತೆ Wickedride Adventure Services Pvt Ltd ನ ಮೂವರು ಯುವಕರು ಬಾಡಿಗೆಗೆ ಬೈಕ್ ಯೋಜನೆ ಆರಂಭಿಸಿದ್ದರು. ಆದರೆ ಇದುವರೆಗೆ ಯೋಜನೆ ನಿರೀಕ್ಷಿತ ಫಲಿತಾಂಶ ನೀಡಿಲ್ಲ.
ಪ್ರಸ್ತುತ ಟ್ರಿನಿಟಿ ಮೆಟ್ರೋ ಸ್ಟೇಷನ್ ನಲ್ಲಿ ಬಾಡಿಗೆಗೆ 10 ಬೈಕ್ ಗಳು ಪ್ರಯಾಣಿಕರಿಗೆ ಲಭ್ಯವಿದೆ. ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 40 ಸಿಗುತ್ತವೆ. ಮೇ 28ರಂದು ಇಂದಿರಾನಗರ ನಿಲ್ದಾಣದಲ್ಲಿ ಆರಂಭವಾಗಬೇಕಾಗಿದ್ದ ಸೇವೆ ಇನ್ನೂ ಆರಂಭವಾಗಿಲ್ಲ. ಪೀಣ್ಯ ಮತ್ತು ಸಂಪಿಗೆ ರಸ್ತೆ ಮಂತ್ರಿ ಮಾಲ್ ಸ್ಟೇಷನ್ ನಲ್ಲಿ ಜೂನ್ ಆರಂಭ ವಾರದಲ್ಲಿ ಆರಂಭವಾಗಬೇಕಿದ್ದ ಸೇವೆ ಇನ್ನೂ ಆರಂಭಗೊಂಡಿಲ್ಲ. ಮೆಟ್ರೋದ ಕೈಪಿಡಿಯಲ್ಲಿ ಈ ಐದು ನಿಲ್ದಾಣಗಳಲ್ಲಿ ಬಾಡಿಗೆಗೆ ಬೈಕ್ ಸಿಗುತ್ತದೆ ಎಂದು ಪ್ರಕಟಿಸಲಾಗಿದೆ.
ಈ ಬಗ್ಗೆ ಕಂಪೆನಿಯವರನ್ನು ವಿಚಾರಿಸಿದಾಗ, ವಿಕೆಡ್ರೈವ್ ನ ಸಹ ಸ್ಥಾಪಕ ಜಿ.ಅನಿಲ್, '' ಬೈಕ್ ತಯಾರಿಕೆಗೆ ನಾವು ಆರ್ಡರ್ ನೀಡಿದ್ದು, ಸಿದ್ಧವಾದ ಕೂಡಲೇ ಎಲ್ಲಾ 5 ಸ್ಟೇಷನ್ ಗಳಲ್ಲಿ ಪ್ರಾರಂಭಿಸುತ್ತೇವೆ. ಬೈಕ್ ಗಳ ಡೆಲಿವರಿಯಲ್ಲಿ ವಿಳಂಬವಾಗುತ್ತಿದೆ. ಅದಕ್ಕಾಗಿ ನಾವು ಮತ್ತೊಬ್ಬ ತಯಾರಕರಿಗೆ ಆರ್ಡರ್ ನೀಡಿದ್ದೇವೆ. ಅವುಗಳ ದಾಖಲಾತಿ ಪ್ರಕ್ರಿಯೆ ನಡೆಯುತ್ತಿದೆ. ಮುಂದಿನ ವಾರ ಇನ್ನುಳಿದ ಮೂರು ಮೆಟ್ರೋ ನಿಲ್ದಾಣಗಳಲ್ಲಿ ಬಾಡಿಗೆ ಬೈಕ್ ಕಾರ್ಯ ಆರಂಭಿಸಲಿವೆ ಎನ್ನುತ್ತಾರೆ.
ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ ಬಾಡಿಗೆ ಬೈಕ್ ಗಳಿಗೆ ಹೆಚ್ಚು ಬೇಡಿಕೆಯಿದೆ. ಐಟಿ ಆಫೀಸುಗಳಿಗೆ ಹೋಗುವ ಮಂದಿ ತಿಂಗಳ ಬಾಡಿಗೆ ಬೈಕ್ ಗಳನ್ನು ಹೆಚ್ಚು ಅವಲಂಬಿಸುತ್ತಾರೆ ಎನ್ನುತ್ತಾರೆ ಈ ನಿಲ್ದಾಣದಲ್ಲಿ ಬಾಡಿಗೆ ಬೈಕ್ ನ್ನು ನಿರ್ವಹಿಸುತ್ತಿರುವ ಪ್ರದೀಪ್.
ನಿಗದಿತ ಸಮಯಕ್ಕೆ ಐದು ನಿಲ್ದಾಣಗಳಲ್ಲಿ ಬಾಡಿಗೆ ಬೈಕ್ ಯೋಜನೆಯನ್ನು ನೀಡಲು ವಿಫಲವಾಗಿರುವುದರಿಂದ ಬೇರೆಯವರಿಗೆ ಗುತ್ತಿಗೆ ವಹಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಮೆಟ್ರೋದ ಪ್ರಧಾನ ವ್ಯವಸ್ಥಾಪಕ ಯು.ಎ.ವಸಂತ ರಾವ್ ಇಲ್ಲ, ಈಗಿರುವವರ ಗುತ್ತಿಗೆಯನ್ನೇ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


