ರಾಜ್ಯ

ಬೆಂಗಳೂರು ಸುರಕ್ಷತೆಗಾಗಿ 222 ಹೊಸ ಹೊಯ್ಸಳ ವಾಹನಕ್ಕೆ ಸಿಎಂ ಚಾಲನೆ

ಸಿಲಿಕಾನ್ ಸಿಟಿ ಬೆಂಗಳೂರಿನ ಸುರಕ್ಷತೆಗಾಗಿ 222 ಹೊಸ ಹೊಯ್ಸಳ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಚಾಲನೆ ನೀಡಿದರು.

ಬೆಂಗಳೂರು ಸುರಕ್ಷತೆಗಾಗಿ 222 ಹೊಸ ಹೊಯ್ಸಳ ವಾಹನಕ್ಕೆ ಸಿಎಂ ಚಾಲನೆ
ನೂತನ ಪೊಲೀಸ್ ಗಸ್ತು ವಾಹನಗಳಿಗೆ ಚಾಲನೆ ನೀಡುತ್ತಿರುವ ಸಿಎಂ ಹಾಗೂ ಇತರರು
Published On :
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಸುರಕ್ಷತೆಗಾಗಿ 222 ಹೊಸ ಹೊಯ್ಸಳ ವಾಹನಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಚಾಲನೆ ನೀಡಿದರು. 
ನಗರ ಪೊಲೀಸ್ ಘಟನ ವಿಧಾನಸೌಧದ ಮುಂಭಾಗ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರು 222 ಪೊಲೀಸ್ ಗಸ್ತು ವಾಹನಗಳಿಗೆ ಹಸಿರು ನಿಶಾನೆ ತೋರಿದರು. ಬಳಿಕ ಮಾತನಾಡಿದ ಸಿಎಂ, ನಗರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸ್ ಠಾಣೆಗಳನ್ನು ಪುನರ್ ವಿಂಗಡಣೆ ಮಾಡಲಾಗುತ್ತಿದೆ ಎಂದರು.
ಪೊಲೀಸ್ ಇಲಾಖೆ ಈಗಾಗಲೇ 8 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇನ್ನು 8 ಸಾವಿರ ಪೊಲೀಸರನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದರು. ಅಲ್ಲದೆ ಈ ಪೈಕಿ 2800 ಪೊಲೀಸರನ್ನು ಬೆಂಗಳೂರು ನಗರಕ್ಕೆ ನೇಮಕ ಮಾಡಿಕೊಳ್ಳಲಾಗುವುದು ಎಂದು ಸಿಎಂ ತಿಳಿಸಿದರು,
ಅಪರಾಧ ತಡೆಗಾಗಿ ಅತ್ಯಾಧುನಿಕ ತಂತ್ರಜ್ಞಾನ ವ್ಯವಸ್ಥೆ ಒಳಗೊಂಡಿರುವ 222 ನೂತನ 'ಹೊಯ್ಸಳ' ಪೊಲೀಸ್ ಗಸ್ತು ವಾಹನಗಳು ಇಂದಿನಿಂದ ಅಧಿಕೃತವಾಗಿ ತಮ್ಮ ಸಂಚಾರವನ್ನು ಆರಂಭಿಸಿವೆ,
ಪೊಲೀಸ್ ಇಲಾಖೆಯೇ ವಾಹನಗಳ ನಿಯಂತ್ರಣವನ್ನು ನೋಡಿಕೊಳ್ಳಲಿದೆ. ಮೆಗಾಸಿಟಿ ಪೊಲೀಸಿಂಗ್ ಯೋಜನೆಯಡಿಯಲ್ಲಿ 222 ಮಾರುತಿ ಎರ್ಟಿಗಾ- ಎಲ್ ಡಿ 1 ವಾಹನಗಳನ್ನು ಖರೀದಿಸಲಾಗಿದೆ. ಯೋಜನೆಯಡಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿರುವ ಕಮಾಂಡ್ ಸೆಂಟರ್ ಅನ್ನು ರು. 4.38 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಮೇಲ್ಜರ್ಜೆಗೇರಿಸಲಾಗಿದೆ.
ನಗರ ಪೊಲೀಸ್ ಘಟಕದ ಎಲ್ಲಾ ಹೊಯ್ಸಳ ವಾಹನಗಳನ್ನು ಕೇಂದ್ರೀಕರಿಸಿ. ಪೊಲೀಸ್ ಆಯುಕ್ತರ ಕಚೇರಿ ಕಮಾಂಡ್ ಸೆಂಟರ್ ಅಧೀನಕ್ಕೆ ಒಳಪಡಿಸಲಾಗಿದೆ. ಆದರೆ, ಈ ವಾಹನಗಳನ್ನು ಪ್ರತ್ಯೇಕ ಹೊಯ್ಸಳ ನಿಯಂತ್ರಣ ಕೊಠಡಿಯಿಂದಲೇ ನಿಯಂತ್ರಿಸಲಾಗುತ್ತದೆ. ಸಿವಿಲ್ ವೃಂದದ ಒಬ್ಬ ಎಎಸ್ಐ ಅಥವಾ ಮುಖ್ಯ ಪೇದೆ ದರ್ಜೆಯ ಅಧಿಕಾರಿಗಳು ಉಸ್ತುವಾರಿಯಲ್ಲಿ ವಾಹನವಿರುತ್ತದೆ. ಪ್ರತಿ ಪಾಳಿಗೆ ಒಬ್ಬ ಚಾಲಕ, ಸಹಾಯಕ ಸಿಬ್ಬಂದಿ ಇರಲಿದ್ದಾರೆ. ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯ ನಿರ್ದಿಷ್ಟ ಸ್ಥಳಗಳಿಗೆ ವಾಹನ ನಿಲುಗಡೆ ಮಾಡಲಾಗುತ್ತದೆ. ನಿಯಂತ್ರಣ ಕೊಠಡಿಯಿಂದ ನಿಸ್ತಂತು ಅಥವಾ ಮೊಬೈಲ್ ಡೇಟಾ ಟರ್ಮಿನಲ್ (ಎಂಡಿಟಿಸಿ) ಸಂದೇಶದ ಮೇರೆಗೆ ವಾಹನ ಕಾರ್ಯ ಪ್ರವೃತ್ತವಾಗಲಿದೆ ಎಂದು ನಗರ ಪೊಲೀಸ್ ಆಯುಕ್ತ ಎನ್. ಎಸ್. ಮೇಘರಿಕ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.