ರಾಜ್ಯ

ಬೆಂಗಳೂರಿನಲ್ಲಿ ಕೇರಳ ವಿದ್ಯಾರ್ಥಿ ಮೇಲೆ ಹಲ್ಲೆ

ಕೇರಳ ವಿದ್ಯಾರ್ಥಿ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸಂಜಯನಗರ ಸಮೀಪದ ಬೈರಪ್ಪ...

ಬೆಂಗಳೂರಿನಲ್ಲಿ ಕೇರಳ ವಿದ್ಯಾರ್ಥಿ ಮೇಲೆ ಹಲ್ಲೆ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಕೇರಳ ವಿದ್ಯಾರ್ಥಿ ಮೇಲೆ ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಸಂಜಯನಗರ ಸಮೀಪದ ಬೈರಪ್ಪ ಲೇಔಟ್ ನಲ್ಲಿ ನಡೆದಿದೆ. 
ಕೇರಳ ಮೂಲದ ವಿದ್ಯಾರ್ಥಿ ಮೆರ್ವಿನ್ ಮೈಕಲ್ ಜಾಯ್(22) ದುಷ್ಕರ್ಮಿಗಳ ಗುಂಪೊಂದು ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಮೆರ್ವಿನ್ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೂಪಸಂದ್ರದ ಬಳಿ ಇರುವ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎಂ ವ್ಯಾಸಂಗ ಮಾಡುತ್ತಿರುವ ಮೆರ್ವಿನ್ ರಾತ್ರಿ 11ರ ಸುಮಾರಿಗೆ ಸ್ನೇಹಿತರಾದ ಜಸ್ಬಿನ್ ಹಾಗೂ ಕಾಮೇಶ್ವರ್ ಜತೆ ಸಮೀಪದ ಕೇರಳ ಮೂಲದ ಹೋಟೆಲ್ ಗೆ ಬೈಕ್ ನಲ್ಲಿ ಹೋಗಿದ್ದರು. ಊಟ ಮುಗಿಸಿ ಹೊರಗಡೆ ಬಂದು ನೋಡಿದಾಗ, ಆತನ ಬೈಕ್ ಚಕ್ರದ ಗಾಳಿ ಬಿಟ್ಟಿದ್ದಾರೆ. ಇದನ್ನು ಕಂಡ ಮೆರ್ವಿನ್, ಅಲ್ಲೇ ಇದ್ದ ಒಬ್ಬನನ್ನು ಕರೆದು, ನನ್ನ ಚಕ್ರದ ಗಾಳಿ ಬಿಟ್ಟಿದ್ದವರನ್ನು ನೀವು ನೋಡಿದ್ದೀರಾ ಎಂದು ವಿಚಾರಿಸಿದ್ದಾನೆ.
ಆದರೆ ಅಲ್ಲಿದ್ದ ಕೆಲವರು ನೀವು ಕೇರಳದವರ ಎಂದು ಪ್ರಶ್ನಿಸಿ ಜಗಳ ತೆಗೆದಿದ್ದಾರೆ ಎಂದು ಮೆರ್ವಿನ್ ಸ್ನೇಹಿತ ಹೇಳಿದ್ದಾನೆ. ಗಲಾಟೆ ನಂತರ ಮನೆಗೆ ಬಂದು ಮೆರ್ವಿನ್ ಮೊಬೈಲ್ ನಲ್ಲಿ ಮಾತನಾಡುತ್ತಿದ್ದಾಗ, ಅಲ್ಲಿಗೆ ಬಂದ ನಾಲ್ಕೈದು ಮಂದಿ, ಜಾಯ್ ಮೇಲೆ ಏಕಾಏಕಿ ಹಲ್ಲಿ ನಡೆಸಿ ಪರಾರಿಯಾಗಿದ್ದಾರೆ. ಮೆರ್ವಿನ್ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆರ್ವಿನ್ ತಲೆಗೆ 8 ಹೊಲಿಗೆ ಹಾಕಬೇಕಿದೆ. 
ಮೇಲ್ನೋಟಕ್ಕೆ ಸ್ಥಳೀಯ ಯುವಕರೇ ಈ ಕೃತ್ಯವೆಸಗಿರುವುದು ಕಂಡು ಬಂದಿದೆ. ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಆದರೆ ಯುವಕ ಬೀಫ್ ತಿಂದಿದ್ದಕ್ಕೆ ಹಲ್ಲೆ ಮಾಡಲಾಗಿದೆ ಎಂದು ವದಂತಿ ಹಬ್ಬಿಸಲಾಗಿದೆ. ಆದರೆ ಈ ಆರೋಪವನ್ನು ಯವಕರು ತಳ್ಳಿ ಹಾಕಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.