ಜನರನ್ನು ಹತ್ತಿರವಾಗಿಸಲು ಭಾಷೆ ಸಹಾಯ ಮಾಡುತ್ತದೆ: ಪ್ರಣಬ್ ಮುಖರ್ಜಿ
ಜನರನ್ನು ಪರಸ್ಪರ ಹತ್ತಿರ ತರುವ ಶಕ್ತಿ ಭಾಷೆಗಿದೆ, ಎಲ್ಲ ಭಾಷೆಗಳು, ಧರ್ಮಗಳು ಸಮುದ್ರಕ್ಕೆ ನದಿ ಸೇರಿದಂತೆ ಒಂದಾಗುತ್ತವೆ ಎಂದು ರಾಷ್ಟ್ರಪತಿ ಪ್ರಣಬ್ ...

ಬೆಂಗಳೂರು: ಜನರನ್ನು ಪರಸ್ಪರ ಹತ್ತಿರ ತರುವ ಶಕ್ತಿ ಭಾಷೆಗಿದೆ, ಎಲ್ಲ ಭಾಷೆಗಳು, ಧರ್ಮಗಳು ಸಮುದ್ರಕ್ಕೆ ನದಿ ಸೇರಿದಂತೆ ಒಂದಾಗುತ್ತವೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರಿನ ಐಟಿಐ ವಿದ್ಯಾ ಮಂದಿರದಲ್ಲಿ ಏರ್ಪಡಿಸಲಾಗಿದ್ದ ನಿಖಿಲ್ ಭಾರತ್ ಬಂಗಾ ಸಾಹಿತ್ಯ ಸಮ್ಮೇಳನದ 89ನೇ ವಾರ್ಷಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಸಹಭಾಷಿಕರೊಂದಿಗೆ ವಿಚಾರ ವಿನಿಮಯ ಸಂವಹನ ಮಾಡುವ ಅವಕಾಶ ಸಾಹಿತ್ಯ ಮಾತ್ರ ಒದಗಿಸಬಲ್ಲದು. ಭೂಮಿಗಾಗಿ ರಾಜರ ನಡುವೆ ನಡೆಯುವ ಯುದ್ಧಗಳು ಭಾಷೆಯ ವ್ಯಾಪ್ತಿಗೆ ನುಸುಳುವುದಿಲ್ಲ. ಬದಲಾಗಿ ಭಾಷೆಯು ಎಲ್ಲರನ್ನು ಒಗ್ಗೂಡಿಸುತ್ತದೆ ಎಂದು ಹೇಳಿದರು.
ನಿಖಿಲ್ ಭಾರತ್ ಬಂಗಾ ಸಾಹಿತ್ಯ ಸಮ್ಮೇಳನ ಸಂಸ್ಥೆಯೊಂದಿಗೆ 4 ದಶಕಗಳಿಗೂ ಹೆಚ್ಚು ಅವಧಿಯ ತಮ್ಮ ಒಡನಾಟವನ್ನು ಸ್ಮರಿಸಿದ ರಾಷ್ಟ್ರಪತಿಯವರು, ಈ ಸಮ್ಮೇಳನವು ಸಂಸ್ಕೃತಿ ಭಾಷೆಯನ್ನು ಶ್ರೀಮಂತಗೊಳಿಸುವ ವೇದಿಕೆಯಾಗಿದೆ. ಗುರುದೇವ ರವೀಂದ್ರನಾಥ್ ಟ್ಯಾಗೋರ್ ಅವರು ಸ್ಥಾಪಿಸಿದ ಈ ಸಂಸ್ಥೆಯು ಇನ್ನು ಕೆಲವೇ ವರ್ಷಗಳಲ್ಲಿ ಶತಮಾನೋತ್ಸವವನ್ನು ಆಚರಿಸಲಿದೆ ಎಂದು ಅವರು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಮಾತನಾಡಿ ಬಂಗಾಳಿ ಭಾಷೆಯ ಸಾಂಸ್ಕೃತಿಕ ಶ್ರೀಮಂತಿಕೆ ಬಗ್ಗೆ ಹಾಡ ಹೊಗಳಿದರು. ಗುರುದೇವ ರವೀಂದ್ರನಾಥ ಟ್ಯಾಗೋರ್ ನಂತರ ಭಾರತದಲ್ಲಿ ಇನ್ನೊಬ್ಬ ನೊಬೆಲ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಸೃಷ್ಟಿಯಾಗಿಲ್ಲ. ಇದು ಟ್ಯಾಗೋರ್ ಪ್ರತಿಭೆಯ ಅಗಾಧತೆ ಬಿಂಬಿಸುತ್ತದೆ ಎಂದು ಹೇಳಿದರು. ಸಾಹಿತ್ಯ ಉತ್ಕೃಷ್ಟವಾಗಿರುವ ನಾಡಿನಲ್ಲಿ ಬದುಕಿನ ಮಟ್ಟವು ಉತ್ತಮವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು. ಸರಳ ಜೀವನ, ಉನ್ನತ ಚಿಂತನ ಬಂಗಾಳಿಗಳ ವೈಶಿಷ್ಟ್ಯವೆಂದು ಶ್ಲಾಘಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


