ಕ್ರಿಸ್ ಮಸ್, ಹೊಸ ವರ್ಷದಂದು ಮೆಟ್ರೊ ರೈಲು ಸಂಚಾರ ಅವಧಿ ವಿಸ್ತರಣೆ
ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ನಮ್ಮ ಮೆಟ್ರೊ ರೈಲು ಸೇವೆಯ ಅವಧಿ ವಿಸ್ತರಣೆಗೊಂಡಿದೆ. ನಾಳೆ...

Published On :
ಬೆಂಗಳೂರು: ಕ್ರಿಸ್ ಮಸ್ ಮತ್ತು ಹೊಸ ವರ್ಷಕ್ಕೆ ನಮ್ಮ ಮೆಟ್ರೊ ರೈಲು ಸೇವೆಯ ಅವಧಿ ವಿಸ್ತರಣೆಗೊಂಡಿದೆ. ನಾಳೆ ಮೆಟ್ರೊ ರೈಲು ಮಧ್ಯರಾತ್ರಿ 1 ಗಂಟೆಯವರೆಗೆ ಮತ್ತು ಜನವರಿ 1ರಂದು ಮಧ್ಯರಾತ್ರಿ 2 ಗಂಟೆಯವರೆಗೆ ಪ್ರಯಾಣದ ಅವಧಿ ವಿಸ್ತರಣೆಗೊಳ್ಳಲಿದೆ. ವಿಸ್ತರಣೆ ಅವಧಿಯಲ್ಲಿ ಪ್ರತಿ 30 ನಿಮಿಷಗಳಿಗೊಮ್ಮೆ ಮೆಟ್ರೊ ರೈಲು ಸಂಚರಿಸಲಿದೆ.
ಪ್ರಯಾಣಿಕರ ಸೌಕರ್ಯಗಳ ಕೆಲಸ ನಡೆಯಲಿರುವುದರಿಂದ ಡಿಸೆಂಬರ್ 26ರಿಂದ ಜನವರಿ 16ರವರೆಗೆ ವಿಧಾನಸೌಧ ನಿಲ್ದಾಣದ ಒಂದು ಪ್ರವೇಶ ದ್ವಾರ ಮುಚ್ಚಲಿದೆ. ಪ್ರಯಾಣಿಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದರಿಂದ ಹೆಚ್ಚುವರಿ ಎಸ್ಕಲೇಟರ್ ಗಳ ನಿಲ್ದಾಣದಲ್ಲಿ ಒದಗಿಸಲಾಗುತ್ತಿದೆ ಎಂದು ಮೆಟ್ರೊ ರೈಲು ನಿಗಮದ ಹೇಳಿಕೆ ತಿಳಿಸಿದೆ. ಕಬ್ಬನ್ ಪಾರ್ಕ್ ಮತ್ತು ಹೈಕೋರ್ಟ್ ನ ಡಿ ಪ್ರವೇಶ ದ್ವಾರವನ್ನು ಜನವರಿ 16ರವರೆಗೆ ಮುಚ್ಚಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


