ಸಾಲ ಬಾಧೆ: ಮೂವರು ರೈತರು ಆತ್ಮಹತ್ಯೆಗೆ ಶರಣು
ಸಾಲಬಾಧೆ ತಾಳಲಾರದೆ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ...

ಮೈಸೂರು: ಸಾಲಬಾಧೆ ತಾಳಲಾರದೆ ಮೂವರು ರೈತರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರು ಹಾಗೂ ಮಂಡ್ಯ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ.
ಪೆರಿಯಪಟ್ಟಣ ತಾಲೂಕಿನ ಹರನಹಳ್ಳಿ ಗ್ರಾಮದ ಪ್ರಸನ್ನ(35) ನಿನ್ನೆ ವಿಷ ಕುಡಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕಿನಲ್ಲಿ ರು. 5.5 ಲಕ್ಷ ಸಾಲ ಪಡೆದಿದ್ದ ಪ್ರಸನ್ನ ಅವರು ಮುಸುಕಿನ ಜೋಳ ಬೆಳೆಯುತ್ತಿದ್ದರು. ಆದರೆ, ಬೆಳೆ ನಾಶವಾದ ಕಾರಣ ಸಾಲದ ಸುಳಿಯಲ್ಲಿ ಸಿಲುಕಿದ ಕಾರಣ ಸಾಲಬಾಧೆಯನ್ನು ತಾಳಲಾರದೆ ನಿನ್ನೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ರಾಯನಹಳ್ಳಿಯಲ್ಲಿ ವಿಜಯ್ ಕುಮಾರ್ (29) ಎಂಬ ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬ್ಯಾಂಕಿನಲ್ಲಿ ರು. 8 ಲಕ್ಷ ಸಾಲ ಪಡೆದಿದ್ದ ವಿಜಯ್ ಕುಮಾರ್ ಅವರು, 2.5 ಎಕರೆ ಭೂಮಿಯಲ್ಲಿ ಜಾಗದಲ್ಲಿ ತಂಬಾಕು ಬೆಳೆಯನ್ನು ಬೆಳೆಯುತ್ತಿದ್ದರು. ಬೆಳೆ ನಾಶಗೊಂಡ ಹಿನ್ನಲೆಯಲ್ಲಿ ನೊಂದು ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಯ ಜಿಲ್ಲೆಯ ಬಿದ್ದಿರಹೊಸಹಳ್ಳಿ ಗ್ರಾಮದಲ್ಲಿಯೂ ಬೊರೇಗೌಡ (63) ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳೆ ಬೆಳೆಯುವುದಕ್ಕಾಗಿ ಸಾಲ ಮಾಡಿದ್ದ ಬೋರೇಗೌಡ ಅವರು ನಾಲ್ಕು ಕೊಳವೆ ಬಾವಿಗಳನ್ನು ತೆಗೆಸಿದ್ದರು. ಆದರೆ, ಬಾವಿಯಲ್ಲಿ ನೀರು ಬತ್ತಿದ್ದ ಕಾರಣ ಬೋರೇಗೌಡ ಅವರು ನೊಂದು ನೇಣು ಬಿಗಿದುಕೊಳ್ಳುವ ಮೂಲ ಆತ್ಮಹತ್ಯೆಗೆ ಶರಣಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


