ಪೊಲೀಸ್ ಮುಷ್ಕರಕ್ಕೆ ಕರೆ ನೀಡಿದ್ದ ವಿ.ಶಶಿಧರ್ ಜೈಲಿನಿಂದ ಬಿಡುಗಡೆ
ಪೊಲೀಸ್ ಪ್ರತಿಭಟನೆಗೆ ಕರೆ ನೀಡಿ ರಾಜದ್ರೋಹ ಆರೋಪದ ಮೇಲೆ ಜೈಲು ಪಾಲಾಗಿದ್ದ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ ಶಶಿಧರ್ ಅವರು ಶುಕ್ರವಾರ ...

Published On :
ಬೆಂಗಳೂರು: ಪೊಲೀಸ್ ಪ್ರತಿಭಟನೆಗೆ ಕರೆ ನೀಡಿ ರಾಜದ್ರೋಹ ಆರೋಪದ ಮೇಲೆ ಜೈಲು ಪಾಲಾಗಿದ್ದ ಪೊಲೀಸ್ ಮಹಾಸಂಘದ ಅಧ್ಯಕ್ಷ ವಿ ಶಶಿಧರ್ ಅವರು ಶುಕ್ರವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ರಾಜದ್ರೋಹ ಆರೋಪ ಎದುರಿಸುತ್ತಿರುವ ಶಶಿಧರ್, ಬಸವರಾಜ್ ಕೂರವರ ಹಾಗೂ ಗುರುಪಾದಯ್ಯ ಅವರಿಗೆ ಹೈಕೋರ್ಟ್ ನಿನ್ನೆ ಷರತುಬದ್ದ ಜಾಮೀನು ನೀಡಿತ್ತು. ಈ ಹಿನ್ನೆಲೆಯಲ್ಲಿ ಇಂದು ಸಂಜೆ 85 ದಿನಗಳ ನಂತರ ಪರಪ್ಪನ ಅಗ್ರಹಾರ ಜೈಲಿನಿಂದ ಶಶಿಧರ್ ಬಿಡುಗಡೆಯಾಗಿದ್ದಾರೆ.
ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಶಿಧರ್, ದುಷ್ಟ ರಾಜಕಾರಣಿಗಳಿಂದಾಗಿ ನಾನು ಜೈಲು ಸೇರುವಂತಾಯಿತು. ನಾನು ದೇಶಪ್ರೇಮಿ, ಅನ್ಯಾಯದ ವಿರುದ್ಧ ಹೋರಾಡುತ್ತೇನೆ. ಆದರೆ ದೇಶದ್ರೋಹದ ಆರೋಪದ ಮೇಲೆ ನನ್ನನ್ನು ಬಂಧಿಸಿದರು. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ ಕಾರಣ ಎಂದು ಆರೋಪಿಸಿದರು.
ಜಾಮೀನಿಗೆ ೫೦ ಸಾವಿರ ಮೊತ್ತದ ಬಾಂಡ್, ಒಬ್ಬರ ಶ್ಯೂರಿಟಿ, ಅನುಮತಿಯಿಲ್ಲದೇ ಕೋರ್ಟ್ ವ್ಯಾಪ್ತಿ ದಾಟುವಂತಿಲ್ಲ,ಪೊಲೀಸ್ ಮುಷ್ಕರಕ್ಕೆ ಕರೆ ನೀಡುವುದಾಗಲಿ,ಪೊಲೀಸರ ಸಭೆ ಕರೆಯುವುದಾಗಲಿ ಮಾಡಬಾರದು ಅಲ್ಲದೇ ಸಾಕ್ಷಾಧಾರ ನಾಶಪಡಿಸದಂತೆ ಷರತ್ತು ವಿಧಿಸಿ ಜಾಮೀನು ನೀಡಲಾಗಿದೆ.
ಕಳೆದ ಜೂ.೪ರಂದು ಪೊಲೀಸರ ಪ್ರತಿಭಟನೆಗೆ ಕರೆನೀಡಿದ್ದ ಶಶಿಧರ್ ಅವರನ್ನು ಜೂ.೨ರಂದು ರಾತ್ರಿ ಪೊಲೀಸರು ಬಂಧಿಸಿ ರಾಷ್ಟ್ರದ್ರೊಹ, ಸರ್ಕಾರದ ವಿರುದ್ಧ ಪಿತ್ತುರಿ,ಒಳಸಂಚು ಮತ್ತು ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಿದ್ದರು.
ಶಶಿಧರ್ ಬಂಧನದ ದಿನವೇ ಧಾರವಾಡದ ಬಸವರಾಜ ಕೊರ್ ವಾರ್ ಮತ್ತು ದಾವಣಗೆರೆಯ ಗುರುಪಾದಯ್ಯ ಬಂಧನವಾಗಿತ್ತು. ಇವರ ವಿರುದ್ಧವೂ ರಾಷ್ಟ್ರದ್ರೋಹ, ಸರ್ಕಾರದ ವಿರುದ್ಧ ಪಿತ್ತುರಿ,ಒಳಸಂಚು ಮತ್ತು ಎಸ್ಮಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು.
ಶಶಿಧರ್ ಸೇರಿದಂತೆ ಮೂರು ಆರೋಪಿಗಳು ಸೆಷನ್ಸ್ ಕೋರ್ಟ್ ನಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ, ಸೆಷನ್ಸ್ ಕೋರ್ಟ್ ಜಾಮೀನು ಅರ್ಜಿಯನ್ನು ವಜಾಗೊಳಿಸಿತ್ತು. ನಂತರ ಹೈಕೋರ್ಟ್ ನಲ್ಲಿ ಆರೋಪಿಗಳು ಜಾಮೀನು ಅರ್ಜಿ ಸಲ್ಲಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


