ರಾಜ್ಯ

ಅಯ್ಯೋ ವಿಧಿಯೇ... ಕೊಪ್ಪಳದಲ್ಲಿ ಹೆತ್ತವರ ಹೆಣದ ಮುಂದೆ ಕುಳಿತ ಮುಗ್ದ ಕಂದ

ಕೊಪ್ಪಳ ಜಿಲ್ಲೆಯ ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ದಂಪತಿಗಳಿಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಪಕ್ಕದಲ್ಲೇ ಏನೂ ಅರಿಯದ ಎರಡು ವರ್ಷದ ಪುಟ್ಟ...

ಅಯ್ಯೋ ವಿಧಿಯೇ... ಕೊಪ್ಪಳದಲ್ಲಿ ಹೆತ್ತವರ ಹೆಣದ ಮುಂದೆ ಕುಳಿತ ಮುಗ್ದ ಕಂದ
ಹೆತ್ತವರ ಹೆಣದ ಮುಂದೆ ಕುಳಿತ ಮುಗ್ದ ಕಂದ
Published On :
ಕೊಪ್ಪಳ: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ರೈಲ್ವೆ ನಿಲ್ದಾಣದಲ್ಲಿ ದಂಪತಿಗಳಿಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಪಕ್ಕದಲ್ಲೇ ಏನೂ ಅರಿಯದ ಎರಡು ವರ್ಷದ ಪುಟ್ಟ ಕಂದಮ್ಮ ಕುಳಿತು ತಿಂಡಿ ತಿನ್ನುತ್ತಿರುವ ಹೃದಯವಿದ್ರಾವಕ ಘಟನೆ ಸೋಮವಾರ ನಡೆದಿದೆ.
ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲಿ ಗದಗ ಜಿಲ್ಲೆಯ ಅಣ್ಣಿಗೇರಿ ಮೂಲದ ವೀರಣ್ಣ (55) ಮತ್ತು 45ರ ಹರೆಯದ ಪತ್ನಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ದಂಪತಿಗಳು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆದರೆ ಎರಡು ವರ್ಷದ(ದೇವರಾಜು) ಪುಟ್ಟ ಕಂದನಿಗೆ ತನ್ನ ಅಪ್ಪ, ಅವ್ವ ಸಾವನ್ನಪ್ಪಿದ್ದಾರೆ ಅನ್ನೋದೇ ತಿಳಿದಿಲ್ಲವಾಗಿತ್ತು. ತಂದೆ, ತಾಯಿ ಹೆಣದ ಸಮೀಪವೇ ಕುಳಿತ ಮುಗ್ಧ ಕಂದಮ್ಮನ ದೃಶ್ಯ ಮನಕಲಕುವಂತಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪುಟ್ಟ ಕಂದಮ್ಮನನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದು, ಅಪ್ಪ, ಅಮ್ಮನನ್ನು ಕಳೆದುಕೊಂಡಿರುವ ಕಂದ ಅನಾಥವಾಗಿದೆ.
ಗದಗ ಜಿಲ್ಲಾಸ್ಪತ್ರೆಗೆ ದಂಪತಿ ಮೃತದೇಹವನ್ನು ರವಾನಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.