ಮದುವೆಗೂ ಕುತ್ತಾದ ಒತ್ತುವರಿ ತೆರವು ಕಾರ್ಯ; ಮದುವೆ ಛತ್ರಕ್ಕೆ ಕುಟುಂಬಸ್ಥರ ದೌಡು
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಹಲವು ದಿನಗಳಿಂದಲೂ ನಗರದ ಜನತೆಯ ನಿದ್ದೆಗೆಡಿಸಿದ್ದು, ಇದೀಗ ಮದುವೆಗೂ ಕುತ್ತಾಗ ತೊಡಗಿದೆ...

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಹಲವು ದಿನಗಳಿಂದಲೂ ನಗರದ ಜನತೆಯ ನಿದ್ದೆಗೆಡಿಸಿದ್ದು, ಇದೀಗ ಮದುವೆಗೂ ಕುತ್ತಾಗ ತೊಡಗಿದೆ.
ನಗರದಲ್ಲಿ ಮದುವೆ ಛತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ತಲೆಯೆತ್ತುತ್ತಿದ್ದರೂ, ಸರಿಯಾದ ಸಮಯಕ್ಕೆ ಮದುವೆ ಛತ್ರಗಳು ಸಿಗುವುದು ಮಾತ್ರ ಕಷ್ಟಕರವಾಗಿ ಹೋಗಿದೆ. ಇಂತಹ ಸಮಯದಲ್ಲಿ ಬುಕ್ ಮಾಡಿದ ಛತ್ರವೇ ಸರಿಯಾದ ಸಮಯಕ್ಕೆ ಸಿಗದೇ ಹೋದರೆ ಕುಟುಂಬಸ್ಥರ ಪರಿಸ್ಥಿತಿ ಹೇಗಾಗಬಹುದು.
ಬಿಬಿಎಂಪಿ ಆರಂಭಿಸಿರುವ ಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯು ನಿನ್ನೆ ರಾಜರಾಜೇಶ್ವರಿ ನಗರದಲ್ಲಿರುವ ಪದ್ಮಾವತಿ ಕಲ್ಯಾಣ ಮಂಟಪದ ಗೋಡೆಯನ್ನು ಆಹುತಿ ತೆಗೆದುಕೊಂಡಿದೆ.
ಪದ್ಮಾವತಿ ಕಲ್ಯಾಣ ಮಂಟಪ ಹಾಗೂ ಮೀನಾಕ್ಷಿ ಕಲ್ಯಾಣ ಮಂಟಪ ಎರಡೂ ಒಂದೇ ಪ್ರದೇಶದಲ್ಲಿಯೇ ಇದ್ದು, ಎರಡೂ ಛತ್ರಗಳ ನಡುವಿನ ಗೋಡೆಯನ್ನು ಒಡೆಯದು ಹಾಕಲಾಗಿದೆ. ಅಲ್ಲದೆ, ಮೀನಾಕ್ಷಿ ಕಲ್ಯಾಣ ಮಂಟಪದಲ್ಲಿನ ಶೌಚಾಲಯ, ಊಟದ ಆವರಣದ ಭಾಗ ತೆರವುಗೊಳಿಸಲಾಗಿದೆ.
ತೆರವು ಕಾರ್ಯಾಚರಣೆ ಕುರಿತಂತೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದುದನ್ನು ಕಂಡ ಛತ್ರದ ಬಾಡಿಗೆದಾರರು ಕಂಗಾಲಾಗಿ ಛತ್ರದ ಬಳಿ ಜಮಾಯಿಸಿ, ಆತಂಕ ವ್ಯಕ್ತಪಡಿಸುತ್ತಿದ್ದರು. ನಂತರ ಛತ್ರದ ಮಾಲೀಕರು ಸ್ಥಳಕ್ಕೆ ಬಂದು ಗೋಡೆಯನ್ನಷ್ಟೇ ಒಡೆಯಲಾಗಿದ್ದು, ಛತ್ರಕ್ಕೆ ಯಾವುದೇ ರೀತಿಯ ಹಾನಿಯಾಗಿಲ್ಲ. ಮದುವೆಗೆ ಅಡ್ಡಿಯಾಗುವುದಿಲ್ಲ ಎಂದು ಬಾಡಿಗೆದಾರರಿಗೆ ಅಭಯ ನೀಡಿದರು.
ತೆರವು ಕುರಿತಂತೆ ಛತ್ರದ ಬಾಡಿಗೆದಾರ ಯಶವಂತ್ ಎಂಬುವವರು ಮಾತನಾಡಿದ್ದು, ಛತ್ರದ ಗೋಡೆಯನ್ನಷ್ಟೇ ಒಡೆಯಲಾಗಿದೆ. ಮದುವೆಗೆ ಬರುವ ಅತಿಥಿಗಳಿಗೆ ಯಾವುದೇ ತೊಂದರೆಗಳು ಎದುರಾಗುವುದಿಲ್ಲ. ಛತ್ರವನ್ನು 5 ತಿಂಗಳ ಹಿಂದೆಯೇ ಬುಕ್ ಮಾಡಲಾಗಿತ್ತು ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


