ರಾಜ್ಯ

ಬೆಂಗಳೂರು: ಮಣಿಪುರಿ ಕ್ರೈಸ್ತ ಬೋಧಕನ ಮೇಲೆ ಹಲ್ಲೆ, ಆರೋಪಿಗಳಿಗಾಗಿ ಶೋಧ

ಐದು ಜನರ ತಂಡವೊಂದು 26 ವರ್ಷದ ಮಣಿಪುರಿ ಕ್ರೈಸ್ತ ಧರ್ಮ ಬೋಧಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ...

ಬೆಂಗಳೂರು: ಮಣಿಪುರಿ ಕ್ರೈಸ್ತ ಬೋಧಕನ ಮೇಲೆ ಹಲ್ಲೆ, ಆರೋಪಿಗಳಿಗಾಗಿ ಶೋಧ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಐದು ಜನರ ತಂಡವೊಂದು 26 ವರ್ಷದ ಮಣಿಪುರಿ ಕ್ರೈಸ್ತ ಧರ್ಮ ಬೋಧಕನ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಮಣಿಪುರ ಮೂಲದ ಇವಾನ್ ಮಾಮಂಗ್ ಕೆಗ್ ಪೆನ್ ಹಲ್ಲೆಗೊಳಗಾದ ವ್ಯಕ್ತಿ. ಲಕ್ಷ್ಮಿಪುರಂ ನ ತಾಡೋ ಕ್ರಿಶ್ಚಿಯನ್ ಫೆಲೋಶಿಫ್ ಚರ್ಚ್ ನಲ್ಲಿ ಕಳೆದ ಎರಡು ತಿಂಗಳಿಂದ ಧರ್ಮ ಬೋಧಕರಾಗಿ ಕೆಲಸ ಮಾಡುತ್ತಿದ್ದರು.

ಮಧ್ಯರಾತ್ರಿ 2.30 ಸಮಯದಲ್ಲಿ ಸ್ನೇಹಿತನ ಮನೆಯಿಂದ ವಾಪಸ್ ಬರುತ್ತಿರುವಾಗ ನನ್ನ ಮನೆಯ ಮುಂದಿನ ಜಂಕ್ಷನ್ ಬಳಿ ಕೆಲವು ಮಂದಿ ನಿಂತಿದ್ದರು.  ಅವರನ್ನು ದಾಟಿ ನಾನು ಮುಂದೆ ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದು, ಯಾವುದೇ ಕಾರಣವಿಲ್ಲದೇ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ದೂರು ದಾಖಲಿಸಿದ್ದಾರೆ.

ಹಲ್ಲೆ ನಡೆಸುತ್ತಿದ್ದವರು ಕನ್ನಡದಲ್ಲಿ ಮಾತನಾಡುತ್ತಿದ್ದರು. ಅವರು ಮಾತನಾಡುತ್ತಿದ್ದುದು ನನಗೆ ಅರ್ಥವಾಗಲಿಲ್ಲ,. ಅವರು ನನ್ನ ಬಳಿಯಿಂದ ಏನೂ ದೋಚಲಿಲ್ಲ, ಆದರೇ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ನಾನು ಜೋರಾಗಿ ಕೂಗಿಕೊಂಡೆ. ಅಕ್ಕಪಕ್ಕದ ಮನೆಯವರು ಎದ್ದು ಹೊರ ಬಂದಾಗ ಅವರು ನನ್ನಬಿಟ್ಟು ಓಡಿ ಹೋದರು ಎಂದು ಆರೋಪಿಸಿದ್ದಾರೆ.

ಇಂದಿರಾ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.