ರಾಜ್ಯ

ಬೆಂಗಳೂರು: ಬ್ರೇಕ್ ಫೇಲ್ ಆದ ಲಾರಿಯಿಂದ ಸರಣಿ ಅಪಘಾತ, ಓರ್ವನ ಸಾವು

ನಗರದ ಕೊಟ್ಟಿಗೆ ಹಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಒಬ್ಬ ವ್ಯಕ್ತಿ ಮತಪಟ್ಟು 6 ಮಂದಿಗೆ ಗಂಭೀರ ಗಾಯಗಳಾಗಿವೆ. ..

ಬೆಂಗಳೂರು: ಬ್ರೇಕ್ ಫೇಲ್ ಆದ ಲಾರಿಯಿಂದ ಸರಣಿ ಅಪಘಾತ, ಓರ್ವನ ಸಾವು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ನಗರದ ಕೊಟ್ಟಿಗೆ ಹಳ್ಳಿ ಕ್ರಾಸ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಒಬ್ಬ ವ್ಯಕ್ತಿ ಮತಪಟ್ಟು 6 ಮಂದಿಗೆ ಗಂಭೀರ ಗಾಯಗಳಾಗಿವೆ.

ಸುಂಕದ ಕಟ್ಟೆ ಬಳಿ ಬ್ರೇಕ್‌ಫೇಲ್ ಆದ ಲಾರಿ  ಟಾಟಾ ಏಸ್ ಕಾರು ಸೇರಿದಂತೆ ಎರಡು ಕಾರು ಮತ್ತು 2 ಬೈಕ್‍‌ಗಳಿಗೆ ಡಿಕ್ಕಿ ಹೊಡೆದು ಈ ಭೀಕರ ಅಪಘಾತ ಸಂಭವಿಸಿದೆ. ಬೆಳಗ್ಗೆ 9.30ಕ್ಕೆ ಅಪಘಾತ ಸಂಭವಿಸಿದೆ. ಲಗ್ಗೆರೆಯಿಂದ ಮರಳು ಲಾರಿ ಹೊರಟಿತ್ತು.

ಲಾರಿ ಮುಂದೆ ಇದ್ದ  2 ಟಾಟಾ ಏಸ್ ಕಾರು ಮತ್ತು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಬಸ್‌ಸ್ಟಾಂಡ್‌ಗೆ ನುಗ್ಗಿದೆ. ನಂತರ ಬಸ್ ಸ್ಟಾಂಡಿನಲ್ಲಿ ಬಿಎಂಟಿಸಿ ಬಸ್ ಗೆ ಡಿಕ್ಕಿ ಹೊಡೆದಿದೆ. ಲಾರಿಯೊಳಗಿದ್ದ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು, ಒಬ್ಬರ ಎರಡೂ ಕಾಲುಗಳು ತುಂಡಾಗಿವೆ.

ಇನ್ನೂ ಇಬ್ಬರಿಗೆ ಒಂದು ಕಾಲು ತುಂಡಾಗಿದೆ. ಲಾರಿಯ ಬ್ರೇಕ್ ಫೇಲ್ ಆದ ಕೂಡಲೇ ಲಾರಿಯ ಚಾಲಕ ಬ್ರೇಕ್ ಫೇಲ್ ಆಗಿರುವ ಕುರಿತು ಕೂಗಿ ಹೇಳಿದರೂ ಅಲ್ಲಿದ್ದವರಿಗೆ ಗೊತ್ತಾಗಲಿಲ್ಲವೆಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.