ಪುತ್ರವಿಯೋಗದ ಶೋಕದಲ್ಲಿರುವೆ, ನಾಳೆ ಹುಟ್ಟಹಬ್ಬದ ಆಚರಣೆ ಬೇಡ: ಸಿದ್ದರಾಮಯ್ಯ
ಪುತ್ರ ರಾಕೇಶ್ ಸಾವಿನಿಂದಾಗಿ ಶೋಕ ಸಾಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಬೇಡಿ ಎಂದು ಅಭಿಮಾನಿಗಳಿಗೆ...

ಬೆಂಗಳೂರು: ಪುತ್ರ ರಾಕೇಶ್ ಸಾವಿನಿಂದಾಗಿ ಶೋಕ ಸಾಗರದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಬೇಡಿ ಎಂದು ಅಭಿಮಾನಿಗಳಿಗೆ ಹಾಗೂ ಪಕ್ಷದ ಮುಖಂಡರಿಗೆ ಸಂದೇಶವನ್ನು ರವಾನಿಸಿದ್ದಾರೆ.
ಆಗಸ್ಟ್ 12ಕ್ಕೆ ಸಿದ್ದರಾಮಯ್ಯನವರಿಗೆ ಹುಟ್ಟುಹಬ್ಬವಿದ್ದು, 68ನೇ ವಸಂತಕ್ಕೆ ಕಾಲಿಡುತ್ತಿರುವ ಸಿದ್ದರಾಮಯ್ಯನವರು ತಮ್ಮ ಹಿರಿಯ ಪುತ್ರ ರಾಕೇಶ್ ಅಕಾಲಿಕ ಮರಣದಿಂದಾಗಿ ಪುತ್ರ ಶೋಕದಲ್ಲಿದ್ದು, ನಾನು ಇನ್ನು ಸಂಪೂರ್ಣವಾಗಿ ಹೊರಬಂದಿಲ್ಲ ಹೀಗಾಗಿ ನನಗೆ ಹುಟ್ಟುಹಬ್ಬದ ಸಡಗರ ಸಂಭ್ರಮ ಬೇಡವೆಂದಿದ್ದಾರೆ.
ಮಗನ ಸಾವಿನ ನೋವಿನಿಂದಾಗಿ ನಿಮ್ಮಿಂದ ಶುಭ ಹಾರೈಕೆ ಪಡೆಯಲು ನನ್ನು ಮನಸ್ಸು ಒಪ್ಪುತ್ತಿಲ್ಲ. ಹಾರ, ತುರಾಯಿ ಸ್ವೀಕರಿಸೋದು ಕೂಡ ಸರಿಯಲ್ಲ. ಹೀಗಾಗಿ ನಾಳೆ ಹಾರ ತುರಾಯಿ ತರುವುದಾಗಲಿ ಹುಟ್ಟುಹಬ್ಬ ಆಚರಣೆ ಮಾಡುವುದಾಗಿ ಬೇಡ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


