ಚುಡಾಯಿಸಿದ ಆರೋಪ; ಬೆಂಗಳೂರಿನ ನಾಲ್ವರು ಅಪ್ರಾಪ್ತರ ಬಂಧನ
ಮಹಿಳೆಯನ್ನು ಚುಡಾಯಿಸುತ್ತಿದ್ದ ನಾಲ್ಕು ಅಪ್ರಾಪ್ತ ಬಾಲಕರನ್ನು ವಿಜಯನಗರದ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇವರನ್ನು ಬಾಲಾಪರಾಧಿ ಕೇಂದ್ರದ ವಶಕ್ಕೆ ನೀಡಲಾಗಿದೆ.

ಬೆಂಗಳೂರು: ಮಹಿಳೆಯನ್ನು ಚುಡಾಯಿಸುತ್ತಿದ್ದ ನಾಲ್ಕು ಅಪ್ರಾಪ್ತ ಬಾಲಕರನ್ನು ವಿಜಯನಗರದ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇವರನ್ನು ಬಾಲಾಪರಾಧಿ ಕೇಂದ್ರದ ವಶಕ್ಕೆ ನೀಡಲಾಗಿದೆ. ಇವರೆಲ್ಲರೂ ಶಾಲೆ ಓದನ್ನು ನಿಲ್ಲಿಸಿರುವವರು ಎಂದು ತಿಳಿದುಬಂದಿದೆ.
ಈ ಘಟನೆ ಎರಡು ವಾರಗಳ ಹಿಂದೆ ನಡೆದದ್ದು ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಮನುವನದ ಬಸ್ ನಿಲ್ದಾಣದ ಬಳಿ ಮೈಸೂರು ಮೂಲದ ಮಹಿಳೆ ಅನುರಾಧಾ (ಹೆಸರು ಬದಲಿಸಲಾಗಿದೆ) ಬಸ್ ಗಾಗಿ ಕಾಯುವಾಗ, ನಿಲ್ದಾಣದ ಬಳಿ ನಿಂತಿರುತ್ತಿದ್ದ ಈ ನಾಲ್ಕು ಜನರ ಗುಂಪು ಅವರನ್ನು ದಿಟ್ಟಿಸುತ್ತಾ ಚುಡಾಯಿಸುತ್ತಿದ್ದರು. ಮಹಿಳೆ ಬಾಲಕರಿಗೆ ಒಂದೆರಡು ಬಾರಿ ಎಚ್ಚರಿಕೆ ನೀಡಿದ್ದರೂ, ಅವರು ಚುಡಾಯಿಸುವುದನ್ನು ಮುಂದುವರೆಸಿದ್ದಾರೆ.
ಆಗ ಅನುರಾಧಾ ವಿಜಯನಗರ ಪೊಲೀಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


