ರಾಜ್ಯ

ಬೆಂಗಳೂರು: ಮೊಬೈಲ್ ಒಡೆದು ಹಾಕಿದ್ದಕ್ಕೆ ಅಜ್ಜಿಯನ್ನೇ ಕೊಂದ ಮೊಮ್ಮಗ

ತಿಳಿಯದೆಯೇ ಮೊಬೈಲ್ ಒಡೆದು ಹಾಕಿದ್ದಕ್ಕೆ ಅಕ್ರೋಶಗೊಂಡ ಮೊಮ್ಮಗನೊಬ್ಬ ಹೊಡೆದು ಅಜ್ಜಿಯನ್ನು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ಬನಶಂಕರಿಯ ಕದಿರೇನಹಳ್ಳಿಯಲ್ಲಿ...

ಬೆಂಗಳೂರು: ಮೊಬೈಲ್ ಒಡೆದು ಹಾಕಿದ್ದಕ್ಕೆ ಅಜ್ಜಿಯನ್ನೇ ಕೊಂದ ಮೊಮ್ಮಗ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ತಿಳಿಯದೆಯೇ ಮೊಬೈಲ್ ಒಡೆದು ಹಾಕಿದ್ದಕ್ಕೆ ಅಕ್ರೋಶಗೊಂಡ ಮೊಮ್ಮಗನೊಬ್ಬ ಹೊಡೆದು ಅಜ್ಜಿಯನ್ನು ಹತ್ಯೆ ಮಾಡಿರುವ ಹೃದಯ ವಿದ್ರಾವಕ ಘಟನೆಯೊಂದು ಬನಶಂಕರಿಯ ಕದಿರೇನಹಳ್ಳಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

ಲಕ್ಷ್ಮಮ್ಮ (99) ಕೊಲೆಯಾದ ಅಜ್ಜಿ. ಶಿವರಾಜ್ (22) ಹತ್ಯೆ ಮಾಡಿದ ಮೊಮ್ಮಗನಾಗಿದ್ದಾನೆ. ಘಟನೆ ನಂತರ ಶಿವರಾಜ್ ತಲೆಮರೆಸಿಕೊಂಡಿದ್ದಾನೆ.

ಕೂಲಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ನಿನ್ನೆ ರಾತ್ರಿ 8ರ ಸುಮಾರಿಗೆ ಮನೆಗೆ ಬಂದು ಮೊಬೈಲ್ ನ್ನು ಚಾರ್ಜ್ ಹಾಕಿ ಕುಳಿತುಕೊಂಡಿದ್ದಾನೆ. ಈ ವೇಳೆ ಕೋಲು ಹಿಡಿದುಕೊಂಡು ಬಂದಿದ್ದ ಅಜ್ಜಿಯ ಕೋಲಿಗೆ ಚಾರ್ಜರ್ ವೈಯರ್ ಸಿಕ್ಕಿಹಾಕಿಕೊಂಡಿದೆ. ಇದರಂತೆ ಮೊಬೈಲ್ ಕಳಗೆ ಬಿದ್ದು ಒಡೆದುಹೋಗಿದೆ.

ಮೊಬೈಲ್ ಒಡೆದು ಹೋಗಿದ್ದಕ್ಕೆ ಅಕ್ರೋಶಗೊಂಡ ಶಿವರಾಜ್ ಕೋಲು ತೆಗೆದುಕೊಂಡು ಅಜ್ಜಿಯ ಕತ್ತಿಗೆ ಹೊಡೆದಿದ್ದಾನೆ. ತೀವ್ರವಾಗಿ ಗಾಯಗೊಂಡ ಅಜ್ಜಿಯನ್ನು ಮನೆಯವರೇ ರಕ್ತ ಒರೆಸಿ ಶುಶ್ರೂಷೆ ಮಾಡಿ ಔಷಧಿಯನ್ನು ಹಾಕಿ ಮಲಗಿಸಿದ್ದಾರೆ. ಮಲಗಿದ್ದ ಜಾಗದಲ್ಲೇ ಲಕ್ಷ್ಮಮ್ಮ ಅವರು ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.

ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಬನಶಂಕರಿ ಪೊಲೀಸರು ಶಿವರಾಜ್ ಗಾಗಿ ತೀವ್ರ ಶೋಧ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.