ಹೆಣ್ಣು ಮಗು ಶಾಪ ಎಂದು 2 ಸಾವಿರಕ್ಕೆ ಮಗಳನ್ನೇ ಮಾರಿದ ತಂದೆ
ಹೆಣ್ಣು ಮಗು ಶಾಪ ಎಂದು ತಿಳಿದ ಪಾಪಿ ತಂದೆಯೊಬ್ಬ ತನ್ನ ಎರಡೂವರೆ ವರ್ಷದ ಮಗಳನ್ನು ಎರಡು ಸಾವಿರ ರುಪಾಯಿಗೆ ಮಾರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು: ಹೆಣ್ಣು ಮಗು ಶಾಪ ಎಂದು ತಿಳಿದ ಪಾಪಿ ತಂದೆಯೊಬ್ಬ ತನ್ನ ಎರಡೂವರೆ ವರ್ಷದ ಮಗಳನ್ನು ಎರಡು ಸಾವಿರ ರುಪಾಯಿಗೆ ಮಾರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
32 ವರ್ಷದ ಸೂರ್ಯ ತನ್ನ ಮಗಳನ್ನು ಪಂದೇಶ್ ಎಂಬುವರಿಗೆ ಮಾರಿ ಇದೀಗ ಇಬ್ಬರು ಪೊಲೀಸರ ಅತಿಥಿಯಾಗಿದ್ದು, ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಯ ಆಶ್ರಯದಲ್ಲಿ ಬಿಡಲಾಗಿದೆ.
ರಾಯಚೂರಿನ ಮಾನ್ವಿ ಮೂಲದವರಾದ ಸೂರ್ಯ ಮತ್ತು ರೇಣುಕಾ ನಾಗರಬಾವಿ ಬಳಿ ಶೇಡ್ ನಲ್ಲಿ ತಮ್ಮ ಮೂವರು ಮಕ್ಕಳೊಂದಿಗೆ ಕಳೆದ 6 ತಿಂಗಳಿನಿಂದ ವಾಪವಾಗಿದ್ದರು. ಮಾರ್ಚ್ 14ರಂದು ಮಾಲಕಾಡ ರೋಡ್ ನಲ್ಲಿರುವ ಮದ್ಯದಂಗಡಿಗೆ ಹೋಗಿದ್ದ ಸೂರ್ಯ ತಮಿಳುನಾಡು ಮೂಲದ ಕಾರ್ಮಿಕ ಪಂದೇಶ್ ಎಂಬಾತನ ಪರಿಚಯವಾಗಿದೆ. ಇಬ್ಬರು ಮದ್ಯ ಸೇವಿಸಿದ ನಂತರ ಸೂರ್ಯ ಪಂದೇಶ್ ನನ್ನು ಮನೆಗೆ ಕರೆದಿದ್ದಾನೆ.
ಸೂರ್ಯ ಮನೆಯಲ್ಲಿ ಇಬ್ಬರು ನಾಲ್ಕು ಗಂಟೆಯವರೆಗೆ ಮದ್ಯ ಸೇವಿಸಿದ್ದಾರೆ. ನಂತರ ಸೂರ್ಯ ಹೆಣ್ಣು ಮಗುವನ್ನು ಪಂದೇಶ್ ಗೆ ಕೊಟ್ಟಿದ್ದಾನೆ. ಪತಿ ತಮಾಷೆ ಮಾಡುತ್ತಿದ್ದಾನೆ ಎಂದು ತಿಳಿದ ರೇಣುಕಾ ಸುಮ್ಮನಾಗಿದ್ದಾಳೆ. ಬಳಿಕ ಆಕೆಗೆ ತಮ್ಮ ಮಗುವನ್ನು ಮಾರಾಟ ಮಾಡಿರುವುದು ತಿಳಿದು ಪ್ರತಿಭಟಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಸೂರ್ಯ ಹೆಂಡತಿಗೆ ಸುಮ್ಮನಿರು ಇಲ್ಲದಿದ್ದರೆ ಕೊಲೆ ಮಾಡುವ ಬೆದರಿಕೆಯೊಡ್ಡಿದ್ದಾನೆ.
ತನ್ನ ಗಂಡನ ಕೃತ್ಯದಿಂದ ಮನನೊಂದ ರೇಣುಕಾ ಸಂಬಂಧಿಕರಿಗೆ ಸುದ್ದಿ ಮುಟ್ಟಿಸಿದ್ದಾಳೆ. ನಂತರ ಸಂಬಂಧಿಕರು ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಸಂಘಟನೆಯೊಂದಿಗೆ ಜ್ಞಾನ ಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


