ಕೋಲ್ಕತಾ ಮೇಲ್ಸೇತುವೆ ದುರಂತ: ಐವಿಆರ್ ಸಿಎಲ್ ನಿಂದ ಕರ್ನಾಟಕದಲ್ಲೂ 12 ಯೋಜನೆ
ಕೋಲ್ಕತಾದಲ್ಲಿ ಕುಸಿದುಬಿದ್ದ ಮೇಲ್ಸೇತುವೆಯನ್ನು ನಿರ್ಮಿಸುತ್ತಿದ್ದ ಐವಿ ಆರ್ ಸಿಎಲ್ ಕಂಪನಿ ರಾಜ್ಯದಲ್ಲೂ 12 ಯೋಜನೆಗಳ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ.

ಬೆಂಗಳೂರು: ಕೋಲ್ಕತಾದಲ್ಲಿ ಕುಸಿದುಬಿದ್ದ ಮೇಲ್ಸೇತುವೆಯನ್ನು ನಿರ್ಮಿಸುತ್ತಿದ್ದ ಐವಿ ಆರ್ ಸಿಎಲ್ ಕಂಪನಿ ರಾಜ್ಯದಲ್ಲೂ 12 ಯೋಜನೆಗಳ ಕಾಮಗಾರಿಗಳನ್ನು ನಿರ್ವಹಿಸುತ್ತಿದೆ. ಈ ಪೈಕಿ ಮೆಟ್ರೋ ರೈಲ್ವೆಯ 6 ನಿಲ್ದಾಣಗಳ ಕಾಮಗಾರಿಗಳೂ ಸೇರಿವೆ.
ಐವಿಆರ್ ಸಿಎಲ್ ಸಂಸ್ಥೆ ನಿರ್ಮಿಸುತ್ತಿದ್ದ ಮೇಲ್ಸೇತುವೆ ಕುಸಿದುಬಿದ್ದಿರುವುದು ಸುರಕ್ಷಿತ ಮತ್ತು ಸಮರ್ಥ ಕಾಮಗಾರಿಯ ಬಗೆಗೆ ಕಂಪನಿ ಹೊಂದಿರುವ ಬದ್ಧತೆ ಕುರಿತು ಪ್ರಶ್ನೆ ಮೂಡಲು ಕಾರಣವಾಗಿದೆ. ಆದರೆ ಕರ್ನಾಟಕದಲ್ಲಿ ಈ ವರೆಗೂ ಯಾವುದೇ ಅವಗಢಗಳೂ ಸಂಭವಿಸದಂತೆ ಯಶಸ್ವಿಯಾಗಿ ಕಾಮಗಾರಿ ಮುಕ್ತಾಯಗೊಳಿಸಿರುವ ಉದಾಹರಣೆಗಳಿವೆ.
ಐವಿಆರ್ ಸಿಎಲ್ ಕಂಪನಿ ನಿರ್ಮಿಸಿರುವ ಹಲಸೂರು, ಸಿಎಂ ಹೆಚ್ ರಸ್ತೆ, ಹಳೆ ಮದ್ರಾಸ್ ರಸ್ತೆ, ಬೈಯ್ಯಪ್ಪನಹಳ್ಳಿ, ಆರ್ ವಿ ರಸ್ತೆ, ಜಯನಗರ ಮೆಟ್ರೋ ನಿಲ್ದಾಣಗಳ ಪೈಕಿ ಈಗಾಗಲೇ 4 ನಿಲ್ದಾಣಗಳು ಕಾರ್ಯಾಚರಣೆ ನಡೆಸುತ್ತಿದ್ದು ಜಯನಗರ ಮೆಟ್ರೋ ನಿಲ್ದಾಣ ಹಾಗೂ ಆರ್ ವಿ ರಸ್ತೆ ನಿಲ್ದಾಣ ಇನ್ನಷ್ಟೇ ಉದ್ಘಾಟನೆಯಾಗಬೇಕಿದೆ.
ಐವಿಆರ್ ಸಿ ಎಲ್ ನ ಬೆಂಗಳೂರು ವಿಭಾಗದ ಕಾರ್ಯನಿರ್ವಾಹಕ ಅಧಿಕಾರಿ ಧರ್ಮ, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಕಳೆದ 30 ವರ್ಷಗಳ ಕಂಪನಿ ನಡೆಸಿರುವ ಕಾಮಗಾರಿಗಳಲ್ಲಿ ಕೋಲ್ಕತಾ ಮಾದರಿಯ ದುರಂತಗಳು ಸಂಭವಿಸಿಲ್ಲ. ಕೋಲ್ಕತಾ ಘಟನೆ ದುರದೃಷ್ಟಕರ ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಮೆಟ್ರೋ ಯೋಜನೆಗಳನ್ನು ಹೊರತುಪಡಿಸಿ ಐವಿಆರ್ ಸಿಎಲ್ ಸಂಸ್ಥೆ ಕರ್ನಾಟಕದಲ್ಲಿ ನೀರು ಪೂರೈಕೆ, ನೀರಾವರಿ ಹಾಗೂ ವಿದ್ಯುತ್ ಯೋಜನೆಗಳ ಕಾಮಗಾರಿಗಳನ್ನು ನಿರ್ವಹಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


