ಕರ್ನಾಟಕವನ್ನು ಆಳಿದ ಪ್ರಮುಖ ರಾಜರು ಮತ್ತು ಪಾಳೆಗಾರರು
ಭಾರತ ದೇಶದ ದಕ್ಷಿಣದ ರಾಜ್ಯಗಳಲ್ಲಿ ಒಂದಾದ ಕರ್ನಾಟಕದಲ್ಲಿ ಅನೇಕ ರಾಜ-ಮಹಾರಾಜರುಗಳು ಆಳಿ ಹೋಗಿದ್ದಾರೆ. ಅವರ ಹೆಸರುಗಳು ಇಂದಿಗೂ ಜನಮಾನಸದಲ್ಲಿ ಉಳಿದುಕೊಂಡಿದ್ದರೆ ಅದಕ್ಕೆ ಕಾರಣ ಅವರ ಆಳ್ವಿಕೆ, ಶತ್ರುಗಳೊಂದಿಗೆ ಕೆಚ್ಚೆದೆಯಿಂದ ಹೋರಾಡಿದ್ದು, ಸಾಹಿತ್ಯ-ಸಂಸ್ಕೃತಿಗೆ ಅವರು ನೀಡಿದ ಕೊಡುಗೆಗಳು.