ಆರೋಗ್ಯ

ಆರ್ಥ್ರೈಟಿಸ್ ಕಾಡುತ್ತಿದೆಯೇ? ಈ ಸೂಪರ್ ಫುಡ್ ಗಳಿಗೆ ಸಮಸ್ಯೆ ದೂರಾಗಿಸುವ ಶಕ್ತಿ ಇದೆ!

ಯಾರಿಗೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಆರ್ಥ್ರೈಟಿಸ್ ಸಮಸ್ಯೆ ಎದುರಾಗಬಹುದು. ಅದರಲ್ಲೂ 60 ವರ್ಷ ದಾಟಿದ ಪುರುಷರು ಮತ್ತು ಮಹಿಳೆಯರು ತಮ್ಮ ಮೂಳೆಗಳ ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಈಗಿನ ಕಾಲದಲ್ಲಿ ಮಕ್ಕಳಿಗೂ ಕೂಡ ಆರ್ಥ್ರೈಟಿಸ್ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ.

ಆರ್ಥ್ರೈಟಿಸ್ ಕಾಡುತ್ತಿದೆಯೇ? ಈ ಸೂಪರ್ ಫುಡ್ ಗಳಿಗೆ ಸಮಸ್ಯೆ ದೂರಾಗಿಸುವ ಶಕ್ತಿ ಇದೆ!
ಸಂಗ್ರಹ ಚಿತ್ರ
Published On :

ಯಾರಿಗೆ ಯಾವುದೇ ವಯಸ್ಸಿನಲ್ಲಿ ಬೇಕಾದರೂ ಆರ್ಥ್ರೈಟಿಸ್ ಸಮಸ್ಯೆ ಎದುರಾಗಬಹುದು. ಅದರಲ್ಲೂ 60 ವರ್ಷ ದಾಟಿದ ಪುರುಷರು ಮತ್ತು ಮಹಿಳೆಯರು ತಮ್ಮ ಮೂಳೆಗಳ ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಈಗಿನ ಕಾಲದಲ್ಲಿ ಮಕ್ಕಳಿಗೂ ಕೂಡ ಆರ್ಥ್ರೈಟಿಸ್ ಸಮಸ್ಯೆ ಕಾಡುವ ಸಾಧ್ಯತೆ ಇರುತ್ತದೆ.

ಮೂಳೆಗಳು ಹಾಗೂ ಕೀಲುಗಳ ಆರೋಗ್ಯಕ್ಕೆ ಸಂಬಂಧಪಟ್ಟಂತೆ ನಮ್ಮ ನಡುವೆ ಹಲವು ಜನರು ಯಮಯಾತನೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಸಮಸ್ಯೆ ಸಾಕಷ್ಟು ಜನರನ್ನು ಕಾಡುತ್ತಿದೆ. ಹಿಂದೆಲ್ಲಾ ವಯಸ್ಸಾದವರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದ ಈ ಕಾಯಿಲೆ, ಇದೀಗ ಮಕ್ಕಳನ್ನು ಕಾಡಲು ಆರಂಭಿಸಿದೆ.

ಇದ್ದಕ್ಕಿದಂತೆ ಕಾಲಿನ ಗಂಟುಗಳಲ್ಲಿ ನೋವು, ಕೀಲು ನೋವು, ಕೈಗಳ ಮಣಿಗಂಟಿನಲ್ಲಿ ಊತದಂತಹ ಲಕ್ಷಣಗಳು ಕಂಡು ಬರುವುದು, ಕೈಗಳ ಹಾಗೂ ಕಾಲಿನ ಬೆರಳುಗಳಲ್ಲಿ ಊತ ಹಾಗೂ ನೋವು ಕಾಣಿಸಿಕೊಳ್ಳುವುದು, ಇವೆಲ್ಲಾ ಸಂಧಿವಾತದ (ಆರ್ಥ್ರೈಟಿಸ್) ಸಮಸ್ಯೆಯ ಪ್ರಮುಖ ಲಕ್ಷಣಗಳಾಗಿವೆ.

Story image

ಸಂಧಿವಾತ ಕಾಯಿಲೆಗೆ ಪ್ರಮುಖ ಕಾರಣ, ಅನಾರೋಗ್ಯಕಾರಿ ಆಹಾರ ಪದ್ಧತಿ, ದೈಹಿಕ ಚಟುವಟಿಕೆಗಳು ಇಲ್ಲದೆ ಇರುವುದು, ದೇಹದಲ್ಲಿ ಹಾರ್ಮೋನುಗಳಲ್ಲಿ ಉಂಟಾಗುವ ಬದಲಾವಣೆಗಳು, ಅತಿಯಾದ ದೇಹದ ತೂಕ, ಕ್ಯಾಲ್ಸಿಯಂ ಆಹಾರ ಪದಾರ್ಥಗಳ ಕೊರತೆ ಹಾಗೂ ಕೆಲವೊಮ್ಮೆ ಅನುವಂಶೀಯ ಕಾರಣದಿಂದಾಗಿಯೂ ಕೂಡ ಸಂಧಿವಾತಕ್ಕೆ ಸಂಬಂಧಪಟ್ಟ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಈ ಕಾಯಿಲೆಯನ್ನು ನಿರ್ವಹಿಸಲು ಔಷಧಿಗಳು ಲಭ್ಯವಿದ್ದರೂ, ಆಹಾರ ಕ್ರಮದಲ್ಲಿ ಕೆಲವು ಆಹಾರಗಳನ್ನು ಸೇರ್ಪಡೆಗೊಳಿಸುವ ಮೂಲಕ ನೈಸರ್ಗಿಕವಾಗಿ ನೋವನ್ನು ನಿವಾರಿಸಿಕೊಳ್ಳಬಹುದು.

ಈ ನೋವನ್ನು ನಿವಾರಿಸಬಲ್ಲ ಸೂಪರ್ ಫುಡ್ ಗಳು ಇಂತಿವೆ...

ಹಸಿರು ತರಕಾರಿ, ಸೊಪ್ಪು
ಹೆಚ್ಚಿನ ಜನರು ಪಾಲಕ್‌, ಬ್ರೊಕೊಲಿಯಂತಹ ಎಲೆಗಳ ಸೊಪ್ಪನ್ನು ಇಷ್ಟಪಡುವುದಿಲ್ಲ, ಆದರೆ ಇವು ಫೈಬರ್, ವಿಟಮಿನ್ ಮತ್ತು ಖನಿಜಗಳಿಂದ ಕೂಡಿರುತ್ತದೆ. ಇವು ಸಂಧಿವಾತದಿಂದ ಉಂಟಾಗುವ ನೋವು ಮತ್ತು ಉರಿಯೂತವನ್ನು ಗುಣಪಡಿಸಲು ಉತ್ತಮವಾಗಿದೆ.

Story image

ನೈಸರ್ಗಿಕವಾಗಿ ವಿಟಮಿನ್ ಇ ಮತ್ತು ಸಿ ಯಿಂದ ತುಂಬಿರುವ, ಎಲೆಗಳ ಸೊಪ್ಪಿನ ಸೇವನೆಯು ಕಾರ್ಟಿಲೆಜ್ ಅನ್ನು ಬಲಪಡಿಸಲು ಮತ್ತು ಕೀಲುಗಳ ನಮ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುವ ಕಾಲಜನ್ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಬೆರ್ರಿ ಹಣ್ಣುಗಳು

Story image


ಆಂಟಿಆಕ್ಸಿಡೆಂಟ್‌ಗಳು, ಖನಿಜಗಳು ಮತ್ತು ವಿಟಮಿನ್‌ಗಳಿಂದ ತುಂಬಿರುವ ಬೆರ್ರಿಗಳನ್ನು ನೀವು ದಿನನಿತ್ಯದ ಆಹಾರದಲ್ಲಿ ಸೇರಿಸುವುದರಿಂದ ಉರಿಯೂತ, ನೋವು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಹೊಂದಿರುವ ಆಂಥೋಸಯಾನಿನ್‌ಗಳಂತಹ ಉತ್ಕರ್ಷಣ ನಿರೋಧಕಗಳಿಂದಾಗಿ ಜೀವಕೋಶಗಳು ಮತ್ತು ಅಂಗಾಂಶಗಳ ಆರೋಗ್ಯವನ್ನು ಉತ್ತಮವಾಗಿಸುತ್ತದೆ.

ಅರಿಶಿನ

Story image


ಸಂಧಿವಾತದ ನೋವನ್ನು ನಿವಾರಿಸಲು ಅರಿಶಿನವು ಪ್ರಯೋಜನಕಾರಿ ಎಂದು ವೈದ್ಯರು ಪರಿಗಣಿಸುತ್ತಾರೆ. ಏಕೆಂದರೆ, ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ.

ಶುಂಠಿ

Story image


ಮೊಣಕಾಲು ನೋವಿನಿಂದ ಸಂಪೂರ್ಣ ಪರಿಹಾರವನ್ನು ಪಡೆಯಲು ವೈದ್ಯರು ಶುಂಠಿಯನ್ನು ಪ್ರಯೋಜನಕಾರಿ ಎಂದು ಪರಿಗಣಿಸುತ್ತಾರೆ. ಶುಂಠಿಯನ್ನು ಆಹಾರದಲ್ಲಿ ಮಿಶ್ರಣ ಮಾಡುವ ಮೂಲಕ ಬಳಸಬಹುದು.

ಡ್ರೈಫ್ರೂಟ್ಸ್

ಕೊಬ್ಬಿನ ಅಂಶ ಎಂದ ಕೂಡಲೇ ಜನರು ದೂರ ಓಡುತ್ತಾರೆ. ಆದರೆ, ಕೊಬ್ಬಿನ ಅಂಶದಲ್ಲಿ ಎರಡು ವಿಧಗಳು ಕಂಡುಬರುತ್ತವೆ. ಆರೋಗ್ಯಕರವಾದ ಕೊಬ್ಬಿನ ಅಂಶಗಳು ಒಂದು ಕಡೆಯಾದರೆ, ಕೆಟ್ಟ ಕೊಬ್ಬಿನ ಅಂಶ ಅಥವಾ ಕೊಲೆಸ್ಟ್ರಾಲ್ ಅಂಶ ಮತ್ತೊಂದು ಕಡೆ. ಆರೋಗ್ಯಕರವಾದ ಕೊಬ್ಬಿನ ಅಂಶಗಳು ನಮ್ಮ ದೇಹಕ್ಕೆ ತುಂಬಾ ಅವಶ್ಯಕ ಮತ್ತು ನಾವು ತೆಗೆದುಕೊಳ್ಳಬೇಕು ಕೂಡ. ಇವುಗಳು ಸಿಗುವ ಮುಖ್ಯ ಆಹಾರ ಪದಾರ್ಥಗಳು ಎಂದರೆ ಅದು ಡ್ರೈಫ್ರೂಟ್ಸ್. ಬಾದಾಮಿ ಗೋಡಂಬಿ ಪಿಸ್ತ ವಾಲ್ನಟ್ ಖರ್ಜೂರ ಎಳ್ಳು ಫ್ಲಾಕ್ಸ್ ಸೀಡ್ಸ್ ಸೂರ್ಯಕಾಂತಿ ಬೀಜಗಳು ಇತ್ಯಾದಿ.

ಇದರ ಜೊತೆಗೆ ಎಕ್ಸ್ಟ್ರಾ ವರ್ಜಿನ್ ಆಲಿವ್ ಆಯಿಲ್ ಮತ್ತು ತುಪ್ಪದ ಬಳಕೆಯನ್ನು ಕೂಡ ಆಹಾರದಲ್ಲಿ ಮಾಡಿಕೊಳ್ಳುವುದರಿಂದ ಮೂಳೆಗಳಿಗೆ ಅತ್ಯಂತ ಸಹಕಾರಿ ಎನಿಸುವ ಒಳ್ಳೆಯ ಕೊಬ್ಬಿನ ಅಂಶಗಳು ಸಿಗುತ್ತಾ ಹೋಗುತ್ತವೆ.

Story image

ತೆಂಗಿನಕಾಯಿ ಅಥವಾ ಕೊಬ್ಬರಿ ನಿರಂತರವಾಗಿ ಬಳಕೆ ಮಾಡುವುದರಿಂದ ಮೂಳೆಗಳು ಮತ್ತು ಕೀಲುಗಳು ತಮಗೆ ಅವಶ್ಯಕವಾಗಿ ಬೇಕಾಗಿರುವ ಸಾಕಷ್ಟು ಖನಿಜಾಂಶಗಳನ್ನು ಮತ್ತು ವಿಟಮಿನ್ ಅಂಶಗಳನ್ನು ಹೀರಿಕೊಂಡು ಆರ್ಥ್ರೈಟಿಸ್ ಮತ್ತು ಆಸ್ಟಿಯೋಪೋರೋಸಿಸ್ ಸಮಸ್ಯೆಗಳಿಗೆ ಹೊಂದಿಕೊಂಡಂತೆ ಇರುವ ತೊಂದರೆಗಳನ್ನು ದೂರ ಮಾಡುತ್ತದೆ.

ಆಲಿವ್ ಎಣ್ಣೆ

Story image


ಆಲಿವ್ ಎಣ್ಣೆಯಲ್ಲಿ ಒಲಿಯೊಕಾಂಥಲ್ ಇದು, ಐಬುಪ್ರೊಫೇನ್‌ನಂತೆಯೇ ಕೆಲಸ ಮಾಡುತ್ತದೆ. ಆಹಾರಕ್ರಮದಲ್ಲಿ ಈ ಎಣ್ಣೆಯನ್ನು ಸೇರ್ಪಡೆಗೊಳಿಸುವುರದಿದಂದ ೃಸಂಧಿವಾತದ ನೋವು ಕಡಿಮೆಯಾಗಲಿದೆ.

ಗ್ರೀನ್ ಟೀ
ಒಂದು ಕಪ್ ಗ್ರೀನ್‌ ಟೀ ಕುಡಿಯುವುದರಿಂದ ಇದು ನಿಮ್ಮ ಇಂದ್ರಿಯಗಳನ್ನು ಆಕ್ಟೀವ್ ಮಾಡುವುದಲ್ಲದೆ ದೇಹದಲ್ಲಿನ ಊತ, ಕೀಲುಗಳು ಮತ್ತು ಮೊಣಕಾಲುಗಳಲ್ಲಿನ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

Story image

ಏಕೆಂದರೆ ಹಸಿರು ಚಹಾವು ಎಪಿಗಲ್ಲೊಕಾಟೆಚಿನ್-3-ಗ್ಯಾಲೇಟ್ (ಇಜಿಸಿಜಿ) ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಅಧ್ಯಯನಗಳ ಪ್ರಕಾರ, ಈ ಘಟಕಾಂಶವು ದೇಹದಲ್ಲಿ ಉರಿಯೂತದ ರಾಸಾಯನಿಕಗಳ ರಚನೆಯನ್ನು ಕಡಿಮೆ ಮಾಡುತ್ತದೆ ಮತ್ತು ಮೊಣಕಾಲಿನ ಕೀಲು ನೋವನ್ನು ಗುಣಪಡಿಸಲು ಮತ್ತು ಸಂರಕ್ಷಿಸಲು ಕಾರ್ಟಿಲೆಜ್ ಒಡೆಯುವಿಕೆಯನ್ನು ತಡೆಯುತ್ತದೆ.

ಅನಾನಸ್

Story image


ಉರಿಯೂತದಂತಹ ಸಮಸ್ಯೆಗಳನ್ನು ದೂರಾಗಿಸಬಲ್ಲ ಗುಣಲಕ್ಷಣಗಳ ಕಿಣ್ವಗಳು ಅನಾನಸ್‌ನಲ್ಲಿದೆ. ತಾಜಾ ಅನಾನಸ್ ಸಂಧಿವಾತ ರೋಗಲಕ್ಷಣಗಳಿಂದ ಪರಿಹಾರವನ್ನು ನೀಡುತ್ತದೆ.

ಈ ಆಹಾರಗಳು ಸಂಧಿವಾತದ ನೋವನ್ನು ನಿವಾರಿಸಲು ಸಹಾಯ ಮಾಡಬಹುದಾದರೂ ಸಮಸ್ಯೆ ತೀವ್ರಗೊಂಡಾಗ ಆರೋಗ್ಯ ವೃತ್ತಿಪರರನ್ನು ಸಮಾಲೋಚಿಸುವುದು ಅತ್ಯಗತ್ಯವಾಗಿರುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.