ಕೊರೊನಾ ರೂಪಾಂತರಿ ತಳಿ ಎಂದರೇನು? ನಾವು ಸುರಕ್ಷಿತವಾಗಿರುವುದು ಹೇಗೆ?
ಕೊರೊನಾ ಕಾಲದಲ್ಲಿ ಹಲವಾರು ಸುದ್ದಿಗಳು ನಮ್ಮ ನಡುವೆ ಹರಿದಾಡುತ್ತಿವೆ. ಅವುಗಳಲ್ಲಿ ಕೆಲವು ನಮಗೆ ನೆಮ್ಮದಿ ದಯಪಾಲಿಸಿದರೆ ಇನ್ನು ಕೆಲವು ಆತಂಕ ಉಂಟುಮಾಡುತ್ತಿವೆ.

ಕೊರೊನಾ ಕಾಲದಲ್ಲಿ ಹಲವಾರು ಸುದ್ದಿಗಳು ನಮ್ಮ ನಡುವೆ ಹರಿದಾಡುತ್ತಿವೆ. ಅವುಗಳಲ್ಲಿ ಕೆಲವು ನಮಗೆ ನೆಮ್ಮದಿ ದಯಪಾಲಿಸಿದರೆ ಇನ್ನು ಕೆಲವು ಆತಂಕ ಉಂಟುಮಾಡುತ್ತಿವೆ. ಈ ಗೊಂದಲವನ್ನು ಕಡಿಮೆ ಮಾಡಲು ಐದು ಪ್ರಶ್ನೆಗಳು ಹಾಗೂ ಉತ್ತರಗಳನ್ನು ನೀಡಲಾಗಿದೆ.
1. ಕೊರೊನಾ ರೂಪಾಂತರಿ ತಳಿ ಎಂದರೆ ಏನು?
ವೈರಸ್ ಗಳು ತಮ್ಮ ಅಸ್ತಿತ್ವ ಕಾಪಾಡಿಕೊಳ್ಳಲು ಪರಿಸರಕ್ಕೆ ತಕ್ಕಂತೆ ಬದಲಾಗುತ್ತವೆ. ಅದೇ ರೀತಿ ಕೊರೊನಾ ವೈರಾಣು ಕೂಡಾ ರೂಪಾಂತರಗೊಂಡಿದೆ. ಆ ಮೂಲಕ ಕೊರೊನಾ ಸೋಂಕನ್ನು ಹೆಚ್ಚಿನ ಸಂಖ್ಯೆಯ ಜನರಿಗೆ ಹರಡುವ ಮೂಲಕ ತನ್ನ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಹೀಗಾಗಿಯೇ ರೂಪಾಂತರಗೊಂಡ ಕೊರೊನಾ ವೈರಾಣುವಿನ ಹಲವು ತಳಿಗಳು ಇಂದು ಜಗತ್ತಿನಾದ್ಯಂತ ಹರಡಿಕೊಂಡಿದೆ.
2. ಕೊರೊನಾ ರೂಪಾಂತರಿ ತಳಿಗಳು ಅಪಾಯಕಾರಿಯೇ?
ರೂಪಾಂತರಿ ತಳಿಗಳು ಒಂದಕ್ಕಿಂತ ಮತ್ತೊಂದು ಎಷ್ಟು ಅಪಾಯಕಾರಿ ಎನ್ನುವುದು ಅವುಗಳ ವಂಶವಾಹಿಯ ಮೇಲೆ ಅವಲಂಬಿತವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ತಿಳಿದುಬಂದಿರುವ ಸಂಗತಿಯೆಂದರೆ, ಪ್ರತಿಯೊಂದು ರೂಪಾಂತರಿ ತಳಿಯೂ ವಿಭಿನ್ನವಾಗಿದ್ದು ವಿಭಿನ್ನ ಬಗೆಯ ಗುಣವಿಶೇಷಗಳನ್ನು ಹೊಂದಿದೆ. ಉದಾಹರಣೆಗೆ ಡೆಲ್ಟಾ ಕೊರೊನಾ ವೈರಾಣು ಮಿಕ್ಕೆಲ್ಲಾ ತಳಿಗಳಿಗಿಂತ ವೇಗವಾಗಿ ಹರಡಬಲ್ಲ ಸಾಮರ್ಥ್ಯವನ್ನು ಹೊಂದಿದೆ.
3. ಅಮೆರಿಕದಲ್ಲಿ ಯಾವ ವೈರಾಣು ಹೆಚ್ಚಾಗಿ ಕಂಡುಬಂದಿದೆ?
ಹಲವು ತಿಂಗಳುಗಳಿಂದ ಅಮೆರಿಕದಲ್ಲಿ ಡೆಲ್ಟಾ ವೈರಾಣು ಅತ್ಯಧಿಕ ಸಂಖ್ಯೆಯ ಮಂದಿಗೆ ಹರಡಿರುವುದು ಕಂಡುಬಂದಿದೆ. ಮೇ ತಿಂಗಳಿಗೂ ಹಿಂದೆ ಅಮೆರಿಕದಲ್ಲಿ ಆಲ್ಫಾ ವೈರಾಣು ಪ್ರಾಬಲ್ಯವನ್ನು ಮೆರೆದಿತ್ತು. ಅದರ ಸ್ಥಾನವನ್ನು ಡೆಲ್ಟಾ ವೈರಾಣು ತುಂಬಿದೆ.
4. ರೂಪಾಂತರಿ ತಳಿ ವೈರಾಣುಗಳ ವಿರುದ್ಧ ಲಸಿಕೆ ಅದೆಷ್ಟು ಪರಿಣಾಮಕಾರಿ?
ಈ ಬಗ್ಗೆ ಖಚಿತ ಮಾಹಿತಿ ಲಭ್ಯವಿಲ್ಲ. ಆದರೆ, ಕುರಿತಾಗಿ ಪ್ರಯೋಗಗಳು ನಡೆದಿವೆ. ಈಗಾಗಲೇ ಹಲವು ಪ್ರಯೋಗಗಳು ಈ ಕುರಿತಾಗಿ ಬೆಳಕು ಚೆಲ್ಲಿದ್ದರೂ ಅವುಗಳ ಸತ್ಯಾಸತ್ಯತೆಯನ್ನು ಸರ್ಕಾರಗಳು ಹಾಗೂ ವಿಶ್ವ ಆರೋಗ್ಯ ಸಂಸ್ಥ್ಯೆ ದೃಢೀಕರಿಸಿಲ್ಲ. ಆದರೆ ಲಸಿಕೆ ಹಾಕಿಸಿಕೊಂಡವರ ದೇಹ ಕೊರೊನಾ ತಳಿಗಳ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
5. ನಾವು ಸುರಕ್ಷಿತವಾಗಿರುವುದು ಹೇಗೆ?
ಮೊದಲಿಗೆ ಕೊರೊನಾ ಲಸಿಕೆಯನ್ನು ಪಡೆದುಕೊಂಡಿರಬೇಕು. ಕಳೆದ ಹಲವು ತಿಂಗಳುಗಳಲ್ಲಿ ಅಮೆರಿಕದಲ್ಲಿ ಕೊರೊನಾದಿಂದ ಸತ್ತ ಜನರಲ್ಲಿ ಶೇ.99.5 ಪ್ರತಿಶತ ಮಂದಿ ಲಸಿಕೆ ಪಡೆದುಕೊಂಡಿರಲಿಲ್ಲ ಎನ್ನುವುದು ಲಸಿಕೆಯ ಮಹತ್ವವನ್ನು ಸಾರುತ್ತದೆ. ಲಸಿಕೆಯ ಜೊತೆಗೆ ಮಾಸ್ಕ್ ತೊಡುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕೂಡಾ ಬಹಳ ಮುಖ್ಯ. ಲಸಿಕೆ ಪಡೆದುಕೊಂಡ ಮಾತ್ರಕ್ಕೆ ಕೊರೊನಾ ಮಾರ್ಗಸೂಚಿಯನ್ನು ನಿರ್ಲಕ್ಷಿಸಬಾರದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


