ಆರೋಗ್ಯ

ಗಂಡು ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಲ್ಲೇ ಹೆಚ್ಚು ಖಿನ್ನತೆ!

ಗಂಡು ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆಂದು ಸಂಶೋಧನೆಯೊಂದು ಹೇಳಿದೆ...

ಗಂಡು ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಲ್ಲೇ ಹೆಚ್ಚು ಖಿನ್ನತೆ!
ಸಂಗ್ರಹ ಚಿತ್ರ
Published On :
ವಾಷಿಂಗ್ಟನ್: ಗಂಡು ಮಕ್ಕಳಿಗೆ ಜನ್ಮ ನೀಡುವ ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗುತ್ತಾರೆಂದು ಸಂಶೋಧನೆಯೊಂದು ಹೇಳಿದೆ.
ಗಂಡು ಮಕ್ಕಳಿಗೆ ಜನ್ಮ ನೀಡುವ ಸೇ.71-79 ರಷ್ಟು ಮಹಿಳೆಯರಲ್ಲಿ ಪ್ರಸವಾನಂತರದ ಖಿನ್ನತೆ (ಪಿಎನ್'ಡಿ)ಯನ್ನು ಎದುರಿಸುತ್ತಾರೆಂದು ಯುನಿವರ್ಸಿಟಿ ಆಫ್ ಕೆಂಟ್ ಸ್ಟಡೀಡ್ ಪಿಎನ್'ಡಿ ಸಂಶೋಧಕರು ಹೇಳಿದ್ದಾರೆ. 
ಪ್ರಸವಕ್ಕೆ ತೆರಳುವ ಬಹುತೇಕ ಮಹಿಳೆಯರು ಶೇ.174 ರಷ್ಟು ಪ್ರಸವಾನಂತರದ ಖಿನ್ನತೆಗೊಳಗಾಗುತ್ತಾರೆ. ಇದರಲ್ಲಿ ಹೆಣ್ಣುಮಕ್ಕಳಿಗೆ ಜನ್ಮ ನೀಡುವ ಮಹಿಳೆಯರಿಗೆ ಹೋಲಿಕೆ ಮಾಡಿದರೆ, ಗಂಡು ಮಕ್ಕಳಿಗೆ ಜನ್ಮ ನೀಡುವ ಶೇ.79 ರಷ್ಟು ಮಹಿಳೆಯರು ಹೆಚ್ಚು ಖಿನ್ನತೆಗೊಳಗಾಗಿರುತ್ತಾರೆಂದು  ಜರ್ನಲ್ ಆಫ್ ಸೋಶಿಯಲ್ ಆ್ಯಂಡ್ ಮೆಡಿಸಿನ್ ವರದಿ ಮಾಡಿದೆ. 
ಗಂಡು ಮಕ್ಕಳಿಗೆ ಜನ್ಮ ನೀಡುವುದು ಹಾಗೂ ಪ್ರಸವದ ವೇಳೆ ಎದುರಾಗುವ ತೊಡಕುಗಳು ಅಪಾಯಕಾರಿ ಅಂಶಗಳಾಗಿವೆ. ಇವುಗಳಿಂದ ಮಹಿಳೆಯ ಸ್ಥಿತಿಯನ್ನು ಕಂಡು ಹಿಡಿದು ಆರೋಗ್ಯ ತಜ್ಞರು ಚಿಕಿತ್ಸೆ ನೀಡಲು ಸಹಾಯಕವಾಗುತ್ತವೆ ಎಂದು ಸಂಶೋಧಕರದ ಡಾ. ಸಾರಾ ಜಾನ್ಸ್ ಮತ್ತು ಡಾ.ಸಾರಾ ಮೈಯರ್ಸ್ ಹೇಳಿದ್ದಾರೆ. 
ಖಿನ್ನತೆ, ಆತಂಕ, ಒತ್ತಡಗಳ ಲಕ್ಷಣಗಳ ಪ್ರವೃತ್ತಿ ಹೊಂದಿರುವ ಮಹಿಳೆಯರಲ್ಲಿ ಹೆಚ್ಚು ಪಿಎನ್'ಡಿ ಅಪಾಯ ಹೆಚ್ಚಿರುತ್ತದೆ. ಮಗುವಿಗೆ ಜನ್ಮ ನೀಡಿದ ಬಳಿಕ ಇಂತಹ ಮಹಿಳೆಯರಲ್ಲಿ ಖಿನ್ನತೆಯ ಪ್ರಮಾಣ ಕಡಿಮೆಯಾಗಬಹುದು. ಮಾನಸಿಕ ಆರೋಗ್ಯದ ಬಗ್ಗೆ ತಿಳಿದ ಬಳಿಕ ಇಂತಹ ಮಹಿಳೆಯರ ಮೇಲೆ ಹೆಚ್ಚು ನಿಗಾವಹಿಸುವುದರಿಂದ ಖಿನ್ನತೆ ಗುಣವಾಗಲಿದೆ. ಖಿನ್ನತೆಗೊಳಗಾಗುವ ಮಹಿಳೆಯರಿಗೆ ಪರಿಣಾಮಕಾರಿಯಾದ ಸಹಾಯ ಹಾಗೂ ಶಕ್ತಿಯ ಅಗತ್ಯವಿರುತ್ತದೆ. 
ಪಿಎನ್'ಡಿ ಪ್ರಮಾಣವನ್ನು ಕಡಿಮೆ ಮಾಡಬಹುದು. ಖಿನ್ನತೆ ಎದುರಾದಾಗ ಮಹಿಳೆಯರಿಗೆ ಹೆಚ್ಚು ಸಹಾಯ ಹಾಗೂ ಶಕ್ತಿ ನೀಡುವುದರಿಂದ ಖಿನ್ನತೆ ಕಡಿಮೆಯಾಗುತ್ತದೆ. ಗಂಡು ಮಕ್ಕಳಿಗೆ ಜನ್ಮ ನೀಡಿದಾಗ ಅಥವಾ ಪ್ರಸವದ ವೇಳೆ ಸಮಸ್ಯೆಗಳು ಎದುರಾದಾಗ ಮಹಿಳೆಯರಲ್ಲಿ ಹೆಚ್ಚು ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇಂತಹ ಸಂದರ್ಭದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆಯರಿಗೆ ಮೊದಲ ಕೆಲ ವಾರಗಳು ಹಾಗೂ ತಿಂಗಳುಗಳ ಕಾಲ ಹೆಚ್ಚೆಚ್ಚು ಸಹಾಯ ಹಾಗೂ ಶಕ್ತಿಯ ಅಗತ್ಯವಿರುತ್ತದೆ ಎಂದು ಡಾ.ಜಾನ್ಸ್ ಹೇಳಿದ್ದಾರೆ .

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.