ಆರೋಗ್ಯ

ಅನಿಯಮಿತ ಋತುಚಕ್ರ ಸಮಸ್ಯೆಗೆ ವಾಯು ಮಾಲಿನ್ಯವೂ ಕಾರಣ!

ವಾತವಾರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯವೂ ಯುವತಿಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಭಾರತೀಯ ಮೂಲದ ಸಂಶೋಧಕರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಅನಿಯಮಿತ ಋತುಚಕ್ರ ಸಮಸ್ಯೆಗೆ ವಾಯು ಮಾಲಿನ್ಯವೂ ಕಾರಣ!
ವಾಯುಮಾಲಿನ್ಯದಿಂದ ಯುವತಿಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆಯ ಸಾಂದರ್ಭಿಕ ಚಿತ್ರ
Published On :

ಬೆಂಗಳೂರು : ವಾತವಾರಣದಲ್ಲಿ ಹೆಚ್ಚುತ್ತಿರುವ ಮಾಲಿನ್ಯವೂ ಯುವತಿಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆಗೆ ಕಾರಣವಾಗುತ್ತಿದೆ ಎಂದು ಭಾರತೀಯ ಮೂಲದ ಸಂಶೋಧಕರು ನಡೆಸಿದ ಸಂಶೋಧನೆಯಿಂದ ತಿಳಿದುಬಂದಿದೆ.

ಮಿತಿ ಮೀರಿದ ವಾಯುಮಾಲಿನ್ಯದಿಂದ ಪ್ರೌಢಶಾಲೆಯ ಹಂತದಲ್ಲಿರುವ ಯುವತಿಯರಲ್ಲಿ ಅನಿಯಮಿತ ಋತುಚಕ್ರ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ವಾಯುಮಾಲಿನ್ಯದಿಂದ ಬಂಜೆತನ , ಮೆಟಾಬಾಲಿಕ್ ಸಿಡ್ರೋಮ್ ಮತ್ತಿತರ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ.ಹೃದಯ ಸಂಬಂಧಿ, ನರರೋಗ ಸಮಸ್ಯೆಯೂ ಉಲ್ಬಣಗೊಳ್ಳುತ್ತವೆ ಎಂದು ಬೋಸ್ಟಾನ್ ವಿಶ್ವವಿದ್ಯಾಲಯದ  ಸಹಾಯಕ ಪ್ರೋಫೆಸರ್  ಶೃತಿ ಮಹಾಲಿಂಗಯ್ಯ ಹೇಳಿದ್ದಾರೆ.

ಅನಿಯಮಿತ ಋತುಚಕ್ರ  ಹಾರ್ಮೋನ್ ಗಳ ಕಾರ್ಯಚಟುವಟಿಕೆ ಮೋಲೂ ತೀವ್ರ ರೀತಿಯ ಪರಿಣಾಮ ಬೀರಲಿದೆ . ವಾಯು ಮಾಲಿನ್ಯ ಮಾತ್ರವಲ್ಲದೇ, ಅನಿಯಮಿತ ಋತುಚಕ್ರ ಸಮಸ್ಯೆಂದಾಗಿ ಇಂತಹ ಸಮಸ್ಯೆಗಳು ಉಂಟಾಗುತ್ತವೆ ಎಂದು  ಅವರು
 ಹೇಳಿದ್ದಾರೆ.

ಹ್ಯುಮನ್ ರಿ ಪ್ರೊಢಕ್ಷನ್  ಜರ್ನಲ್ ನಲ್ಲಿ ಈ ಅಧ್ಯಯನದ ಬಗ್ಗೆ ಬೆಳಕು ಚೆಲ್ಲಲಾಗಿದೆ. ಆರೋಗ್ಯ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದ ಇಬ್ಬರು ನರ್ಸ್ ಗಳು ಹಾಗೂ ಮಾಲಿನ್ಯದಿಂದ ಕೂಡಿರುವ ಸ್ಥಳವನ್ನು ಆಯ್ಕೆ ಮಾಡಿಕೊಂಡು ಪ್ರಾಯೋಗಿಕವಾಗಿ ಅಧ್ಯಯನ ನಡೆಸಿದಾಗ ಈ ಮಾಹಿತಿ ತಿಳಿದುಬಂದಿದೆ,

ಜಾಗತಿಕವಾಗಿ ಹಾಗೂ ಪ್ರತ್ಯೇಕವಾಗಿ ಮಾಲಿನ್ಯ ನಿಯಂತ್ರಿಸಿದಾಗ ಮಾತ್ರ ಮನುಷ್ಯರಲ್ಲಿ ಹೆಚ್ಚುತ್ತಿರುವ ರೋಗವನ್ನು ತಡೆಗಟ್ಟಬಹುದು ಎಂದು ಶೃತಿ ಮಹಾಲಿಂಗಯ್ಯ ತಿಳಿಸಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.