ಸಂಗಾತಿಯನ್ನು ಹೋಲಿಕೆ ಮಾಡುವುದು ಸಂಬಂಧವನ್ನು ಬೆಳಸಲೂಬಹುದು, ಒಡೆಯಲೂಬಹುದು!
ಸಂಬಂಧಗಳಲ್ಲಿ ಸಂತಸ ಕಂಡುಕೊಳ್ಳುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು ಸಂಗಾತಿಯನ್ನು ಬೇರೆಯವರಿಗೆ ಹೋಲಿಕೆ ಮಾಡುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.

ನ್ಯೂಯಾರ್ಕ್: ಸಂಬಂಧಗಳಲ್ಲಿ ಸಂತಸ ಕಂಡುಕೊಳ್ಳುವುದು ಹಾಗೂ ಅದನ್ನು ಉಳಿಸಿಕೊಳ್ಳುವುದು ಸಂಗಾತಿಯನ್ನು ಬೇರೆಯವರಿಗೆ ಹೋಲಿಕೆ ಮಾಡುವುದರ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೊಸ ಸಂಶೋಧನೆಯೊಂದು ಹೇಳಿದೆ.
ಯಾವುದೇ ವ್ಯಕ್ತಿಗೆ ತನ್ನ ಸಂಗಾತಿ ತನ್ನ ಆದರ್ಶಗಳ ಆದ್ಯತೆಗಳನ್ನು ಈಡೇರಿಸುವುದು ಮುಖ್ಯವಾಗಿರುವುದಿಲ್ಲ. ಸಂಬಂಧಗಳು ಸಂತಸ ನೀಡುವುದಕ್ಕೆ ಆದರ್ಶ ಅಡ್ಡಿ ಬರುವುದಿಲ್ಲ, ಅತ್ಯುತ್ತಮ ಸಂಗಾತಿಗಳನ್ನು ಪಡೆಯುವುದರಲ್ಲಿ ಸಂಬಂಧಗಳು ಉಳಿಯುತ್ತವೆ ಎಂದು ಟೆಕ್ಸಾಸ್ ನ ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಸಂಗಾತಿ ಹಾಗೂ ಸಂಶೋಧನೆ ಕುರಿತಾದ ಸಂಶೋಧನೆಗಾಗಿ ಸುಮಾರು ಸಂಗಾತಿಯೊಂದಿಗೆ ಏಳು ವರ್ಷ ಕಾಲ ಕಳೆದ 259 ವಯಸ್ಕರ( 119 ಪುರುಷರು ಹಾಗೂ 140 ಮಹಿಳೆಯರು)ನ್ನು ಸಮೀಕ್ಷೆಗೆ ಒಳಪಡಿಸಿದ್ದಾರೆ. ಸಂಶೋಧನೆಯಲ್ಲಿ ಸಂಗಾತಿಯನ್ನು ಹೋಲಿಕೆ ಮಾಡುವುದು ಸಂಬಂಧವನ್ನು ಬೆಳಸಲೂಬಹುದು, ಒಡೆಯಲೂಬಹುದು ಎಂಬುದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


