ಮಾರುಕಟ್ಟೆಗೆ ಲಗ್ಗೆಯಿಡಲಿದೆ ಲ್ಯಾಬ್‌ನಲ್ಲಿ ತಯಾರಿಸಲ್ಪಟ್ಟ ಕೃತಕ ಮಾಂಸ!
ಈ ಕೃತಕ ಮಾಂಸಗಳು ಸಾಮಾನ್ಯ ಪ್ರಾಣಿಗಳ ಮಾಂಸಕ್ಕಿಂತ ಆರೋಗ್ಯಕರವೂ, ಪರಿಸರ ಸ್ನೇಹಿಯೂ ಆಗಿದೆ ಅಂತಾರೆ ವಿಜ್ಞಾನಿಗಳು....

Published On :
ವಾಷಿಂಗ್ಟನ್: ಮಾಂಸಾಹಾರ ಮತ್ತು ಮಾಂಸ ಸೇವನೆ, ರಾಜಕೀಯ, ಸಾಮಾಜಿಕ ಗಲಭೆಗಳಿಗೆ ಕಾರಣವಾಗುತ್ತಿರುವ ಹೊತ್ತಲ್ಲೇ ಲ್ಯಾಬ್‌ನಲ್ಲಿ ತಯಾರಿಸಲ್ಪಟ್ಟ ಕೃತಕ ಮಾಂಸಗಳು ಮಾರುಕಟ್ಟೆಗೆ ಬರಲು ಸಿದ್ಧವಾಗುತ್ತಿದೆ.
ಬೀಫ್, ಹಂದಿ ಮಾಂಸ, ಹಾವು ಮಾಂಸ, ನಾಯಿ ಮಾಂಸ ಈ ಎಲ್ಲ ಮಾಂಸಗಳ ಸೇವನೆಯ ಪರ ವಿರುದ್ಧ ಚರ್ಚೆಗಳು ನಡೆದು, ಕಲಹದಲ್ಲಿ ಅಂತ್ಯಗೊಂಡಿರುವ ಪ್ರಕರಣಗಳು ಸಾಕಷ್ಟು ಇವೆ. ಮಾಂಸಾಹಾರದ ವಿರುದ್ಧ ದನಿಯೇಳುತ್ತಿದ್ದಂತೆ, ಮಾಂಸ ಸೇವನೆ ಮಾಡದೆ ನಾವು ಬದುಕುವುದಾದರೂ ಹೇಗೆ ಅಂತಾರೆ ಮಾಂಸಾಹಾರಿಗಳು. ಹೀಗಿರುವಾಗ ಕೃತಕ ಮಾಂಸಗಳನ್ನು ಲ್ಯಾಬ್‌ನಲ್ಲೇ ತಯಾರಿಸುವಲ್ಲಿ ವಿಜ್ಞಾನಿಗಳು ಕಾರ್ಯ ನಿರತರಾಗಿದ್ದಾರೆ.
ಈ ಕೃತಕ ಮಾಂಸಗಳು ಸಾಮಾನ್ಯ ಪ್ರಾಣಿಗಳ ಮಾಂಸಕ್ಕಿಂತ ಆರೋಗ್ಯಕರವೂ, ಪರಿಸರ ಸ್ನೇಹಿಯೂ ಆಗಿದೆ ಅಂತಾರೆ ವಿಜ್ಞಾನಿಗಳು.
2013ರಲ್ಲಿ ಡಚ್ ವಿಜ್ಞಾನಿಗಳು ಲ್ಯಾಬ್‌ನಲ್ಲಿ ತಯಾರಿಸಿದ ಕೃತಕ ಮಾಂಸದಿಂದ ಬರ್ಗರ್ ಮಾಡಿದ್ದರು. ಅದರ ಬೆಲೆಯೆಷ್ಟು ಗೊತ್ತಾ? 3330,000 ಡಾಲರ್ ! ಅಂದರೆ 21, 958, 200 ರುಪಾಯಿ.
ಎರಡು ತಿಂಗಳ ಹಿಂದೆ ಅಮೆರಿಕ ಮೇಂಫಿಸ್ಟ್ ಮೀಟ್ ಎಂಬ ಕಂಪೆನಿ ಮೊದಲ ಬಾರಿಗೆ ಲ್ಯಾಬ್ ನಿರ್ಮಿತ ಮೀಟ್ ಬಾಲ್ ತಯಾರಿಸಿತ್ತು. ಸರಿ ಸುಮಾರು 500 ಗ್ರಾಂ ಮೀಟ್ ಬಾಲ್ ನ ಬೆಲೆ 18,000 ಡಾಲರ್ (1196990.10 ರು). ಇದು ನಿಜವಾದ ಮಾಂಸಕ್ಕಿಂತ ಟೇಸ್ಟಿ ಆಗಿತ್ತು ಎಂದು ಗ್ರಾಹಕರು ಅಭಿಪ್ರಾಯ ಪಟ್ಟಿದ್ದರು.
ಇನ್ನು ಕೆಲವೇ ವರ್ಷಗಳಲ್ಲಿ ಕೃತಕ ಮಾಂಸದಿಂದ ತಯಾರಿಸಲ್ಪಟ್ಟ ಆಹಾರ ವಸ್ತುಗಳು ಮಾರುಕಟ್ಟೆಗೆ ಬರಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


