'ಡೇಟ್'ಗಳಿಂದ ಭಾರತೀಯ ಪುರುಷರು ನಿರೀಕ್ಷಿಸುವುದೇನು?
ಡೇಟಿಂಗ್ ಆಪ್ ಒಂದು ನಡೆಸಿರುವ ದೇಶವ್ಯಾಪಿ ಸಮೀಕ್ಷೆಯಲ್ಲಿ, ೮೦% ಭಾರತಿಯ ಪುರುಷರು ತಮ್ಮ 'ಡೇಟ್'ಗಳನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದಾಗ ಕೆಂಪು ಲಿಪ್ಸ್ಟಿಕ್ ಹಚ್ಚಿರಬೇಕು

ನವದೆಹಲಿ: ಡೇಟಿಂಗ್ ಆಪ್ ಒಂದು ನಡೆಸಿರುವ ದೇಶವ್ಯಾಪಿ ಸಮೀಕ್ಷೆಯಲ್ಲಿ, ೮೦% ಭಾರತಿಯ ಪುರುಷರು ತಮ್ಮ 'ಡೇಟ್'ಗಳನ್ನು ಮೊದಲ ಬಾರಿಗೆ ಭೇಟಿ ಮಾಡಿದ್ದಾಗ ಕೆಂಪು ಲಿಪ್ಸ್ಟಿಕ್ ಹಚ್ಚಿರಬೇಕು ಮತ್ತು ಅವರೇ ಮೊದಲ ಮುಂದೆಜ್ಜೆಯನ್ನು ಇರಿಸಬೇಕೆಂದು ನಿರೀಕ್ಷಿಸುತ್ತಾರೆ ಎನ್ನುತ್ತದೆ.
ಮಹಿಳೆಯರು 'ಡೇಟ್'ಗೆ ಹೋಗುವುದಕ್ಕೂ ಮುಂಚಿತವಾಗಿ ತಮ್ಮ ಧಿರಿಸು, ಅಲಂಕಾರ ಮತ್ತು ಸೌಂದರ್ಯದ ನೋಟದ ಬಗ್ಗೆ ಹೆಚ್ಚು ಗಮನ ಹರಿಸುತ್ತಾರಂತೆ. ೧೮ ರಿಂದ ೩೦ ವರ್ಷದ ಭಾರತೀಯ ಪುರುಷರು ಮತ್ತು ಮಹಿಳೆಯರ ನಡುವೆ ಪ್ರಖ್ಯಾತವಾಗಿರುವ ಡೇಟಿಂಗ್ ಆಪ್ 'ಟ್ರೂಲಿಮ್ಯಾಡ್ಲಿ', ಗೊಂದಲಕಾರಿ ಸನ್ನಿವೇಶದಲ್ಲಿ ಉಪಯೋಗವಾಗುವ ಕೆಲವು ಸಲಹೆಗಳನ್ನು ಹಂಚಿಕೊಂಡಿದೆ.
'ಡೇಟ್'ಗಾಗಿ ಹೊಂದುವ ಧಿರಿಸನ್ನು ಆಯ್ಕೆ ಮಾಡುವಾಗ, ಕ್ಲಾಸಿಕ್ ಬಿಳಿ ಟೀ ಶರ್ಟ್ ಮತ್ತು ನೀಲಿ ಜೀನ್ಸ್ ಪ್ಯಾಂಟ್ ಹೊಂದಾಣಿಕೆ ೪೩% ಜನರ ಮನಗೆದ್ದಿದೆ.
ಇದರ ಹಿಂದಕ್ಕೆ ಇರುವುದು ಕೆಂಪು ಧಿರಿಸು ಮತ್ತು ಹೈ ಹೀಲ್ಸ್. ಭಾರತೀಯ ಉಡುಗೆಯನ್ನು ೧೬% ಭಾರತೀಯ ಪುರುಷರು ಮೆಚ್ಚಿದ್ದಾರೆ.
ಈ ತಿಂಗಳ ಮೊದಲ ಭಾಗದಲ್ಲಿ ನಡೆಸಲಾಗಿರುವ ಸಮೀಕ್ಷೆಯಲ್ಲಿ ಭಾರತದ ದೊಡ್ಡ ಮತ್ತು ಸಣ್ಣ ಪಟ್ಟಣಗಳ ಸುಮಾರು ೬೪೫೦ ಜನ ಭಾಗವಹಿಸಿದ್ದಾರೆ.
"ಭಾರತೀಯ ಪುರುಷರು ತಾವು 'ಡೇಟ್' ಮಾಡಬಯಸುವ ಮಹಿಳೆಯರ ಬಗ್ಗೆ ತಮ್ಮ ಆಯ್ಕೆಯನ್ನು ತಿಳಿಸಿರುವುದು ಆಸಕ್ತಿದಾಯಕವಾಗಿದೆ. ಅವರು ಧೈರ್ಯದ ಮತ್ತು ಆತ್ಮ ವಿಶ್ವಾಸದ ಮಹಿಳೆಯರನ್ನು ಡೇಟ್ ಮಾಡಬಯಸುತ್ತಾರೆ. ಕೆಂಪು ಲಿಪ್ಸ್ಟಿಕ್ ಹಚ್ಚಿರಬೇಕು ಮತ್ತು ಅವರೇ ಮೊದಲ ಮುಂದೆಜ್ಜೆಯನ್ನು ಇರಿಸಬೇಕೆಂದು ನಿರೀಕ್ಷಿಸುತ್ತಾರೆ. ಇದು ಸಂಸ್ಕೃತಿಯಲ್ಲಿ ಆಗಿರುವ ಬದಲಾವಣೆಯನ್ನು ಸೂಚಿಸುತ್ತದೆ" ಎಂದು 'ಟ್ರೂಲಿಮ್ಯಾಡ್ಲಿ' ಆಪ್ ನ ಅಧಿಕಾರಿ ವಿಮೋಹ ಬಾಗ್ಲಾ ವಿವರಿಸುತ್ತಾರೆ.
ಮಹಿಳೆಯರೇ ಮೊದಲ ಹೆಜ್ಜೆ ಇಡುವುದನ್ನು ನಿರೀಕ್ಷಿಸುವುದರ ಬಗ್ಗೆ ಹೇಳುವ ಅವರು, ಇದು ೯೦% ಪುರುಷರ ಬಯಕೆ ಎನ್ನುತ್ತಾರೆ.
ಮಹಿಳೆಯರು ತಮ್ಮ ಕೂದಲಿನ ಜೊತೆ ಆಟವಾಡಿದಾಗ ಅದನ್ನು ೮೯% ಪುರುಷರು ಗಮನಿಸುತ್ತಾರೆ ಮತ್ತು ಅದನ್ನು ಇಷ್ಟ ಪಡುತ್ತಾರೆ. ಹಾಗು ೮೯% ಪುರುಷರು ಮಹಿಳೆಯರು ಅಚ್ಚು (ಟ್ಯಾಟು) ಹಾಕಿಸಿಕೊಳ್ಳುವುದನ್ನು ಇಷ್ಟಪಡುತ್ತಾರೆ.
ಕೆಟ್ಟ ಉಸಿರು ೬೭% ಪುರುಷರಿಗೆ ತಲೆನೋವಾಗಿ ಪರಿಣಮಿಸಿದೆ. 'ಡೇಟ್'ನಲ್ಲಿ ವ್ಯಯಿಸಲಾಗುವ ಹಣವನ್ನು ಶಾಸ್ತ್ರೀಯವಾಗಿ ಪುರುಷರೇ ನೀಡುವುದಕ್ಕೆ ೫೯% ಜನ ಒಲವು ತೋರಿದ್ದರೆ, ೪೦% ಪುರುಷರು ಡಚ್ ಟ್ರೀಟ್ (ಇಬ್ಬರೂ ಬಿಲ್ ಮೊತ್ತವನ್ನು ಹಂಚಿಕೊಳ್ಳುವುದು) ಸೂಕ್ತ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


