ದೊಡ್ಡ ಕರುಳು ಕ್ಯಾನ್ಸರ್ ಗೆ ಅರಶಿನದಿಂದ ಔಷಧಿ ಕಂಡುಹಿಡಿದ ಪ್ರೊ. ಭಾಸ್ಕರನ್
ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಗುದನಾಳದ ಕ್ಯಾನ್ಸರ್ ನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದಾದ, ಭಾರತದ ಪ್ರತಿಯೊಬ್ಬರ ಮನೆಗಳಲ್ಲಿ...

ಪುದುಚೆರಿ: ದೊಡ್ಡ ಕರುಳಿನ ಕ್ಯಾನ್ಸರ್ ಮತ್ತು ಗುದನಾಳದ ಕ್ಯಾನ್ಸರ್ ನ್ನು ಪರಿಣಾಮಕಾರಿಯಾಗಿ ಗುಣಪಡಿಸಬಹುದಾದ, ಭಾರತದ ಪ್ರತಿಯೊಬ್ಬರ ಮನೆಗಳಲ್ಲಿ ಬಳಸುವ ಅರಶಿನದಿಂದ ಜೈವಿಕ ಕ್ರಿಯಾ ಔಷಧಿಯನ್ನು ಕಂಡುಹಿಡಿದಿರುವ ಪುದುಚೆರಿ ವಿಶ್ವವಿದ್ಯಾಲಯದ ಜೀವರಾಸಾಯನಿಕ ಮತ್ತು ಅಣುಸಂಬಂಧಿ ಜೀವಶಾಸ್ತ್ರದ ಸಹಾಯಕ ಪ್ರಾಧ್ಯಾಪಕ ಡಾ.ಆರ್. ಭಾಸ್ಕರನ್ ದೇಶವೇ ಕೊಂಡಾಡುವಂತಹ ಕೆಲಸ ಮಾಡಿದ್ದಾರೆ. ಅವರು ಪಿಟ್ಸ್ ಬರ್ಗ್ ಕ್ಯಾನ್ಸರ್ ಸಂಸ್ಥೆಯ ಜೊತೆ ಸೇರಿ ಈ ಕೆಲಸ ಮಾಡಿದ್ದಾರೆ.
ಇವರ ಈ ಸಂಶೋಧನೆ ಅಂತಾರಾಷ್ಟ್ರೀಯ ಪತ್ರಿಕೆ ಜೀವರಾಸಾಯನಿಕ ಮತ್ತು ಅಣುಸಂಬಂಧಿ ಜೀವಶಾಸ್ತ್ರದಲ್ಲಿ ಇದೇ ತಿಂಗಳ 2ರಂದು ಪ್ರಕಟವಾಗಿದೆ.ತಮ್ಮ ಸಂಶೋಧನೆ ಬಗ್ಗೆ ವಿವರಿಸಿದ ಭಾಸ್ಕರನ್, ಅರಶಿನ ಕ್ಯಾನ್ಸರ್ ಗೆ ರಾಮಭಾಣವಾಗಿದ್ದು, ಅನೇಕ ಕಾಯಿಲೆಗಳಿಗೆ ದಿವ್ಯೌಷಧ. ಅರಶಿನ ಕರುಳು ಕ್ಯಾನ್ಸರ್ ಗೆ ಅತ್ಯುಪಕಾರಿ. ಮನುಷ್ಯರ ಸಾಮಾನ್ಯ ಕ್ಯಾನ್ಸರ್ ಮತ್ತು ಕರುಳು ಕ್ಯಾನ್ಸರ್ ನಲ್ಲಿ ವ್ಯತ್ಯಾಸವಿದೆ. ಅರಶಿನವನ್ನು ಸೇವಿಸಿದರೆ ಅದು ಕರುಳು ಕ್ಯಾನ್ಸರ್ ನ ಕೋಶಗಳನ್ನು ಸಾಯಿಸುತ್ತದೆ ಎನ್ನುತ್ತಾರೆ ಭಾಸ್ಕರನ್.
2012ರಲ್ಲಿ ಪುದುಚೆರಿ ವಿಶ್ವವಿದ್ಯಾಲಯಕ್ಕೆ ಸೇರುವ ಮುನ್ನ 20 ವರ್ಷಗಳ ಕಾಲ ಅಮೆರಿಕದಲ್ಲಿ ಕೆಲಸ ಮಾಡಿದ್ದ ಭಾಸ್ಕರನ್ , ಔಷಧವನ್ನು ತಯಾರಿಸಲು ಎರಡು ವರ್ಷಗಳು ಹಿಡಿಯಿತು ಎಂದು ವಿವರಿಸುತ್ತಾರೆ.
ಕ್ಯಾನ್ಸರ್ ನಲ್ಲಿ ಕರುಳು ಕ್ಯಾನ್ಸರ್ ಅತ್ಯಂತ ಮುಖ್ಯವಾದದ್ದು. ಆಹಾರ ಶೈಲಿ, ಜೀವನ ವಿಧಾನಗಳಿಂದಾಗಿ ಕರುಳು ಕ್ಯಾನ್ಸರ್ ಬರುತ್ತದೆ, ಇದು ಭಾರತದಲ್ಲಿಯೂ ಅಧಿಕವಾಗುತ್ತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಯ ಪ್ರಕಾರ, ವಿಶ್ವದಲ್ಲಿ ವರ್ಷಕ್ಕೆ ಸುಮಾರು 7 ಲಕ್ಷ ಜನ ಕರುಳು ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದು, ಅವರಲ್ಲಿ ಶೇಕಡಾ 4.4 ರಷ್ಟು ಭಾರತೀಯರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


