ಮಾನಸಿಕ ಆಯಾಸ ನಿವಾರಣೆಗೆ ಉದ್ಯೋಗಿಗಳಿಂದ ಫೇಸ್ಬುಕ್ ಬಳಕೆ: ಸಮೀಕ್ಷೆ
ನಿಮ್ಮ ಕಂಪನಿಯ ಉದ್ಯೋಗಿಗಳು ಕೆಲಸ ಸಮಯದಲ್ಲಿ ಫೇಸ್ ಬುಕ್ ನೋಡುತ್ತಿದ್ದಾರೆ ಎಂದರೇ, ಆ ವೇಳೆಯಲ್ಲಿ ಅವರಿಗೆ ಬ್ರೇಕ್ ನ ಅವಶ್ಯಕತೆ ಇದೆ ಎಂದರ್

ನ್ಯೂಯಾರ್ಕ್: ನಿಮ್ಮ ಕಂಪನಿಯ ಉದ್ಯೋಗಿಗಳು ಕೆಲಸ ಸಮಯದಲ್ಲಿ ಫೇಸ್ ಬುಕ್ ನೋಡುತ್ತಿದ್ದಾರೆ ಎಂದರೇ, ಆ ವೇಳೆಯಲ್ಲಿ ಅವರಿಗೆ ಬ್ರೇಕ್ ನ ಅವಶ್ಯಕತೆ ಇದೆ ಎಂದರ್ಥ. ನೌಕರಿ ಮಾಡುವ ವೇಳೆ ಉದ್ಯೋಗಿಗಳು ತಮ್ಮ ಮಾನಸಿಕ ಆಯಾಸ ನಿವಾರಣೆಗಾಗಿ ಫೇಸ್ ಬುಕ್ ನೋಡುತ್ತಾರೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ.
ಶೇ. 34 ರಷ್ಟು ಉದ್ಯೋಗಿಗಳು ಕೆಲಸದ ಒತ್ತಡದಿಂದ ಮಾನಸಿಕ ಆಯಾಸ ಕಡಿಮೆ ಮಾಡಿಕೊಳ್ಳಲು ಫೇಸ್ ಬುಕ್ ಬಳಕೆ ಮಾಡುತ್ತಾರೆ ಎಂದು ಅಮೆರಿಕಾದಲ್ಲಿ ವಯಸ್ಕರ ಮೇಲೆ ನಡೆಸಿದ ಸಂಶೋಧನೆ ಬಹಿರಂಗಪಡಿಸಿದೆ.
ಜಗತ್ತಿನ ಹಲವೆಡೆ ಇರುವ ಸಂಪನ್ಮೂಲಗಳನ್ನು ಕ್ರೂಢಿಕರಿಸಲು ಮತ್ತು ಸಹೋದ್ಯೋಗಿಗಳೊಡನೆ ಸಂಪರ್ಕ ಬೆಸೆದು, ಕೆಲಸಗಾರರಿಂದ ತಮ್ಮ ಉತ್ಪಾದಕತೆ ಹೆಚ್ಚಿಸಿಕೊಳ್ಳಲು ಡಿಜಿಟಲ್ ವೇದಿಕೆ ಅವಕಾಶ ನೀಡಿದೆ ಎಂದು ಸಮೀಕ್ಷೆ ತಿಳಿಸಿದೆ.
ಸಂಸ್ಥೆಗೆ ಸಂಬಂಧಿಸದ ಕೆಲಸಗಳಿಗಾಗಿ ಉದ್ಯೋಗಿಗಳು ಸಾಮಾಜಿಕ ಜಾಲತಾಣ ಬಳಸಿಕೊಳ್ಳುತ್ತಿದ್ದಾರೆ ಇದರಿಂದ ಸಂಸ್ಥೆಯ ಮೇಲೆ ಪರಿಣಾಮ ಬೀರಬಹುದು ಎಂದು ಮಾಲೀಕರು ಚಿಂತಿಸುತ್ತಾರೆ.
ಶೇ. 27 ರಷ್ಟು ಮಂದಿ ಉದ್ಯೋಗಿಗಳು ತಮ್ಮ ಕೆಲಸದ ವೇಳೆಯಲ್ಲಿ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಸಂಪರ್ಕದಲ್ಲಿರುತ್ತಾರೆ. ಇನ್ನೂ ಶೇ.24 ರಷ್ಟು ಉದ್ಯೋಗಿಗಳು ವೃತ್ತಿ ಸಂಬಂಧ ಮಾಹಿತಿಗಾಗಿ ಫೇಸ್ ಬುಕ್ ಬಳಕೆ ಮಾಡುತ್ತಾರೆ ಎಂಬುದು ತಿಳಿದು ಬಂದಿದೆ.
ತಮ್ಮ ಕಾರ್ಯ ಕ್ಷೇತ್ರಗಳ ಸಮಸ್ಯೆ ಬಗೆಹರಿಸಿಕೊಳ್ಳಲು ಶೇ. 20 ರಷ್ಟು ಉದ್ಯೋಗಿಗಳು ಕೆಲಸದ ವೇಳೆ ಫೇಸ್ ಬುಕ್ ಬಳಸುತ್ತಾರೆ, ಇನ್ನೂ ಶೇ. 17 ರಷ್ಟು ಉದ್ಯೋಗಿಗಳು ಸಹಕೆಲಸಗಾರರ ಜೊತೆ ತಮ್ಮ ವಯಕ್ತಿಕ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಲು ಬಳಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಶೇ. 14 ರಷ್ಟು ಉದ್ಯೋಗಿಗಳು ಸಹೋದ್ಯೊಗಿಗಳಿಗೆ ತಮ್ಮ ವೃತ್ತಿಯ ಬಗ್ಗೆ ಇರುವ ಅಭಿಪ್ರಾಯಗಳನ್ನು ತಿಳಿದುಕೊಳ್ಳಲು ಸಾಮಾಜಿಕ ಮಾಧ್ಯಮದ ಮೊರೆ ಹೋಗುತ್ತಾರೆ, ಇದೇ ವೇಳೆ ತಮ್ಮ ಸಹೋದ್ಯೋಗಿಗಳಿಗೆ ತಮ್ಮ ಮೇಲಿರುವ ಅಭಿಪ್ರಾಯ ಕುಗ್ಗುವಂತೆ ಮಾಡುತ್ತದೆ ಎಂದು ಸಮೀಕ್ಷೆ ವಿವರಿಸಿದೆ.
ತಮ್ಮ ಸಹ ಕೆಲಸಗಾರರಿಗೆ ತಮ್ಮ ಬಗ್ಗೆ ಇರುವ ಅಭಿಪ್ರಾಯಗಳನ್ನು ಬದಲಿಸಲು ಯುವ ಉದ್ಯೋಗಿಗಳು ಫೇಸ್ ಬುಕ್ ಬಳಸಿಕೊಳ್ಳುತ್ತಾರೆ ಎಂದು ಹೇಳಲಾಗಿದೆ.
18 ರಿಂದ 29 ಒಳಗಿನ ವಯಸ್ಸಿನ ಶೇ.23 ರಷ್ಟು ಉದ್ಯೋಗಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಸಹೋದ್ಯೋಗಿಳಿಂದ ತಮ್ಮ ವೃತ್ತಿ ಪರತೆಯ ಮಾಹಿತಿಗಳನ್ನು ಕಲೆ ಹಾಕುತ್ತಾರೆ, ಇನ್ನು ಹಲವು ಉದ್ಯೋಗಿಗಳು ವಿವಿಧ ಆನ್ ಲೈನ್ ಜಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಜೊತೆಗೆ ಮಾಲಿಕರು, ಸಂಸ್ಥೆಯ ನೀತಿನಿಯಮಗಳ ಬಗ್ಗೆ ತಿಳಿದುಕೊಳ್ಳಲು ಫೇಸ್ ಬುಕ್ ಬಳಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಶೇ. 51 ರಷ್ಟು ಫುಲ್ ಟೈಮ್ ಮತ್ತು ಪಾರ್ಟ್ ಟೈಮ್ ಉದ್ಯೋಗಿಗಳು ತಾವು ಕೆಲಸ ಮಾಡುತ್ತಿರುವ ಸ್ಥಳದ ನಿಯಮಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಾರೆ, ಹಾಗೆಯೇ ಶೇ. 32 ರಷ್ಟು ಮಾಲೀಕರು ತಮ್ಮ ಉದ್ಯೋಗಿಗಳು ಹೇಗೆ ಅಂತರ್ಜಾಲ ಬಳಸಿಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
ಉದ್ಯೋಗಿಗಳು ತಾವು ಕೆಲಸ ಮಾಡುವ ವೇಳೆ ವೈಯಕ್ತಿಕ ಕಾರಣಕ್ಕಾಗಿ ಫೇಸ್ ಬುಕ್ ಬಳಕೆ ಮಾಡುವುದು ತೀರಾ ಕಡಿಮೆ. ಶೇ. 78 ರಷ್ಟು ಕೆಲಸಗಾರರು ತಮ್ಮ ವೃತ್ತಿ ಸಂಬಂಧಿತ ಮಾಹಿತಿಗಳನ್ನ ಪಡೆಯಲು ಹಾಗೂ ವೃತ್ತಿಯ ಅವಕಾಶಗಳನ್ನು ಪತ್ತೆ ಹಚ್ಚಲು ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಳ್ಳುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


