ದಢೂತಿ ದೇಹಕಾಯದವರಿಗೆ ಜಪಾನ್ ನಗ್ನ ಹೋಟೆಲ್ 'ದ ಅಮೃತ' ಗೆ ಪ್ರವೇಶ ನಿಷಿದ್ಧ
ಮುಂದಿನ ತಿಂಗಳು ಪ್ರಾಂಭವಾಗಲಿರುವ ಜಪಾನ್ ನ ಮೊದಲ 'ನಗ್ನ ರೆಷ್ಟರೆಂಟ್'ನ ಪ್ರವೇಶಕ್ಕೆ ವಿಚಿತ್ರ ನಿರ್ಭಂಧಗಳನ್ನು ಹೇರಿದೆ, ಅದರಲ್ಲಿ ಒಂದು ದಪ್ಪಗಿನ ಮೈಕಟ್ಟಿನವರಿಗೆ ಪ್ರವೇಶ ನಿಷೇಧ

ಟೋಕಿಯೋ: ಮುಂದಿನ ತಿಂಗಳು ಪ್ರಾಂಭವಾಗಲಿರುವ ಜಪಾನ್ ನ ಮೊದಲ 'ನಗ್ನ ರೆಷ್ಟರೆಂಟ್'ನ ಪ್ರವೇಶಕ್ಕೆ ವಿಚಿತ್ರ ನಿರ್ಭಂಧಗಳನ್ನು ಹೇರಿದೆ, ಅದರಲ್ಲಿ ಒಂದು ದಪ್ಪಗಿನ ಮೈಕಟ್ಟಿನವರಿಗೆ ಪ್ರವೇಶ ನಿಷೇಧ ಮಾಡಿರುವುದು.
ಲಂಡನ್ ಮತ್ತು ಮೆಲ್ಬರ್ನ್ ನಲ್ಲಿ ಈಗಾಗಲೇ ಸ್ಥಾಪಿತವಾಗಿರುವ ಇಂತಹ ಹೋಟೆಲ್ ಗಳಿಂದ ಸ್ಫೂರ್ತಿ ಪಡೆದು ಪ್ರಾರಂಭವಾಗುತ್ತಿರುವ 'ದ ಅಮೃತ' ಹೋಟೆಲ್ ನಲ್ಲಿ ವಯೋಮಾನದ ನಿರ್ಭಂಧವೂ ಇದ್ದು ೧೮ ರಿಂದ ೬೦ ವರ್ಷದೊಳಗಿನವರು ಮಾತ್ರ ಪ್ರವೇಶಿಸಬಹುದಾಗಿದ್ದು, ಒಳಗೆ ಬಂದಾಕ್ಷಣ ತಮ್ಮ ಬಟ್ಟೆಗಳನ್ನು ಕಳಚಿಟ್ಟು, ಹೋಟೆಲ್ ನೀಡುವ ಪೇಪರ್ ನ ಒಳ-ಕೆಳ ಉಡುಪನ್ನಷ್ಟೇ ಧರಿಸಬೇಕಿದೆ.
"ನಿಮ್ಮ ಎತ್ತರಕ್ಕೆ ತಕ್ಕಂತೆ ಇರಬೇಕಾದ ಸರಾಸರಿ ತೂಕಕ್ಕೆ ೧೫ ಕೆಜಿಗಿಂತಲೂ ಹೆಚ್ಚಿದ್ದರೆ ಸ್ಥಳ ಕಾದಿರುವುದರಿಂದ ಹಿಂದೆ ಉಳಿಯಲು ನಾವು ನಿಮಗೆ ತಿಳಿಸುತ್ತೇವೆ" ಎಂದು ಹೋಟೆಲ್ ನ ಅಂತರ್ಜಾಲ ತಾಣದಲ್ಲಿ ತಿಳಿಸಿದ್ದು, ಸಿಬ್ಬಂದಿಗೆ ಸಂಶಯ ಬಂದರೆ ಗ್ರಾಹಕರು ತೂಕ ಪತ್ತೆ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ಕೂಡ ತಿಳಿಸಿದೆ.
ಅಥಿತಿಗಳು ಧಢೂತಿಗಳು ಎಂದು ತಿಳಿದುಬಂದರೆ ಹೋಟೆಲ್ ಒಳಗೆ ಪ್ರವೇಶ ನೀಡಲಾಗುವುದಿಲ್ಲ ಎಂದು ಜುಲೈ ೨೯ಕ್ಕೆ ಪ್ರಾರಂಭವಾಗಲಿರುವ ಹೋಟೆಲ್ ತಿಳಿಸಿದೆ. ಹಾಗೆಯೇ ಹಣವನ್ನು ಸ್ಥಳ ಕಾಯ್ದಿರಿಸುವಾಗಲೇ ನಿಡಬೇಕೆಂಬ ನಿರ್ಭಂಧ ಕೂಡ ಹೇರಿದೆ.
ಅನ್ಯ ಅಥಿತಿಗಳನ್ನು ಮುಟ್ಟದಂತೆ ಮತ್ತು ಅವರ ಜೊತೆ ಮಾತಾಡದಂತೆ ಶಿಸ್ತು ಕಾಪಾಡಲು ಕೂಡ ನಿಯಮಗಳು ತಿಳಿಸಿದ್ದು, ಅಚ್ಚು (ಟ್ಯಾಟೂ) ಹಾಕಿಸಿಕೊಂಡಿರುವವರಿಗು ಪ್ರವೇಶವಿಲ್ಲ.
ಪ್ರವೇಶ ಪಡೆಯುವ ಎಲ್ಲ ಅತಿಥಿಗಳು ಮೊಬೈಲ್ ಫೋನ್ ಗಳು ಮತ್ತು ಕ್ಯಾಮರಾಗಳನ್ನು ಲಾಕರ್ ನಲ್ಲಿ ಕಡ್ಡಾಯವಾಗಿ ಇಡಬೇಕು.
ಈ ಹೋಟೆಲ್ ನಲ್ಲಿ ಕಟ್ಟುಮಸ್ತಾದ ಪುರುಷರ ನಗ್ನ ನೃತ್ಯ ಪ್ರದರ್ಶನದ ಜೊತೆಗೆ ಊಟ ಸವಿಯಬೇಕೆಂದರೆ ೮೦,೦೦೦ ಯೆನ್ (೭೫೦ ಡಾಲರ್) ವ್ಯಯಿಸಬೇಕಾಗುತ್ತದೆ!
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


