ಆರೋಗ್ಯ-ಜೀವನಶೈಲಿ

ಚೆನ್ನಾಗಿ ಕಥೆ ಹೇಳೋಕೆ ಬರುತ್ತಾ? ಹಾಗಾದ್ರೆ ನೀವು ಹುಡುಗಿ ಹೃದಯ ಗೆಲ್ಲೋದು ಸುಲಭ!

ನಿಮಗೆ ಚೆನ್ನಾಗಿ ಕಥೆ ಹೇಳೋದಕ್ಕೆ ಬರುತ್ತಾ? ಹಾಗಾದರೆ ಹುಡುಗಿಯರನ್ನು ಆಕರ್ಷಿಸುವುದು ಸುಲಭವಾಗಲಿದೆ...

ಚೆನ್ನಾಗಿ ಕಥೆ ಹೇಳೋಕೆ ಬರುತ್ತಾ? ಹಾಗಾದ್ರೆ ನೀವು ಹುಡುಗಿ ಹೃದಯ ಗೆಲ್ಲೋದು ಸುಲಭ!
ಚೆನ್ನಾಗಿ ಕಥೆ ಹೇಳೋಕೆ ಬರುತ್ತಾ? ಹಾಗಾದ್ರೆ ನೀವು ಹುಡುಗಿ ಹೃದಯ ಗೆಲ್ಲೋದು ಸುಲಭ!
Published On :

ಸಿಡ್ನಿ: ನಿಮಗೆ ಚೆನ್ನಾಗಿ ಕಥೆ ಹೇಳೋದಕ್ಕೆ ಬರುತ್ತಾ? ಹಾಗಾದರೆ ಹುಡುಗಿಯರನ್ನು ಆಕರ್ಷಿಸುವುದು ಸುಲಭವಾಗಲಿದೆ ಎನ್ನುತಿದೆ ಪತ್ರಿಕೆಯೊಂದರಲ್ಲಿ ಪ್ರಕಟವಾದ ಖಾಸಗಿ ಸಂಬಂಧಗಳ ಬಗೆಗಿನ ಸಂಶೋಧನಾ ವರದಿ.

ಕಥೆ ಹೇಳುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪುರುಷರತ್ತ ಹುಡುಗಿಯರು ಬಹುಬೇಗ ಆಕರ್ಷಿತರಾಗುತ್ತಾರೆ ಎಂದು ಸಂಶೋಧನಾ ವರದಿ ಆಧಾರಿತ ಲೇಖನದಲ್ಲಿ ಹೇಳಲಾಗಿದೆ. ಕಥೆ ಹೇಳುವ ಕಲೆ ಇರುವ ಹುಡುಗರನ್ನು ಹೆಚ್ಚು ಇಷ್ಟ ಪಡುವ ಹುಡುಗಿಯರು ಅವರನ್ನೇ ದೀರ್ಘಕಾಲದ ಸಂಗಾತಿಗಳನ್ನಾಗಿ ಪಡೆಯಲು ಇಚ್ಛಿಸುತ್ತಾರಂತೆ.

ಕಥೆಗಳು ಗಾಢವಾಗಿ ಆತ್ಮೀಯತೆಯನ್ನು ಬೆಳೆಸುವುದಕ್ಕೆ ಸಹಕಾರಿಯಾಗಲಿವೆ. ಕಥೆಗಳು, ಕಥೆ ಹೇಳುವವರಿಗೆ ಮನ್ನಣೆ ತಂದು ಕೊಡುತ್ತವೆ ಹಾಗೂ ಕೇಳುಗರಿಗೆ ಕಥೆ ಹೇಳುವವರನ್ನು ಹೆಚ್ಚು ಅರ್ಥ ಮಾಡಿಕೊಳ್ಳುವುದಕ್ಕೆ ಸಹಕಾರಿಯಾಗಿರುತ್ತವೆ. ಅಷ್ಟೇ ಅಲ್ಲದೆ ಕಥೆ ಹೇಳುವ ಕಲೆಯನ್ನು ಕರಗತ ಮಾಡಿಕೊಂಡಿರುವ ಪುರುಷರಿಗೆ ಭಾವನೆಗಳನ್ನು ಹೇಗೆ ಹಂಚಿಕೊಳ್ಳಬೇಕೆಂಬುದು ತಿಳಿದಿರುತ್ತದೆ, ಆದ್ದರಿಂದ ಕಥೆ ಚೆನ್ನಾಗಿ ಹೇಳುವ ಪುರುಷರು ಇಷ್ಟವಾಗುತ್ತಾರೆ ಎಂದು ಸಮೀಕ್ಷೆಗೊಳಪಟ್ಟ ಹುಡುಗಿಯರು ಅಭಿಪ್ರಾಯಪಟ್ಟಿದ್ದಾರಂತೆ. ಮತ್ತೊಂದು ವಿಷಯವೆಂದರೆ ಕಥೆ ಹೇಳುವುದನ್ನು ಚೆನ್ನಾಗಿ ಕಲಿತಿರುವವವರಿಗೆ ಹೆಚ್ಚು ಜೀವನ ತೃಪ್ತಿ ಇರುತ್ತದೆಯಂತೆ. ಈ ಎಲ್ಲಾ ಅಂಶಗಳು ಚೆನ್ನಾಗಿ ಕಥೆ ಹೇಳುವ ಪುರುಷರತ್ತ ಮಹಿಳೆಯರು ಆಕರ್ಷಿತರನ್ನಾಗುವಂತೆ ಮಾಡುತ್ತದೆ ಎಂದು ಸಂಶೋಧನಾ ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.