ಆರೋಗ್ಯ-ಜೀವನಶೈಲಿ

ಹೃದಯದ ನಳಿಕೆ ಚಿಕಿತ್ಸೆಯ ಪ್ರಗತಿ

ಹೃದಯ ಸ್ನಾಯುಗಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ಉಂಟಾಗುವ ತಡೆಯನ್ನು ಪರಿಧಮನಿ ಕಾಯಿಲೆ(coronary artery disease) ...

ಹೃದಯದ ನಳಿಕೆ ಚಿಕಿತ್ಸೆಯ ಪ್ರಗತಿ
ಸಾಂದರ್ಭಿಕ ಚಿತ್ರ
Published On :

ಹೃದಯ ಸ್ನಾಯುಗಳಿಗೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ಉಂಟಾಗುವ ತಡೆಯನ್ನು ಪರಿಧಮನಿ ಕಾಯಿಲೆ(coronary artery disease) ಎಂದು ಕರೆಯುತ್ತಾರೆ. ಇದು ಆಧುನಿಕ ಜಗತ್ತಿನಲ್ಲಿ ಜನರ ಸಾವಿಗೆ ಹಾಗೂ ಅಂಗವೈಕಲ್ಯಕ್ಕೆ ಪ್ರಮುಖ ಕಾರಣವಾಗಿದೆ.

ಈ ಕಾಯಿಲೆಗಿರುವ ಸಾಮಾನ್ಯವಾದ ವೈದ್ಯಕೀಯ ಚಿಕಿತ್ಸೆಯೆಂದರೆ percutaneous coronary intervention. (PCI)ಇದರಿಂದ ಹೃದಯಕ್ಕೆ ರಕ್ತ ಸರಬರಾಜು ಮಾಡುವ ರಕ್ತನಾಳಗಳಲ್ಲಿ ಕೊಬ್ಬು ಶೇಖರಣೆಗೊಂಡು ಅದು ಕಿರಿದಾಗುವುದನ್ನು ಅಥವಾ ಮುಚ್ಚಿಹೋಗುವುದನ್ನು ತೆರೆಯಲಾಗುತ್ತದೆ.

ಈ ಚಿಕಿತ್ಸೆಯನ್ನು 1977ರಲ್ಲಿ ಅಭಿವೃದ್ಧಿಪಡಿಸಲಾಯಿತು. ಹೃದಯದ ಬೈಪಾಸ್ ಸರ್ಜರಿಗೆ ಪರ್ಯಾಯ ಚಿಕಿತ್ಸೆ ಇದಾಗಿದ್ದು, ಶೇಕಡಾ 90ರಿಂದ 95 ಪ್ರತಿಶತ ರೋಗಿಗಳನ್ನು PCI ಚಿಕಿತ್ಸೆ ಮೂಲಕ ಪಾರು ಮಾಡಬಹುದು.

ಈ ಚಿಕಿತ್ಸೆಯ ಒಂದು ವಿಧಾನ ಬಲೂನ್ ಆಂಜಿಯೋಪ್ಲಾsಸ್ಟಿ, (Balloon angioplasty) ಕೊಬ್ಬಿನ ಅಂಶ ತುಂಬಿ ರಕ್ತಪರಿಚಲನೆಗೆ ತೊಂದರೆಯಾಗಿರುವ ರಕ್ತನಾಳಗಳ ಒಳಗೆ ಬಲೂನ್‍ನ್ನು ತೂರಿಸಿ ಕೊಬ್ಬನ್ನು ಕರಗಿಸುವ ಮುಖಾಂತರ ರಕ್ತದ ಸುಲಭ ಚಲನೆಗೆ ದಾರಿ ಮಾಡಿಕೊಡುವುದು. ಆದರೆ ಈ ವಿಧಾನ ಕೇವಲ ತಾತ್ಕಾಲಿಕ ಪರಿಹಾರ ಮಾತ್ರ. ಇದಕ್ಕಿಂತ ಉತ್ತಮ ಶಾಶ್ವತವಾದಂತಹ ಚಿಕಿತ್ಸೆಯೆಂದರೆ ಪರಿಧಮನಿಯ ನಳಿಕೆ(coronary stenting). ಅಂದರೆ ರಕ್ತನಾಳ ತಡೆಯಾದ ಜಾಗದಲ್ಲಿ ಲೋಹದ ಪೈಪನ್ನು ಅಳವಡಿಸುವುದು. ಇದನ್ನು ಬಲೂನ್ ಆಂಜಿಯೋಪ್ಲಾಸ್ಟಿ ಮಾಡಿದ ನಂತರ ಪುನಃ ರಕ್ತನಾಳಗಳಲ್ಲಿ ಕೊಬ್ಬು ತುಂಬಿಕೊಳ್ಳದಂತೆ ತಡೆಯಲು ಉಪಯೋಗಿಸಬಹುದು ಅಥವಾ ಬಲೂನ್ ಆಂಜಿಯೋಪ್ಲಾಸ್ಟಿ ಬದಲಿ ಪ್ರಯೋಗಿಸಬಹುದು.

ಬೈಪಾಸ್ ಸರ್ಜರಿ(ಹೃದಯದ ತೆರೆದ ಚಿಕಿತ್ಸೆ)ಯ ಬದಲಿಗೆ ಬಂದಂತಹ percutaneous coronary intervention (PCI) ಈ ಚಿಕಿತ್ಸಾ ವಿಧಾನದಿಂದ ಶೇಕಡಾ 90ರಿಂದ 95 ಜನರಿಗೆ ಪರಿಣಾಮಕಾರಿಯಾದ ಹೃದ್ರೋಗ ಚಿಕಿತ್ಸೆ ಕಡಿಮೆ ವೆಚ್ಚದಲ್ಲಿ ದೊರಕಬಲ್ಲದು.
2002ನೇ ಇಸವಿಯಲ್ಲಿ PCI ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿ Drug Eluting Stent ನ್ನು ಪ್ರಚುರಪಡಿಸಲಾಯಿತು. ರಕ್ತನಾಳಗಳ ತಡೆ ಪುನರಾವರ್ತನೆಯಾಗುವ ಸಂಭವನೀಯತೆಯನ್ನು ಇದು ಕಡಿಮೆಮಾಡುತ್ತದೆ. Drug Eluting Stent ನಲ್ಲಿ ಮೂರು ವಿಧಗಳಿವೆ. ಲೋಹದ ನಳಿಕೆ, (metallic stent platform,) ಪಾಲಿಮರ್ ಕವಚ,(polymer coting) ಹಾಗೂ ಅಂಗವಿಭಜನೆ ವಿರೋಧಿ ರಾಸಾಯನಿಕಗಳೆಂಬ(antiproliferative agent).

ಹೊಸ ಹೊಸ ಸಂಶೋಧನೆಗಳಿಂದ ಹಲವು ರೀತಿಯ ಔಷಧೀಯ ನಳಿಕೆಗಳನ್ನು(stent)  ವೈದ್ಯಕೀಯ ಪ್ರಪಂಚಕ್ಕೆ ಪರಿಚಯಿಸಲಾಗುತ್ತಿದೆ. ಮೊದಲ ಪೀಳಿಗೆಯ ಔಷಧಿಗಳು ರಕ್ತನಾಳಗಳ ತಡೆ ಹಾಗೂ ಹೃದಯದ ತೊಂದರೆ ಪುನರಾವರ್ತನೆಯಾಗುವುದನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿವೆ.

ರಕ್ತನಾಳಗಳಿಗೆ ಚಿಕಿತ್ಸೆ: ಎರಡನೇ ಹಂತದಲ್ಲಿ ಸಮಕಾಲೀನ ವೈದ್ಯಕೀಯ ಚಿಕಿತ್ಸೆಯಲ್ಲಿ ಬಳಸಲಾಗುತ್ತಿರುವ ನಳಿಕೆಗಳ ಅಭಿವೃದ್ಧಿಯಲ್ಲಿ everolimus-eluting stent, Endeavor zotarolimus-eluting stent  ಮತ್ತು Resolute ZES  ಸೇರಿವೆ. ಈ ಎಲ್ಲಾ ಚಿಕಿತ್ಸೆಗಳಲ್ಲಿ ಜೈವಿಕ ಹೊಂದಾಣಿಕೆಯಾಗುವ ಪಾಲಿಮರ್ ಹಾಗೂ ತೆಳ್ಳಗಿನ cobalt chromium ನ್ನು ಅಳವಡಿಸಿಕೊಳ್ಳಲಾಗಿದೆ.

ಔಷಧೀಯ ನಳಿಕೆಗಳಲ್ಲಿ ಜೈವಿಕ ಪಾಲಿಮರ್‍ಗಳನ್ನು ಉಪಯೋಗಿಸಲಾಗಿದ್ದು, ಇವುಗಳು ದೇಹದಲ್ಲಿ ಬಳಸಿಕೊಂಡ 6ರಿಂದ 9 ತಿಂಗಳುಗಳಲ್ಲಿ ಕರಗಿ ಹೋಗುತ್ತವೆ. ಇವುಗಳಲ್ಲಿ ಹೆಚ್ಚು ಅಭಿವೃದ್ಧಿಪಡಿಸಿದ ನಳಿಕೆಯೆಂದರೆ ಬಯೋಲಿಮಸ್ ಔಷಧೀಯ ನಳಿಕೆbiolimus-eluting stent) ಇದು ಬಯೋಮೆಟ್ರಿಕ್(biomatrix BES) ನಳಿಕೆ ಮತ್ತು ನೊಬೊರಿ(nobori BES) ಎಂಬ ಹೆಸರುಗಳಲ್ಲಿ ದೊರೆಯುತ್ತವೆ.

ಭಾರತೀಯ ಕಂಪೆನಿಗಳು ಪಾಲಿಮರ್ ತಂತ್ರಜ್ಞಾನ ಸಂಶೋಧನೆಯಲ್ಲಿ, ದೇಹಕ್ಕೆ ಹೊಂದಿಕೊಳ್ಳುವಂತಹ ಪಾಲಿಮರ್‍ಗಳನ್ನು ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿವೆ. ಗುಜರಾತ್‍ನ ಸೂರತ್‍ನಲ್ಲಿರುವ Sahajananda Technologies, Biomine, Meril LifeSciences, Vapi,  MIV, Therapeutics, Surat, ,  ಕಂಪೆನಿಗಳು ಕೆಲವು ಉದಾಹರಣೆಗಳಾಗಿವೆ.

ತಮ್ಮ ಗುಣಮಟ್ಟದ ಸಂಶೋಧನೆಗಳಿಂದ ಬಹುರಾಷ್ಟ್ರೀಯ ಕಂಪೆನಿಗಳ ಜೊತೆಗೆ ಭಾರತೀಯ ಕಂಪೆನಿಗಳು ಸರಿಸಮನಾಗಿ ಕೆಲಸ ಮಾಡುತ್ತಿರುವುದರಿಂದ ಇತ್ತೀಚೆಗೆ ಹೆಚ್ಚು ಹೆಚ್ಚು ಗುಣಮಟ್ಟದ ಜೈವಿಕ ಪಾಲಿಮರ್‍ಗಳು ನಮ್ಮ ದೇಶದಲ್ಲಿ ಸಿಗುತ್ತಿವೆ.

ಹಲವು ಔಷಧೀಯ ನಳಿಕೆಗಳ ಆವಿಷ್ಕಾರ ಹಾಗೂ ಅದರ ಸುಧಾರಣೆಗಳಿಂದ ಹೊಸ ಪಾಲಿಮರ್‍ಗಳು ಉಪಯೋಗಕ್ಕೆ ಬರುತ್ತಿವೆ. ಪ್ರಸಕ್ತ ಪಾಲಿಮರ್‍ಗಳು ಇಲ್ಲದ ನಳಿಕೆಗಳ ಉಪಯೋಗ ಪರಿಣಾಮಕಾರಿಯಾಗಿ ಮನುಷ್ಯರಲ್ಲಿ ಅಳವಡಿಸಬಹುದೆಂದು ಹೇಳಲಾಗುತ್ತಿದೆ.
ಹಳೆಯ, ಕಡಿಮೆ ಗುಣಮಟ್ಟದ ನಳಿಕೆಗಳಿಗಿಂತ ಜೈವಿಕ ಪಾಲಿಮರ್‍ಗಳನ್ನು ಅಳವಡಿಸಿರುವ ನಳಿಕೆಗಳು ಹಾಗೂ ಇತ್ತೀಚೆಗಿನ ಅಂಗವಿಭಜನೆ ವಿರೋಧಿ(antiproliferative agent). ಔಷಧಿಗಳನ್ನು ಒಳಗೊಂಡ ನಳಿಕೆ BioFreedom biolimus-eluting stent  ಪರಿಣಾಮಕಾರಿಯಾದ ಚಿಕಿತ್ಸೆಗೆ ಸಹಾಯಕವಾಗಿದೆ.

ಈ ಸಮಸ್ಯೆಗೆ ದೀರ್ಘಕಾಲದ ಪರಿಹಾರವೆಂದರೆ ಜೈವಿಕವಾಗಿ ಕರಗಿ ಹೋಗಬಲ್ಲಂತಹ ನಳಿಕೆಗಳು. ಒಂದು ಬಾರಿ ರಕ್ತನಾಳಗಳಿಗೆ ನಳಿಕೆಗಳನ್ನು ಅಳವಡಿಸಿದರೆ ಕೊಬ್ಬು ತಮಗೆ ತಾವೇ ಕರಗಿ ದೇಹದಿಂದ ಹೊರಗೆ ಹೋಗುತ್ತದೆ.

ಇಂತಹ ಹಲವಾರು ನಳಿಕೆಗಳು ಮಾರುಕಟ್ಟೆಯಲ್ಲಿ ಲಭ್ಯವಿದ್ದು, Bioabsorbable Vascular Scaffold  ನಳಿಕೆಯು ಅತ್ಯಂತ ಪರಿಣಾಮಕಾರಿಯಾಗಿದ್ದು, ಮಾನವನಲ್ಲಿ ಉಪಯೋಗಿಸಲು ಯೋಗ್ಯವಾಗಿದೆ. ಇದು ಪ್ರಪ್ರಥಮ ಜೈವಿಕ ನಳಿಕೆಯಾಗಿದ್ದು ಹೆಚ್ಚು ಹೆಚ್ಚಾಗಿ ಉಪಯೋಗಿಸಲ್ಪಡುತ್ತಿದೆ.

ಭರವಸೆ ಮೂಡುವ ರೀತಿಯಲ್ಲಿ ಹೊಸ ಹೊಸ ಸಂಶೋಧನೆಗಳು ಹೃದಯ ನಳಿಕೆ ಅಭಿವೃದ್ಧಿಯಲ್ಲಿ ನಡೆಯುತ್ತಿದ್ದು, ರೋಗಪೀಡಿತರಲ್ಲಿ ಆಶಾಕಿರಣ ಮೂಡಿಸುವಲ್ಲಿ ಯಶಸ್ವಿಯಾಗುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.