ಮುತ್ತು ಕೊಟ್ಟರೂ ಹರಡುತ್ತಂತೆ ಮಾರಕ ಝಿಕಾ ವೈರಾಣು..!
ದಕ್ಷಿಣ ಅಮೆರಿಕದಲ್ಲಿ ವ್ಯಾಪಕವಾಗಿ ಹರಡಿರುವ ಮಾರಕ ಝಿತಾ ವೈರಾಣು ರೋಗ ಮುತ್ತುಕೊಟ್ಟರೂ ಹರಡತ್ತದೆ ಎಂದು ಇತ್ತೀಚಿಗಿನ ಸಂಶೋಧನೆಯೊಂದು ಹೇಳಿದೆ...

ರಿಯೋ ಡಿ ಜನೈರೊ: ದಕ್ಷಿಣ ಅಮೆರಿಕದಲ್ಲಿ ವ್ಯಾಪಕವಾಗಿ ಹರಡಿರುವ ಮಾರಕ ಝಿತಾ ವೈರಾಣು ರೋಗ ಮುತ್ತುಕೊಟ್ಟರೂ ಹರಡತ್ತದೆ ಎಂದು ಇತ್ತೀಚಿಗಿನ ಸಂಶೋಧನೆಯೊಂದು ಹೇಳಿದೆ.
ಈ ಹಿಂದೆ ಲೈಂಗಿಕ ಕ್ರಿಯೆ ಮೂಲಕ ಝಿಕಾ ಹರಡುತ್ತದೆ ಎಂದು ವೈದ್ಯರು ತಿಳಿಸಿದ್ದರು.ಇದೀಗ ಮತ್ತೊಂದು ವೈದ್ಯಕೀಯ ವರದಿಯ ಪ್ರಕಾರ, ಮನುಷ್ಯರ ಜೊಲ್ಲುರಸ, ಮೂತ್ರದಲ್ಲೂ ಝಿಕಾ ವೈರಾಣುಗಳಿರುವುದು ಪತ್ತೆಯಾಗಿದೆ. ಸೋಂಕಿಗೆ ಒಳಗಾಗಿರುವವರು ಮುತ್ತು ಕೊಡುವುದರಿಂದಲೂ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯುವ ಅಗತ್ಯವಿದೆ ಎಂದು ಬ್ರೆಜಿಲ್‌ನ ಸಂಶೋಧಕರು ತಿಳಿಸಿದ್ದಾರೆ. ಝಿಕಾ ವೈರಸ್‌ಗಳು ಸೊಳ್ಳೆಗಳಿಂದ ಮಾತ್ರ ಹರಡುತ್ತವೆ ಎಂದು ಮೊದಲು ನಂಬಲಾಗಿತ್ತು. ನಂತರ, ಲೈಂಗಿಕ ಸಂಪರ್ಕದಿಂದಲೂ ಹರಡುವುದು ಕಂಡುಬಂದಿತ್ತು.
ಭಾರತ್ ಬಯೋಟೆಕ್ ಗೆ ಸಮನ್ಸ್ ಜಾರಿ
ಝಿಕಾ ವೈರಸ್‌ಗೆ ಔಷಧ ಕಂಡುಹಿಡಿದಿರುವುದಾಗಿ ತಿಳಿಸಿದ ಹೈದರಾಬಾದ್‌ನ ಭಾರತ್ ಬಯೋಟೆಕ್ ಸಂಸ್ಥೆಗೆ ಸ್ಪಷ್ಟನೆ ಕೋರಿ ಸಮನ್ಸ್ ಜಾರಿಗೊಳಿಸಿದ್ದು, ಔಷಧದ ವಿಶ್ವಾಸರ್ಹತೆ ಕುರಿತು ಸರ್ಕಾರ ನಿರ್ಧಾರಕೈಗೊಂಡ ಬಳಿಕ ಮಾರುಕಟ್ಟೆಗೆ ಬಿಡುಗಡೆಗೊಳಿಸಬೇಕು ಎಂದು ಸೂಚಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


