ಪ್ರತಿದಿನ 2 ಲೋಟ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು
ಮಾನವನ ಬೆಳವಣಿಗೆಗೆ ಹಾಗೂ ದೇಹಕ್ಕೆ ಶಕ್ತಿ ನೀಡಲು ಹಾಲು ಅತ್ಯಗತ್ಯ. ದಿನಕ್ಕೆ ಎರಡು ಲೋಟ ಹಾಲು ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನಗಳು

ನವದೆಹಲಿ: ಮಾನವನ ಬೆಳವಣಿಗೆಗೆ ಹಾಗೂ ದೇಹಕ್ಕೆ ಶಕ್ತಿ ನೀಡಲು ಹಾಲು ಅತ್ಯಗತ್ಯ. ದಿನಕ್ಕೆ ಎರಡು ಲೋಟ ಹಾಲು ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಪ್ರಯೋಜನಗಳು ಲಭಿಸುತ್ತವೆ.
ದಿನ ನಿತ್ಯ ನಮ್ಮ ಜೀವನ ಶೈಲಿಯಲ್ಲಿ ಹಾಲು ಕುಡಿಯುವುದು ಅತ್ಯಗತ್ಯ. ಹಾಲು ಕುಡಿಯುವುದರಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.
ಪ್ರತಿದಿನ ಹಾಲು ಕುಡಿಯುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ. ಮಕ್ಕಳಿಗೆ ದಿನ ನಿತ್ಯ ಹಾಲು ನೀಡುವುದರಿಂದ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಪೂರೈಕೆಯಾಗಿ ಮೂಳೆಗಳು ಗಟ್ಟಿಗೊಳ್ಳುತ್ತವೆ.
ದೊಡ್ಡವರು ಕೂಡ ನಿತ್ಯ ಹಾಲು ಸೇವಿಸುವುದರಿಂದ ವಯಸ್ಸಾದ ಕಾಲದಲ್ಲಿ ಬರಬಹುದಾದ ಹಲವು ರೋಗಗಳನ್ನು ತಡೆಗಟ್ಟಬಹುದು. ಮೂಳೆಗಳಲ್ಲಿ ಉಂಟಾಗುವ ರಂಧ್ರವನ್ನು ತಡೆಗಟ್ಟುತ್ತದೆ. ಹಾಲಿನಲ್ಲಿ ಅಧಿಕ ಪ್ರೊಟೀನ್ ಇರುವುದರಿಂದ ಮಾಂಸಖಂಡಗಳ ಬೆಳವಣಿಗೆಗೆ ಸಹಾಯವಾಗುತ್ತದೆ.
ಇನ್ನು ಹಾಲಿನಲ್ಲಿರುವ ವಿಟಮಿನ್, ಹಾಗೂ ಪೌಷ್ಠಿಕಾಂಶಗಳು ಚರ್ಮವನ್ನು ಮೃದುಹಾಗೂ ಸುಂದರವಾಗಿಸುತ್ತದೆ. ಜೊತೆಗೆ ದೇಹಕ್ಕೆ ಉಂಟಾಗುವ ಆಯಾಸವನ್ನು ಕಡಿಮೆ ಮಾಡುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


