ಗುಜರಾತ್ ನಲ್ಲಿ ಅತಿ ಹೆಚ್ಚು ಮಧುಮೇಹ ರೋಗಿಗಳು: ವರದಿ
ಭಾರತದಲ್ಲಿ ಮಧುಮೇಹ ಕಾಯಿಲೆ ಎದುರಿಸುತ್ತಿರುವ ಒಟ್ಟು ಜನರಲ್ಲಿ ಕಾಲುಭಾಗಷ್ಟು ಜನರು ಗುಜರಾತ್ ನವರು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ನವದೆಹಲಿ: ಭಾರತದಲ್ಲಿ ಮಧುಮೇಹ ಕಾಯಿಲೆ ಎದುರಿಸುತ್ತಿರುವ ಒಟ್ಟು ಜನರಲ್ಲಿ ಕಾಲುಭಾಗಷ್ಟು ಜನರು ಗುಜರಾತ್ ನವರು ಎಂದು ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಂದ ತಿಳಿದುಬಂದಿದೆ.
2015 ರ ಮಾರ್ಚ್ ವರೆಗೆ ರಾಜಸ್ಥಾನದಲ್ಲಿ 67,738 ಮಧುಮೇಹ ಪ್ರಕರಣಗಳು ಬೆಳಕಿಗೆ ಬಂದಿದೆ. ಪಂಜಾಬ್ ನಲ್ಲಿ 32 ,100 ಪಶ್ಚಿಮ ಬಂಗಾಳದಲ್ಲಿ 11 908 ಪ್ರಕರಣಗಳು, ಜಾರ್ಖಂಡ್ ನಲ್ಲಿ 17 240 ಪ್ರಕರಣಗಳಿದ್ದರೆ, ಗುಜರಾತ್ ನಲ್ಲಿ 159 ,150 ಪ್ರಕರಣಗಳಿದ್ದು ಅತಿ ಹೆಚ್ಚು ಮಧುಮೇಹಕ್ಕೆ ತುತ್ತಾಗಿರುವ ಜನರಿರುವ ರಾಜ್ಯವಾಗಿದೆ.
ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ 2015 ರ ನ್ಯಾಷನಲ್ ಹೆಲ್ತ್ ಪ್ರೊಫೈಲ್ ಪ್ರಕಾರ ಪ್ರಸಕ್ತ ವರ್ಷ ಬೆಳಕಿಗೆ ಬಂದಿರುವ ಒಟ್ಟು 715 , 382 ಪ್ರಕರಣದಲ್ಲಿ 159 ,150 ಗುಜರಾತ್ ನಲ್ಲಿ ಪತ್ತೆಯಾಗಿವೆ. ದೆಹಲಿ ಹಾಗೂ ಮಣಿಪುರದ ಅಂಕಿ-ಅಂಶಗಳು ಸಿಕ್ಕಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಹೇಳಿದ್ದಾರೆ. ಇದೇ ವೇಳೆ ತೀವ್ರ ಉಸಿರಾಟ ಸೋಂಕು ಪ್ರಕರಣಗಳು ಸಹ ಹೆಚ್ಚಾಗಿವೆ. 2014 ರಲ್ಲಿ ದೇಶಾದ್ಯಂತ ಒಟ್ಟು 34,814,636 ಪ್ರಕರಣಗಳು ದಾಖಲಾಗಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


