ಆರೋಗ್ಯ-ಜೀವನಶೈಲಿ

೧೪೫ನೆ ಮ್ಯಾರಥಾನ್ ಓಡಿದ ೮೩ ವರ್ಷದ ಆಶಿಸ್ ರಾಯ್

ಅಮೇರಿಕಾ ರಾಜಧಾನಿಯಲ್ಲಿ ೩೦ ನೆ ಮ್ಯಾರಥಾನ್ ಓಟವನ್ನು ಪೂರ್ಣಗೊಳಿಸಿದ ಭಾರತ ಮೂಲದ ಅಜ್ಜ ಆಶಿಸ್ ರಾಯ್ ಅವರು ತಮ್ಮ ಜೀವಮಾನದಲ್ಲಿ ಒಟ್ಟು ೧೪೫ ಮ್ಯಾರಥಾನ್ ಓಟಗಳನ್ನು

೧೪೫ನೆ ಮ್ಯಾರಥಾನ್ ಓಡಿದ ೮೩ ವರ್ಷದ ಆಶಿಸ್ ರಾಯ್
ಆಶಿಸ್ ರಾಯ್
Published On :

ವಾಶಿಂಗ್ಟನ್: ಅಮೇರಿಕಾ ರಾಜಧಾನಿಯಲ್ಲಿ ೩೦ ನೆ ಮ್ಯಾರಥಾನ್ ಓಟವನ್ನು ಪೂರ್ಣಗೊಳಿಸಿದ ಭಾರತ ಮೂಲದ ಅಜ್ಜ ಆಶಿಸ್ ರಾಯ್ ಅವರು ತಮ್ಮ ಜೀವಮಾನದಲ್ಲಿ ಒಟ್ಟು ೧೪೫ ಮ್ಯಾರಥಾನ್ ಓಟಗಳನ್ನು ಸಂಪೂರ್ಣಗೊಳಿಸಿದ್ದಾರೆ.

ಭಾನುವಾರ ನೌಕಾ-ವಾಯುಪಡೆ ಆಯೋಜಿಸಿದ್ದ ಅರ್ಧ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ದ ಗರಿಷ್ಠ ವಯಸ್ಸಿನ ಆಶಿಸ್ ಅವರಿಗೆ ಈಗ ೮೩ ವರ್ಷ. ೧೩.೧ ಮೈಲಿ ರೇಸ್ ಅನ್ನು ೩ ಘಂಟೆ ೨೦ ನಿಮಿಷ ೧೪ ಸೆಕಂಡುಗಳಲ್ಲಿ ಪೂರೈಸಿದ್ದಾರೆ. ಜುಲೈನಲ್ಲಿ ಶಿಕಾಗೋದಲ್ಲಿ ನಡೆದ ರಾಕ್ ಎನ್ ರೋಲ್ ಅರ್ಧ ಮ್ಯಾರಥಾನ್ ಅವರು ತೆಗೆದುಕೊಂಡಿದ್ದ ಸಮಯಕ್ಕಿಂತಲೂ ಅರ್ಧಗಂಟೆ ಕಡಿಮೆ ಸಮಯದಲ್ಲಿ ಈ ಓಟವನ್ನು ಮುಗಿಸಿದ್ದಾರೆ.

ರಾಯ್ ವರ ಮಗಳು ಅಮೃತ (೪೩) ಅಮೇರಿಕಾ ರೈಲ್ವೆ ಸೇವೆಯಲ್ಲಿ ಕೆಲಸ ನಿರ್ವಹಿಸುವ ಇವರು ಕೂಡ ಮ್ಯಾರಥಾನ್ ನಲ್ಲಿ ತಂದೆಯ ಜೊತೆಗೂಡಿದ್ದಾರೆ.

ವಾಶಿಂಗ್ಟನ್ ನ ಸ್ಮಾರಕಗಳಾದ ಲಿಂಕನ್ ಸ್ಮಾರಕ, ರಾಷ್ಟ್ರೀಯ ಮಾಲ್ ಒಳಗೊಂಡಂತೆ ವಾಶಿಂಗ್ಟನ್ ನ ಪ್ರಮುಖ ಬೀದಿಗಳಲ್ಲಿ ಈ ಅಪ್ಪ ಮಗಳ ಜೋಡಿಯನ್ನು ಜನರು ಹರ್ಷೋದ್ಗಾರಗಳಿಂದ ಸ್ವಾಗತಿಸಿದರು ಎಂದು ತಿಳಿದುಬಂದಿದೆ.

ಭಾರತೀಯ ವಾಯುಪಡೆಯ ನಿವೃತ್ತ ವಿಂಗ್ ಕಮ್ಯಾಂಡರ್ ರಾಯ್ ತಮ್ಮ ೫೨ನೆಯ ವಯಸ್ಸಿನಿಂದ ಮ್ಯಾರಥಾನ್ ಗಳಲ್ಲಿ ಭಾಗವಹಿಸುತ್ತಿದ್ದಾರೆ, ನವೆಂಬರ್ ೨೦೧೧ರಲ್ಲಿ ಬೆನ್ನು ಮೂಳೆಯ ಗಾಯದಿಂದ ಅರ್ಧ ಮ್ಯಾರಥಾನ್ ಗಳನ್ನು ಓಡುತ್ತಿದ್ದಾರಂತೆ.

ತಮ್ಮ ೭೫ ನೆಯ ವಯಸ್ಸಿನಲ್ಲಿ ೮೨ ರೇಸುಗಳನ್ನು ಪೂರ್ಣಗೊಳಿಸಿದ್ದಾ ರಾಯ್, ಜನವರಿ ೨೦೧೦ರಲ್ಲಿ ೧೦೦ ನೆ ಮ್ಯಾರಥಾನ್ ಓಟವನ್ನು ಮುಗಿಸಿದ್ದರು. ಜನವರಿ ೨೦೧೩ ರಲ್ಲಿ ತಮ್ಮ ೧೧೫ ಮ್ಯಾರಥಾನ್ ನನ್ನು ಮುಂಬೈನಲ್ಲಿ ಪೂರ್ಣಗೊಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.