ಆಂಟಿಬಯೋಟಿಕ್ಸ್ ಬಳಕೆಗೆ ಭಾರತದಿಂದ ಶೀಘ್ರವೇ ಮಾರ್ಗಸೂಚಿ ಬಿಡುಗಡೆ
ಆಂಟಿಬಯೋಟಿಕ್ಸ್ ನ ದುರ್ಬಳಕೆ ತಪ್ಪಿಸುವುದಕ್ಕೆ ಭಾರತ ಶೀಘ್ರವೇ ಪ್ರತಿಜೀವಕಗಳ(ಆಂಟಿಬಯೋಟಿಕ್ಸ್) ನ ಬಳಕೆ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.

ನವದೆಹಲಿ: ಆಂಟಿಬಯೋಟಿಕ್ಸ್ ನ ದುರ್ಬಳಕೆ ತಪ್ಪಿಸುವುದಕ್ಕೆ ಭಾರತ ಶೀಘ್ರವೇ ಪ್ರತಿಜೀವಕಗಳ(ಆಂಟಿಬಯೋಟಿಕ್ಸ್) ನ ಬಳಕೆ ಮಾರ್ಗಸೂಚಿ ಬಿಡುಗಡೆ ಮಾಡಲಿದೆ.
ಹೆಚ್ಚು ಪ್ರತಿಜೀವಕಗಳ ಬಳಕೆಯಿಂದ ಉಂಟಾಗುವ ಅಪಾಯವನ್ನು ತಡೆಯಲು, ಪ್ರಮಾಣಿತ ಚಿಕಿತ್ಸೆ ಮಾರ್ಗಸೂಚಿ ಅಭಿವೃದ್ಧಿಪಡಿಸುವುದು ಅಗತ್ಯವಿದ್ದು, ಶೀಘ್ರವೇ ಭಾರತ ಅದನ್ನು ಬಿಡುಗಡೆ ಮಾಡಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕರ ಮುಖ್ಯ ವೈಜ್ಞಾನಿಕ ಸಲಹೆಗಾರ ರಾಜೇಶ್ ಭಾಟಿಯಾ ಹೇಳಿದ್ದಾರೆ.
ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ಪ್ರಾದೇಶಿಕ ಸಮಿತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ರಾಜೇಶ್ ಭಾಟಿಯಾ, ಪ್ರತಿಜೀವಕ ನಿರೋಧಕ(ಆಂಟಿಬಯೋಟಿಕ್ಸ್ ರೆಸಿಸ್ಟೆನ್ಸ್) ನಿಂದಾಗಿ 2050 ರ ವೇಳೆಗೆ ವಿಶ್ವಾದ್ಯಂತ 10 ಮಿಲಿಯನ್ ಜನರು ಸಾವನ್ನಪ್ಪುತ್ತಾರೆ ಎಂದು ಹೇಳಿದ್ದಾರೆ. ಮಾನವಕುಲದ ಪ್ರಯತ್ನಗಳಿಗೆ ಇದು ದೊಡ್ಡ ಅಪಾಯವಾಗಿದೆ ಎಂದಿದ್ದಾರೆ.
ಪ್ರತಿಜೀವಕಗಳು ಪರಿಣಾಮಕಾರಿತ್ವವನ್ನು ಕಳೆದುಕೊಳ್ಳುತ್ತಿದೆ. ಪ್ರತಿಜೀವಕ ನಿರೋಧಕ ರೋಗಿಯ ಸುರಕ್ಷತೆಗೆ ಅತಿ ದೊಡ್ಡ ಅಪಾಯವಾಗಿದೆ ಎಂದು ಹೇಳಿದ್ದಾರೆ. ಪ್ರತಿಜೀವಕ ನಿರೋಧಕ ವನ್ನು ನಿಧಾನಗೊಳಿಸಲು ಸರಿಯಾದ ಪ್ರಮಾಣದಲ್ಲಿ ಆಂಟಿಬಯೋಟಿಕ್ಸ್ ನ ಬಳಕೆ ಮುಖ್ಯವಾಗುತ್ತದೆ, ಸೂಚನೆ ಪ್ರಕಾರ ಮಾತ್ರ ಇದನ್ನು ಬಳಸಬೇಕಾಗುತ್ತದೆ, ಅದನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳುವಂತಿಲ್ಲ ಎಂದು ಭಾಟಿಯಾ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


