ಈ ಜಮಾನಾದ ಹಾಡುಗಳಲ್ಲಿ 'ಲವ್' ಇಲ್ಲ, 'ಸೆಕ್ಸ್' ಮಾತ್ರ!
ಇತ್ತೀಚಿನ ದಿನಗಳ ಜನಪ್ರಿಯ ಹಾಡುಗಳಲ್ಲಿ ಸೆಕ್ಸ್ ಎಂಬ ಶಬ್ದವನ್ನು ಹೆಚ್ಚು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತಿರುವ ಬಗ್ಗೆ ವರದಿ ಪ್ರಕಟವಾಗಿದೆ.

ನ್ಯೂಯಾರ್ಕ್: ಇತ್ತೀಚಿನ ದಿನಗಳ ಜನಪ್ರಿಯ ಹಾಡುಗಳಲ್ಲಿ ಸೆಕ್ಸ್ ಎಂಬ ಶಬ್ದವನ್ನು ಹೆಚ್ಚು ಸ್ಪಷ್ಟವಾಗಿ ಉಲ್ಲೇಖಿಸಲಾಗುತ್ತಿರುವ ಬಗ್ಗೆ ವರದಿ ಪ್ರಕಟವಾಗಿದೆ.
ಅಮೆರಿಕಾ ಮೂಲದ ಕಂಟೆಂಟ್ ಮಾರ್ಕೆಟಿಂಗ್ ಸಂಸ್ಥೆ ಫ್ರಾಕ್ಟಲ್ ಈ ಸಮೀಕ್ಷೆ ನಡೆಸಿದ್ದು 1960 ರಿಂದ ಅತಿ ಹೆಚ್ಚು ಬಾರಿ ಪ್ರಕಟಗೊಂಡ ಹಾಡುಗಳಲ್ಲಿ ಸೆಕ್ಸ್ ಎಂಬ ಪದ ಬಳಕೆ ಅತಿ ಹೆಚ್ಚಾಗಿದ್ದು 2009 ರಲ್ಲಿ 1 ,500 ಬಾರಿ ಬಳಕೆಯಾಗಿದೆ.
'ಪ್ರೀತಿ' ಪದದ ಬಳಕೆ ಗಣನೀಯವಾಗಿ ಕಡಿಮೆಯಾಗಿದೆ, ಅತಿ ಜನಪ್ರಿಯಗೊಂಡ ಹಾಡುಗಳ ಸಾಹಿತ್ಯದ ಬಗ್ಗೆ ವಿಶ್ಲೇಷಣೆ ನೀಡಿರುವ ಫ್ರಾಕ್ಟಲ್, ಪ್ರತಿ ಹಾಡಿನಲ್ಲೂ ಲವ್ ಹಾಗೂ ಸೆಕ್ಸ್ ಪದಗಳ ಬಳಕೆಯನ್ನು ಎಣಿಕೆ ಮಾಡಿ ಈ ವರದಿ ಬಹಿರಂಗಪಡಿಸಿದೆ.
ಲೈಂಗಿಕ ಪ್ರಚೋದಕ ಸಂಗೀತವನ್ನು ಮಾಡುತ್ತಿರುವ ಹೆಚ್ಚು ಕಲಾವಿದರು ಬಹುತೇಕ ರಿದಮ್ ಮತ್ತು ಬ್ಲೂಸ್ ಪ್ರಕಾರದಲ್ಲಿ ತೊಡಗಿದ್ದಾರೆ ಎಂದು ವರದಿ ತಿಳಿಸಿದೆ. ಸ್ಮಾರ್ಟ್ ಫೋನ್ ಹಾಗೂ ಎಂಪಿ 3 ಪ್ಲೇಯರ್ ಗಳ ಮೂಲಕ ಮಾಧ್ಯಮ ಬಳಕೆಯಾಗುತ್ತಿರುವುದು ಸಹ ಹಾಡುಗಳಲ್ಲಿ ಲವ್ ಇಲ್ಲ ಬರೀ ಸೆಕ್ಸ್ ಪದ ಬಳಕೆಯಾಗಲು ಕಾರಣ ಎಂದು ಹೇಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


