ಮಹತ್ವಾಕಾಂಕ್ಷಿ ಪೋಷಕರ ಒತ್ತಡದಿಂದ ಕುಗ್ಗುತ್ತದೆ ಮಕ್ಕಳ ಶೈಕ್ಷಣಿಕ ಸಾಧನೆ
ಶೈಕ್ಷಣಿಕ ವಿಷಯದಲ್ಲಿ ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರಿದಷ್ಟೂ ಮಕ್ಕಳ ಶೈಕ್ಷಣಿಕ ಸಾಧನೆ ಕುಗ್ಗುತ್ತದೆ ಎಂದು ದಿ ಯುನಿವರ್ಸಿಟಿ ಆಫ್ ರೀಡಿಂಗ್ ನಡೆಸಿರುವ ಸಂಶೋಧನೆ ಎಚ್ಚರಿಸಿದೆ.

ವಾಷಿಂಗ್ ಟನ್: ಮಕ್ಕಳು ಎಷ್ಟೇ ಒಳ್ಳೆಯ ಅಂಕ ಪಡೆದರೂ ಕೆಲವು ಪೋಷಕರಿಗೆ ಸಮಾಧಾನವೇ ಇರುವುದಿಲ್ಲ. ನೂರಕ್ಕೆ ನೂರು ಅಂಕಗಳನ್ನು ಪಡೆಯಬೇಕೆಂಬುದು ಅಂತಹ ಪೋಷಕರ ಮಹತ್ವಾಕಾಂಕ್ಷೆಯಾಗಿರುತ್ತದೆ. ಈ ಮನಸ್ಥಿತಿಯ ಪೋಷಕರಿಗೆ ಎಚ್ಚರಿಕೆ ಗಂಟೆಯಾಗಿ ಹೊಸ ಸಂಶೋಧನೆಯೊಂದು ಹೊರಬಿದ್ದಿದೆ.
ಶೈಕ್ಷಣಿಕ ವಿಷಯದಲ್ಲಿ ಮಕ್ಕಳ ಮೇಲೆ ಹೆಚ್ಚು ಒತ್ತಡ ಹೇರಿದಷ್ಟೂ ಮಕ್ಕಳ ಶೈಕ್ಷಣಿಕ ಸಾಧನೆ ಕುಗ್ಗುತ್ತದೆ ಎಂದು ದಿ ಯುನಿವರ್ಸಿಟಿ ಆಫ್ ರೀಡಿಂಗ್ ನಡೆಸಿರುವ ಸಂಶೋಧನೆ ಎಚ್ಚರಿಸಿದೆ. ಪೋಷಕರ ನಿರೀಕ್ಷೆ ವಾಸ್ತವಕ್ಕೆ ಹತ್ತಿರವಿದ್ದರೆ ಮಕ್ಕಳ ಶೈಕ್ಷಣಿಕ ಸಾಧನೆಯೂ ಉತ್ತಮವಾಗಿರುತ್ತದೆ. ಆದರೆ ಪೋಷಕರ ಒತ್ತಡ ಹೆಚ್ಚಾದಷ್ಟೂ ವಿದ್ಯಾರ್ಥಿಗಳ ಗುಣಮಟ್ಟ ಕುಗ್ಗುತ್ತದೆ ಎಂದು ಸಂಶೋಧನೆ ಎಚ್ಚರಿಸಿದೆ.
ಒಂದು ಹಂತದ ವರೆಗೆ ಪೋಷಕರ ಒತ್ತಡ ವಿದ್ಯಾರ್ಥಿಗಳ ಗುಣಮಟ್ಟ ಹೆಚ್ಚುವುದಕ್ಕೆ ಕಾರಣವಾಗುತ್ತದೆ ಆದರೆ ಒತ್ತಡ ಅತಿಯಾದರೆ ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸಂಶೋಧನಾ ತಂಡ ಅಭಿಪ್ರಾಯಪಟ್ಟಿದೆ. ಈ ಬಗೆಗಿನ ಅಧ್ಯಯನ ವರದಿ ಪರ್ಸನಾಲಿಟಿ ಅಂಡ್ ಸೋಶಿಯಲ್ ಸೈಕಾಲಜಿಗೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


