ಆರೋಗ್ಯ-ಜೀವನಶೈಲಿ

ಮಕ್ಕಳ ಆಹಾರ: ಕೆಟ್ಟದ್ದನ್ನು ತಿನ್ನಬೇಡಿ ಎನ್ನುವುದಕಿಂತ ಒಳ್ಳೆಯದನ್ನು ತಿನ್ನಿ ಎಂದು ಹೇಳುವುದು ಉಚಿತ

ನಿಮ್ಮ ಮಕ್ಕಳಲ್ಲಿ ಒಳ್ಳೆಯ ಆಹಾರ ಪದ್ಧತಿ ಮೂಡಿಸಬೇಕೆಂದಿದ್ದರೆ, ಅವರಿಗೆ ಇಂತಹ ಆಹಾರವನ್ನು ಸೇವಿಸಬಾರದು ಎನ್ನುವುದಕ್ಕಿಂತ...

ಮಕ್ಕಳ ಆಹಾರ: ಕೆಟ್ಟದ್ದನ್ನು ತಿನ್ನಬೇಡಿ ಎನ್ನುವುದಕಿಂತ ಒಳ್ಳೆಯದನ್ನು ತಿನ್ನಿ ಎಂದು ಹೇಳುವುದು ಉಚಿತ
ಸಾಂದರ್ಭಿಕ ಚಿತ್ರ
Published On :

ನ್ಯೂಯಾರ್ಕ್: ನಿಮ್ಮ ಮಕ್ಕಳಲ್ಲಿ ಒಳ್ಳೆಯ ಆಹಾರ ಪದ್ಧತಿ ಮೂಡಿಸಬೇಕೆಂದಿದ್ದರೆ, ಅವರಿಗೆ ಇಂತಹ ಆಹಾರವನ್ನು ಸೇವಿಸಬಾರದು ಎನ್ನುವುದಕ್ಕಿಂತ ಯಾವುದನ್ನು ತಿಂದರೆ ಒಳ್ಳೆಯದು ಎಂದು ಹೇಳಿ ಎಂದು ಹೊಸ ಅಧ್ಯಯನ ಸಲಹೆ ನೀಡಿದೆ.

"ನಿಮ್ಮ ಮಕ್ಕಳಿಗೆ ಕುಕ್ಕಿಗಳನ್ನು ತಿನ್ನಬೇಡಿ ಏಕೆಂದರೆ ದಪ್ಪಗಾಗುತ್ತೀರಿ ಎನ್ನುವುದಕಿಂತ ಸೇಬು ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿಸಿ. 'ನಿಷೇಧದ' ಸಂದೇಶಗಳು ನಮ್ಮಲ್ಲಿ ಬಹುತೇಕರಿಗೆ ಒಳ್ಳೆಯ ಪರಿಣಾಮ ಉಂಟು ಮಾಡುವುದಿಲ್ಲ" ಎಂದು ಕಾರ್ನೆಲ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

ಯಾವುದನ್ನು ತಿನ್ನಬಾರದು ಎಂಬುವುದಕ್ಕಿಂತ ಯಾವುದನ್ನು ತಿನ್ನಬೇಕು ಎಂಬುದರ ಮೇಲೆ ಗಮನ ಕೇಂದ್ರೀಕರಿಸುವುದು ಒಳಿತು ಎಂಬುದು ಈ ಅಧ್ಯಯನದ ತಿರುಳು. ಅಂದರೆ ಅನಾರೋಗ್ಯಕರ ತಿಂಡಿಗಳನ್ನು ಸೇವಿಸುವುದರಿಂದಾಗುವ ತೊಂದರೆಗಳನ್ನು ಪಟ್ಟಿ ಮಾಡುವುದಕ್ಕಿಂತ ಆರೋಗ್ಯಕರ ಆಹಾರ ಸೇವಿಸುವುದರ ಮಹತ್ವವನ್ನು ತಿಳಿಸುವುದು ಹೆಚ್ಚು ಪರಿಣಾಮಕಾರಿ ಎಂದಿದೆ.

"ನೀವು ಪೋಷಕರಾಗಿದ್ದರೆ ಹ್ಯಾಂಬರ್ಗರ್ ಗಳಿಂದಾಗುವ ಅನಾಹುತಗಳಿಗಿಂತ ಬ್ರಾಕ್ಕೊಲಿಯಿಂದಾಗುವು ಒಳ್ಳೆಯ ಪರಿಣಾಮಗಳ ಮೇಲೆ ಗಮನ ಹರಿಸುವುದೊಳಿತು" ಎಂದು ಕಾರ್ನೆಲ್ ಆಹಾರ ಮತ್ತು ಬ್ರಾಂಡ್ ಲ್ಯಾಬ್ ನ ನಿರ್ದೇಶಕ ಹಾಗೂ ಈ ಅಧ್ಯನದ ಪ್ರಧಾನ ಲೇಖಕ ತಿಳಿಸಿದ್ದಾರೆ.

ಋಣಾತ್ಮಕ ಮತ್ತು ಧನಾತ್ಮಕ ಪೌಷ್ಟಿಕ ಆಹಾರ ಸಂದೇಶಗಳನ್ನೊಳಗೊಂಡ ೪೩ ಪ್ರಕಟನಾ ಅಂತರಾಷ್ಟ್ರೀಯ ಅಧ್ಯಯನಗಳನ್ನು ಪರಿಶೀಲಿಸಿರುವ ಈ ಸಂಶೋಧಕರು ಮೇಲಿನ ಸಲಹೆ ನೀಡಿದ್ದಾರೆ.

ಋಣಾತ್ಮಕ ಸಂದೇಶಗಳು ಪ್ರಾವಿಣ್ಯತೆ ಹೊಂದಿರುವವರ ಜೊತೆ ಕೆಲಸ ಮಾಡುತ್ತದೆ. ಉದಾಹರಣಗೆ ವೈದ್ಯರು. ಬಹಳಷ್ಟು ಜನಕ್ಕೆ ಪೌಷ್ಟಿಕತೆಯ ಬಗ್ಗೆ ತಿಳಿದಿರುವುದಿಲ್ಲವಾದ್ದರಿಂದ ಧನಾತ್ಮಕ ಸಂದೇಶಗಳು ಉಳಿದವರಿಗೆ ಕೆಲಸ ಮಾಡುತ್ತವೆ ಎಂದಿದ್ದಾರೆ.

ಸಾರ್ವಜನಿಕ ಆರೋಗ್ಯ ಸಂದೇಶಗಳನ್ನು ಬಿತ್ತರಿಸುವಾಗ ಪೌಷ್ಟಿಕತೆಯ ಸಂದೇಶಗಳನ್ನೊಳಗೊಂಡ ಧನಾತ್ಮಕ ಅಂಶಗಳನ್ನು ಜನರಿಗೆ ತೋರಿಸಬೇಕು ಎಂದಿದ್ದಾರೆ ಸಂಶೋಧಕರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.